Vi network failure | ನೆಟ್‌ವರ್ಕ್ ಇಲ್ಲ, ಫೋನ್ ಕಾಲ್‌ ಇಲ್ಲ: ಮಂಗಳೂರು ಗ್ರಾಹಕರಿಗೆ ಕೈಕೊಟ್ಟ ಐಡಿಯಾ-ವೊಡಾಫೋನ್!






ವೊಡಾಫೋನ್-ಐಡಿಯಾ ಈಗ ಬದಲಾಗಿದೆ. Vi ಆಗಿ ಉತ್ತಮ ಗುಣಮಟ್ಟದ ಮೊಬೈಲ್ ನೆಟ್‌ವರ್ಕ್ ಸೇವೆ ಸಿಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಇದಕ್ಕೆ ತದ್ವಿರುದ್ಧವಾಗಿ ವಿಐ ಯಾನೆ ವೊಡಾಫೋನ್ ಐಡಿಯಾ ತನ್ನ ಮಂಗಳೂರು ಗ್ರಾಹಕರಿಗೆ ಕೈಕೊಟ್ಟಿದೆ.


ಬೆಳಿಗ್ಗಿನಿಂದ ಸಂಜೆವರೆಗೆ ನೆಟ್‌ವರ್ಕ್ ಇಲ್ಲದೆ ವೊಡಾಫೋನ್ ಐಡಿಯಾ ಗ್ರಾಹಕರು ಪರದಾಡಬೇಕಾಯಿತು.


ಈ ಬಗ್ಗೆ ದೂರು ಕೊಡಲು ಗ್ರಾಹಕ ಸೇವಾ ಕೇಂದ್ರಕ್ಕೆ ಹೋದರೆ ಸಿಬ್ಬಂದಿ ಅವರನ್ನು ಸಮಾಧಾನಪಡಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. 


ಸಿಗ್ನಲ್ ಹಾಳಾಗಿದೆ, ಟವರ್ ಕೆಟ್ಟುಹೋಗಿದೆ, ಸರ್ವರ್ ಬ್ಲಾಸ್ಟ್ ಆಗಿದೆ, ನಮ್ಮ ಟೆಕ್ನೀಶಿಯನ್ ಫೀಲ್ಡ್‌ನಲ್ಲಿ ಇದ್ದಾರೆ... ಇನ್ನೇನು ಒಂದೆರಡು ಗಂಟೆಗಳಲ್ಲಿ ಎಲ್ಲ ಸಮಸ್ಯೆ ಸರಿಯಾಗುತ್ತದೆ ಎಂದು ತಮ್ಮ ಗ್ರಾಹಕರನ್ನು ಸಾಗ ಹಾಕಿ ಕಳಿಸಿಕೊಟ್ಟರು.

ಆದರೆ, ಸಂಜೆವರೆಗೂ Vi ವೊಡಾಫೋನ್-ಐಡಿಯಾ ನೆಟ್‌ವರ್ಕ್‌ಗೆ ಹೊಡೆದ ಲಕ್ವ ಸರಿಯಾಗಲೇ ಇಲ್ಲ. ಇಡೀ ದಿನ ಗ್ರಾಹಕರು ತಮ್ಮ ಮೊಬೈಲ್‌ನಲ್ಲಿ ನೆಟ್‌ವರ್ಕ್‌ ಇಲ್ಲದೆ ಸಂಕಷ್ಟಕ್ಕೊಳಗಾದರು.



ಇಡೀ ದಿನ ವಾಟ್ಸ್‌ಆಪ್, ಫೇಸ್‌ಬುಕ್ ನಿಂದ ಬಲವಂತದ ಕರ್ಫ್ಯೂ ಎದುರಿಸಬೇಕಾಯಿತು. ಅಷ್ಟೇ ಏಕೆ, ಮೊಬೈಲ್‌ನಿಂದ ಕರೆ ಮಾಡಲೂ ಸಮಸ್ಯೆ ಎದುರಿಸಬೇಕಾಯಿತು.