-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಂಗಳೂರಿಗೂ ಉದ್ಯಮ ವಿಸ್ತರಿಸಿದ ರೆಸ್ಟೊಲೆಕ್ಸ್, ನೋವಾ ಸ್ಲೀಪ್ ಕಂಫರ್ಟ್ಸ್ ಸಹಭಾಗಿತ್ವದಲ್ಲಿ ನೂತನ ಮಳಿಗೆ ಶುಭಾರಂಭ

ಮಂಗಳೂರಿಗೂ ಉದ್ಯಮ ವಿಸ್ತರಿಸಿದ ರೆಸ್ಟೊಲೆಕ್ಸ್, ನೋವಾ ಸ್ಲೀಪ್ ಕಂಫರ್ಟ್ಸ್ ಸಹಭಾಗಿತ್ವದಲ್ಲಿ ನೂತನ ಮಳಿಗೆ ಶುಭಾರಂಭ


ಮಂಗಳೂರು: ಸ್ಪ್ರಿಂಗ್, ಕಾಯಿರ್ ಮತ್ತು ಫೋಮ್ ಹಾಸಿಗೆಗಳ ಉತ್ಕೃಷ್ಟ ಶ್ರೇಣಿಗೆ ಹೆಸರುವಾಸಿಯಾದ ಪ್ರಮುಖ ಹಾಸಿಗೆ ಬ್ರಾಂಡ್ ರೆಸ್ಟೊಲೆಕ್ಸ್, ಮಂಗಳೂರಿನ ಬಲ್ಲಾಳ್‌ ಬಾಗ್‌ನಲ್ಲಿ ತನ್ನ ಹೊಸ ವಿಶೇಷ ಫ್ರಾಂಚೈಸಿ ಮಳಿಗೆಗೆ ಶುಕ್ರವಾರ ಚಾಲನೆ ನೀಡಿದೆ. ನೋವಾ ಸೇಲ್ಸ್ ಸ್ಟೀಪ್ ಕಂಫರ್ಟ್ಸ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಮಳಿಗೆಯು ಈ ಪ್ರದೇಶದ ಗ್ರಾಹಕರಿಗೆ ಗುಣಮಟ್ಟದ ನಿದ್ರೆಗೆ ಅಗತ್ಯ ಪರಿಕರಗಳನ್ನು ಒದಗಿಸಲಿದೆ ಎಂದು ಸಂಸ್ಥೆಯ ಪಾಲುದಾರರಾದ ವಿಜಯ ಕಾಮತ್‌ ಹೇಳಿದರು.

850 ಚದರ ಅಡಿ ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಮಳಿಗೆಯು ರೆಸ್ಟೊಲೆಕ್ಸ್ ನ ಸಂಪೂರ್ಣ ಶ್ರೇಣಿಯ ಕೊಡುಗೆಗಳನ್ನು ಒಳಗೊಂಡಿದೆ. ಇದರಲ್ಲಿ ಹಾಸಿಗೆಗಳು, ದಿಂಬುಗಳು, ಬೆಡ್‌ಶೀಟ್‌ಗಳು, ಕಂಫರ್ಟ‌ರ್‌ ಗಳು, ಹಾಸಿಗೆ ಕವರ್‌ಗಳು, ದಿಂಬು ಮತ್ತಿತರ ಉತ್ಪನ್ನಗಳು ಸೇರಿವೆ. ರೆಸ್ಟೊಲೆಕ್ಸ್ ಕಾಯಿರ್ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರಾದ ಡೇವಿಡ್ ಕುರುವಿಲ್ಲಾ ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. 


ಬಳಿಕ ಮಾತಾಡಿದ ಅವರು, ʻರೆಸ್ಟೊಲೆಕ್ಸ್ ನಾಲ್ಕು ದಶಕಗಳಿಂದ ಗ್ರಾಹಕರ ಅನುಭವಗಳನ್ನು ಹೆಚ್ಚಿಸುವುದು ಮತ್ತು ಸೂಕ್ತ ಆಯ್ಕೆಗಳನ್ನು ಬೆಂಬಲಿಸುವತ್ತ ಗಮನಹರಿಸಿದೆ. ಮಂಗಳೂರಿನಲ್ಲಿರುವ ಈ ಹೊಸ ಫ್ರಾಂಚೈಸಿ ಮಳಿಗೆಯು ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸಲಿದೆ' ಎಂದರು, ರೆಸ್ಟೊಲೆಕ್ಸ್ ಸಿಇಒ ಸುರೇಶ್ ಬಾಬು ಉಪಸ್ಥಿತರಿದ್ದರು.


ರೆಸ್ಟೊಲೆಕ್ಸ್ ಪ್ರಸ್ತುತ ಭಾರತದಾದ್ಯಂತ 85 ಮಳಿಗೆಗಳನ್ನು, ದೇಶಾದ್ಯಂತ 3,500 ಅಧಿಕೃತ ವಿತರಕರನ್ನು ಮತ್ತು ಕರ್ನಾಟಕದಲ್ಲಿ 1,100 ಅಧಿಕೃತ ವಿತರಕರನ್ನು ಹೊಂದಿದ್ದು ಮಂಗಳೂರಿನಲ್ಲಿ ಗ್ರಾಹಕರಿಗೆ ಬೇಡಿಕೆಗೆ ತಕ್ಕಂತೆ ನವನವೀನ ಮಾದರಿಯ ಹಾಸಿಗೆಗಳ ಶ್ರೇಣಿಗಳನ್ನು ಪೂರೈಸಲು ಸಜ್ಜಾಗಿದೆ.

Ads on article

Advertise in articles 1

advertising articles 2

Advertise under the article