-->

ಮಂಗಳೂರಿನಲ್ಲಿ 'ಬಿಂದು' ಜ್ಯುವೆಲ್ಲರಿ ನೂತನ ಮಳಿಗೆ ಶುಭಾರಂಭ

ಮಂಗಳೂರಿನಲ್ಲಿ 'ಬಿಂದು' ಜ್ಯುವೆಲ್ಲರಿ ನೂತನ ಮಳಿಗೆ ಶುಭಾರಂಭ

ಬಿಂದು ಜ್ಯುವೆಲ್ಲರಿ

ಮಂಗಳೂರಿನಲ್ಲಿ 'ಬಿಂದು' ಜ್ಯುವೆಲ್ಲರಿ ನೂತನ ಮಳಿಗೆ ಶುಭಾರಂಭ.

ಬಿಂದು ಕರ್ನಾಟಕದ ಎರಡನೇ ಶೋರೂಂ; ಸುಳ್ಯದ ಬಳಿಕ ಮಂಗಳೂರಿನ ಬೆಂದೂರ್‌ನಲ್ಲಿ ಮಂಗಳೂರು ಬೆಂದೂರ್‌ ಎಸ್ ಸಿಎಸ್ ಆಸ್ಪತ್ರೆ ಬಳಿ ಶೋರೂಂ ' ಉದ್ಘಾಟನೆ

ಮಂಗಳೂರು, ಆ.19: ಚಿನ್ನಾಭರಣ ಕ್ಷೇತ್ರದಲ್ಲಿ ನಲವತ್ತು ವರ್ಷಗಳಿಂದ ಪ್ರಸಿದ್ಧಿಯಾಗಿ ಕೇರಳದ ಜನರ ಮನೆಮಾತಾಗಿರುವ ಬಿಂದು ಜ್ಯುವೆಲ್ಲರಿಯ ಯನ್ನು ರಾಮಕೃಷ್ಣ ಆಶ್ರಮದ ಸ್ವಾಮಿ ಯುಗೇಶನಾಂದ ಸ್ವಾಮೀಜಿ, ಶಾಸಕ ವೇದವ್ಯಾಸ ಕಾಮತ್, ಯು.ಟಿ. ಇಫ್ತಿಕಾರ್ ಫರೀದ್, ಕೆನರಾ ಚೇಂಬರ್ ಅಧ್ಯಕ್ಷ.ಪಿ . ಬಿ. ಅಹಮದ್ ಮುದಸರ್, ಪಾಲುದಾರರಾದ ಶೋಭನ, ಅವರು ದೀಪ ಬೆಳಗುವ ಮೂಲಕ ಉದ್ಘಾಟನೆ ಗೊಂಡಿದೆ. ದಕ್ಷಿಣ ಭಾರತದ ಪ್ರಖ್ಯಾತ ನಟಿ ಸ್ನೇಹ ಪ್ರಸನ್ನ ಅವರು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ ನಾನು ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ್ದೇನೆ. ನಾನೋರ್ವ ಮಹಿಳಾ ಉದ್ಯಮಿ ಆಗಿದ್ದು 20ವರ್ಷಗಳಿಂದ ಅತ್ಯುತ್ತಮ ಕಾರ್ಯ ನಿರ್ವಹಿಸುವ ಬಿಂದು ಜ್ಯುವೆಲ್ಲರಿಯ ಬಗ್ಗೆ ಹೆಮ್ಮೆ ಅನಿಸುತ್ತಿದೆ. ಎಲ್ಲಕಿಂತ ಮುಖ್ಯವಾಗಿ ಬಿಂದು ಜ್ಯುವೆಲರಿ ಸಂಸ್ಥೆಯಲ್ಲಿ ಹಲವು ವರ್ಷಗಳಿಂದ ಜನರಿಗೆ ಸೇವೆ ನೀಡಿರುವ ಬಗ್ಗೆ ಅಭಿಮಾನವಿದೆ. ಬಿಂದು ಸಂಸ್ಥೆಯ ಚಿನ್ನಾಭರಣಗಳ ಸಂಗ್ರಹ ಅದ್ಭುತವಾಗಿದೆ. ಸಂಸ್ಥೆಯನ್ನು ನಾನು ವೈಯಕ್ತಿಕವಾಗಿ ಅಭಿನಂದಿಸುತ್ತೇನೆ ಅಲ್ಲದೆ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಆಗಲಿ ಎಂದು ಶುಭ ಹಾರೈಸಿದರು. ಇದೆ ವೇಳೆ ಬಿಂದು ಸಂಸ್ಥೆಯ ಉತ್ಪನ್ನಗಳಾದ 'ಮೈ ಬ್ಲೂ ಡೈಮಂಡ್' ಹಾಗೂ 'ಸ್ವರ್ಣ ಬಿಂದು ಸಿಎಸ್ ಆರ್* ಎಂಬ ಲೋಗೋ ವನ್ನು ನಟಿ ಸ್ನೇಹ ಪ್ರಸನ್ನ ಅವರು ಬಿಡುಗಡೆ ಗೊಳಿಸಿದರು. ಇದೆ ಸಂಧರ್ಭ ಬಿಂದು ಜ್ಯುವೆಲ್ಲರಿಯ ಸಂಸ್ಥೆಯ ಮಾಲಕರಾದ ಅಭಿಲಾಷ್ ಕೆ.ವಿ. ಹಾಗೂ ಡಾ|ಅಜಿತೇಶ್ ಕೆ.ವಿ , ಮತ್ತು ಕುಟುಂಬ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ನಟರಾದ ಶೋಧನ್ ಶೆಟ್ಟಿ,ಅನೀಶ್,ಉಪಸ್ಥಿತರಿದ್ದರು. ಶಾಸಕ ಡಾ.ಭರತ್ ಶೆಟ್ಟಿ ಸಹಿತ ಹಲವು ಮಂದಿ ಗಣ್ಯಾತಿ ಗಣ್ಯರು ಆಗಮಿಸಿ ಸಂಸ್ಥೆಗೆ ಶುಭ ಕೋರಿದರು.ನೂತನ ಶೋರೂಂ ನಲ್ಲಿ 'ಲೈಟ್ ವೈಟ್ ಜ್ಯುವೆಲ್ಲರಿ' ಎಂಬ ಬ್ರಾಂಡ್ ಬಿಂದು ಜ್ಯುವೆಲ್ಲರಿ ಮೂಲಕ ದೊರೆಯಲಿದೆ. ಡೈಮಂಡ್ ವಿಭಾಗದಲ್ಲಿ ಅತ್ಯಾಧುನಿಕ ಹಾಗೂ ನವನವೀನ ಆಭರಣಗಳ ಸಂಗ್ರಹ ಮಂಗಳೂರು ಶಾಖೆಯಲ್ಲಿ ದೊರೆಯಲಿದೆ.

ಬಿಂದು ಜ್ಯುವೆಲ್ಲರಿ-ಶುದ್ಧತೆ, ಶ್ರೇಷ್ಠತೆಯ ಸಂಕೇತ

ಶುದ್ದತೆ, ಶ್ರೇಷ್ಠತೆ ಹಾಗೂ ನಂಬಿಕೆಯ ವಾಗ್ದಾನದೊಂದಿಗೆ ಬಿಂದು ಜ್ಯುವೆಲ್ಲರಿ ಕೇರಳ, ಕರ್ನಾಟಕದಲ್ಲಿ ಒಂದು ಭವ್ಯ ಪರಂಪರೆಯನ್ನು ಹುಟ್ಟುಹಾಕಿದೆ. ಕಲೆ, ನೈಪುಣ್ಯ ಹಾಗೂ ನಂಬಿಕೆಯ ಪಯಣದಲ್ಲಿ ಬಿಂದು ಸಹಸ್ರ ಸಂಖ್ಯೆಯ ಜನರ ಕತೆಯಾಗಿದೆ. ಗ್ರಾಹಕರು ಹಾಗೂ ಹಿತೈಷಿಗಳ ಬಂಧ ನಮಗೆ ಹೆಚ್ಚು ಶಕ್ತಿ ಒದಗಿಸಿದೆ. ಇದೇ ಕಾರಣದಿಂದ ಪ್ರಗತಿ ಹಾಗೂ ಪರಂಪರೆಯೊಂದಿಗೆ ಬೆಳೆಯುತ್ತಿರುವ ವಾಣಿಜ್ಯ ನಗರ ಮಂಗಳೂರಿನಲ್ಲಿ ಆಗಮಿಸಿದೆ. ಸಂಸ್ಕೃತಿ ಹಾಗೂ ವ್ಯಾಪಾರವನ್ನು ಒಟ್ಟಾಗಿ ಬೆಸೆದಿರುವ ಬಿಂದು ಸಂಸ್ಥೆಯು ತನ್ನ ಕಲಾತ್ಮಕ ಪರಂಪರೆ, ವೈವಿಧ್ಯಮಯ ವಿನ್ಯಾಸಗಳು ಹಾಗೂ ನಂಬಿಕೆಯ ವಾಗ್ದಾನದೊಂದಿಗೆ ಗ್ರಾಹಕರ ಬಳಿಗೆ ಬರುತ್ತಿದೆ ಎಂದು ಮಾಲಕರಾದ ಅಭಿಲಾಷ್ ಕೆ.ವಿ. ಅಭಿಪ್ರಾಯ ವ್ಯಕ್ತ ಪಡಿಸಿದರು. ಕೇರಳದಲ್ಲಿ ಜನಪ್ರಿಯವಾಗಿರುವ ನಮ್ಮ ಸಂಸ್ಥೆಯು ಕೆಲವು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಶಾಖೆ ಆರಂಭಿಸಿ ಕರ್ನಾಟಕದಲ್ಲಿ ಚಿನ್ನಾಭರಣ ಮಳಿಗೆಯನ್ನು ಪ್ರಾರಂಭಿಸಿತ್ತು. ಇದೀಗ ಮಂಗಳೂರಿನಲ್ಲಿ ಬಹು ನಿರೀಕ್ಷಿತ ಮಳಿಗೆ ಆರಂಭಿಸಿದೆ ಎಂದರು. ಈ ನೂತನ ಶಾಖೆಯಲ್ಲಿ ವಜ್ರ ಹಾಗೂ ಚಿನ್ನಾಭರಣಗಳಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದರು.

'ಬಿಂದು ಜುವೆಲ್ಲರಿಯಿಂದ 'ಅಕ್ಷಯ ನಿಧಿ' ಮತ್ತು 'ಸ್ವರ್ಣ ಬಿಂದು' ಮಾಸಿಕ ಉಳಿತಾಯ ಯೋಜನೆಯನ್ನು ಮಂಗಳೂರಿನಲ್ಲಿಯೂ ಪರಿಚಯಿಸಿದೆ. ಈ ಯೋಜನೆ ಮೂಲಕ ಗ್ರಾಹಕರು ಬೋನಸ್ ಮತ್ತು ಇತರ ಲಾಭಗಳನ್ನು ಸಹ ಪಡೆಯಬಹುದು ಎಂದು ಮಾಲಕರಾದ ಅಭಿಲಾಷ್ ಕೆ.ವಿ. ಅಭಿಪ್ರಾಯ ವ್ಯಕ್ತ ಪಡಿಸಿದರು.

1981ರಿಂದ ಪಯಣ ಆರಂಭ

ಜುವೆಲ್ಲರಿ ಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಸಂಸ್ಥೆಯು ಗ್ರಾಹಕರ ಜತೆ ದೀರ್ಘಾವಧಿಯ ಸಂಪರ್ಕವನ್ನು ಹೊಂದಿದೆ. 1981ರಲ್ಲಿ ಸಂಸ್ಥಾಪಕ ಕೆ.ವಿ. ಕುಂಡ್‌ಕನ್ನನ್ ಪಯಣ ಅವರಿಂದ ಆರಂಭಗೊಂಡಿತ್ತು. ಇದೀಗ ಕರ್ನಾಟಕ ಮತ್ತು ಕೇರಳದ ಗ್ರಾಹಕರಿಗೆ ಚಿನ್ನದ ಪರಿಶುದ್ಧತೆಯ ಬದ್ಧತೆಯೊಂದಿಗೆ ನವನವೀನ ವಿನ್ಯಾಸವನ್ನು ಒದಗಿಸುವ ಮೂಲಕ ಅವರ ವಿಶ್ವಾಸವನ್ನು ಗಳಿಸಿದೆ. ತಂದೆ ಆರಂಭಿಸಿದ ಈ ಚಿನ್ನಾಭರಣದ ಉದ್ದಿಮೆಯನ್ನು ಇದೀಗ ಮಕ್ಕಳು ಮುಂದುವರಿಸಿಕೊಂಡು ಬಂದಿದ್ದಾರೆ. ಇದೆ ಸಂಧರ್ಭ ಬಿಂದು ಜ್ಯುವೆಲ್ಲರಿ ಹಿರಿಯ ವ್ಯವಸ್ಥಾಪಕ ಸುನಿಲ್ ರಾಜ್ ಶೆಟ್ಟಿ ಪ್ರಮುಖರಾದ ಸಂತೋಷ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article