-->
Wife treated as Call Girl | ಗಂಟೆಗೆ 3 ಸಾವಿರ, ಕಾಲ್ ಗರ್ಲ್: ಪತ್ನಿಯ ಖಾಸಗಿ ಫೋಟೋ ಶೇರ್ ಮಾಡಿದ ಪ್ರೊಫೆಸರ್ ಪತಿರಾಯ!

Wife treated as Call Girl | ಗಂಟೆಗೆ 3 ಸಾವಿರ, ಕಾಲ್ ಗರ್ಲ್: ಪತ್ನಿಯ ಖಾಸಗಿ ಫೋಟೋ ಶೇರ್ ಮಾಡಿದ ಪ್ರೊಫೆಸರ್ ಪತಿರಾಯ!

ಪತ್ನಿಯ ಜೊತೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಲ್ಲದೆ, ಈಕೆಯನ್ನು ಕಾಲ್ ಗರ್ಲ್‌ ಎಂದು ಬಿಂಬಿಸಿ ಗಂಟೆಗೆ 3 ಸಾವಿರ ರೇಟ್ ಕಟ್ಟಿದ ಪತಿರಾಯ... ಇದು ಆಂಧ್ರದ ತಿರುಪತಿಯಲ್ಲಿ ಒಬ್ಬ ವಿಕೃತ ಪತಿರಾಯನ ಮಹತ್ಕಾರ್ಯ.ತನ್ನ ಪತ್ನಿಗೆ ಈತ ಮದುವೆಯಾದ ದಿನದಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಈತನ ಕಿರುಕುಳ, ಉಪದ್ರ ತಾಳಲಾರದೆ ಪತಿಯನ್ನು ತೊರೆದು ತವರು ಮನೆ ಸೇರಿದ್ದಳು. ಇದೀಗ ಪತಿಯ ಈ ರೀತಿಯ ದುರ್ವರ್ತನೆಯನ್ನು ಕಂಡು ಆಕೆ ಆಘಾತಕ್ಕೊಳಗಾಗಿದ್ದಾಳೆ. ಅಲ್ಲದೆ, ಪತಿಯ ವಿರುದ್ಧ ತನ್ನ ಕುಟುಂಬಸ್ಥರ ಜೊತೆ ಸ್ಥಳೀಯ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾಳೆ.ಆರೋಪಿ ತಿರುಪತಿಯ ಸ್ಥಳೀಯ ಕಾಲೇಜೊಂದರಲ್ಲಿ ಜೂನಿಯರ್ ಅಸಿಸ್ಟೆಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಕಳೆದ ಆಗಸ್ಟ್‌ ತಿಂಗಳಿನಲ್ಲಿ ಈ ಯುವತಿ ಜೊತೆ ಮದುವೆಯಾಗಿದ್ದ ಆರೋಪಿ, ಮದುವೆಯಾದ ದಿನದಿಂದಲೇ ಈಕೆಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದ್ದ.ಮದುವೆಯಾದ ನಂತರ ಗರ್ಭಿಣಿಯಾಗಿದ್ದ ಪತ್ನಿಗೆ ಹಲ್ಲೆಯನ್ನೂ ನಡೆಸಿದ್ದ ಈ ಮಹಾಶಯ. ಇದರಿಂದ ಆಕೆಗೆ ಗರ್ಭಪಾತವಾಗಿತ್ತು.ಬಳಿಕ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಈತನ ಹಿಂಸೆಯಿಂದಲೇ ಆಕೆ ತನ್ನ ತವರು ಸೇರಿದ್ದಳು. ಇದೀಗ ಆಕೆಯ 20 ಲಕ್ಷ ರೂ. ಬೆಲೆಬಾಳುವ ಚಿನ್ನ ಮತ್ತು ನಗದು ಕದ್ದಿರುವುದಾಗಿ ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.ಈ ಎಲ್ಲ ಘಟನೆಗಳ ನಡುವೆ, ಕಾಲೇಜು ವಾಟ್ಸ್ಆಪ್ ಗ್ರೂಪ್‌ನಲ್ಲಿ ತನ್ನ ಪತ್ನಿ ಫೋಟೋ ಶೇರ್ ಮಾಡಿದ್ದ ಈತ ಈಕೆ ಕಾಲ್ ಗರ್ಲ್‌ ಎಂಬ ಅಡಿಬರಹ ನೀಡಿದ್ದ. ಮಾತ್ರವಲ್ಲದೆ, ಈಕೆಗೆ ಗಂಟೆಗೆ 3000/- ರೂ. ಬೆಲೆ ಎಂದು ಬರೆದುಕೊಂಡಿದ್ದ.

ಆರೋಪಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಹಿಂಸೆ ಪ್ರಕರಣ ದಾಖಲಾಗಿದೆ.


Ads on article

Advertise in articles 1

advertising articles 2

Advertise under the article