ಪುತ್ತೂರಿನಲ್ಲಿ ಗುಡ್ಡಕ್ಕೆ ಕರೆದುಕೊಂಡು ಹೋಗಿ ಅಪ್ರಾಪ್ತ ಯುವತಿಯ ಅ.ತ್ಯಾಚಾರ

 





ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಗುಡ್ಡಕ್ಕೆ ಕರೆಸಿಕೊಂಡು ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ಆರೋಪಿ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ಸಂತ್ರಸ್ತ ಬಾಲಕಿ ತನ್ನ ತಾಯಿ ಹಾಗೂ ತಂಗಿಯೊಂದಿಗೆ ಸುಮಾರು 2 ತಿಂಗಳ ಹಿಂದೆ ಪುತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯದಲ್ಲಿದ್ದರು.  2025 ನೇ ಮಾರ್ಚ್ನಿಂದ ಸಂತ್ರಸ್ತೆ ತನ್ನ ತಾಯಿಯ ಮೊಬೈಲ್ನಿಂದ ಒಬ್ಬನಿಗೆ ಫೋನ್ಕರೆ ಮಾಡಿ ಮಾತನಾಡುತ್ತಿದ್ದಳು. ಈತ ಒಂದು ದಿನ ಬಾಲಕಿಯನ್ನು ಭೇಟಿಯಾಗಲು ರೈಲ್ವೇ ಟ್ರಾಕ್ಬಳಿ ಗುಡ್ಡ ಪ್ರದೇಶಕ್ಕೆ ಬರುವಂತೆ ತಿಳಿಸಿದ್ದನು.  ಬಾಲಕಿ ಆತ ತಿಳಿಸಿದ ಗುಡ್ಡಕ್ಕೆ  ಬಂದಾಗ  ಬಲವಂತದಿಂದ ಅತ್ಯಾಚಾರ ಮಾಡಿದ್ದನು. ಬಳಿಕವೂ ಆರೋಪಿ ಗುಡ್ಡ ಪ್ರದೇಶಕ್ಕೆ ಬರುವಂತೆ ಹೇಳಿ ಅನೇಕ ಬಾರಿ ಅತ್ಯಾಚಾರ ಮಾಡಿದ್ದನು. ಬಗ್ಗೆ  ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ . ಮಹಿಳಾ ಪೊಲೀಸ್ಠಾಣೆ.  .ಕ್ರ: 63/2025 ಕಲಂ64(2) (ಎಮ್‌), 351(3)  BNS 2023 & ಕಲಂ 5(ಎಲ್‌) ಜೊತೆಗೆ 6, POCSO Act  ಹಾಗೂ ಇತರ ಕಲಂ ನಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

   ಪ್ರಕರಣದ ಆರೋಪಿಯನ್ನು ಬಂಧಿಸಿ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು  ನ್ಯಾಯಲಯವು ಸೆಪ್ಟೆಂಬರ್ 9 ವರೆಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.