ರೈಲು ಕೋಚ್‌ನಲ್ಲೇ ಮೂವರಿಂದ ಗ್ಯಾಂಗ್‌ರೇಪ್- ಮಹಿಳೆಯ ಹಳಿಯಲ್ಲಿ ಬಿಸಾಡಿ ಹೋದ ಕಾಮುಕರು
ಪತಿಯೊಂದಿಗೆ ಜಗಳವಾಡಿ ಮನೆ ಬಿಟ್ಟು ಬಂದಿದ್ದ ಮಹಿಳೆಯ ಮೇಲೆ ರೈಲ್ವೆ ನಿಲ್ದಾಣದಲ್ಲಿ ಮೂವರು ಅಪರಿಚಿತರು ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ರೈಲು ಹಳಿ ಮೇಲೆ ಬಿಟ್ಟು ಹೋಗಿದ್ದಾರೆ. ಪರಿಣಾಮ ರೈಲು ಡಿಕ್ಕಿ ಹೊಡೆದು ಆಕೆಯ ಕಾಲು ತುಂಡಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಪತಿಯೊಂದಿಗೆ ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದಿದ್ದ ಈ ಮಹಿಳೆ ರೈಲ್ವೆ ನಿಲ್ದಾಣದ ಬಳಿ ಬಂದು ಕುಳಿತುಕೊಂಡಿದ್ದಾಳೆ. ಆಗ ಅಲ್ಲಿಗೆ ಬಂದ ವ್ಯಕ್ತಿಯೋರ್ವನು, 'ನಮ್ಮನ್ನು ನಿಮ್ಮ ಪತಿ ಕಳುಹಿಸಿದ್ದಾರೆ, ನಿಮ್ಮ ಮನೆಗೆ ಬಿಡುತ್ತೇವೆ' ಎಂದು ಕರೆದುಕೊಂಡು ಹೋಗಿ ರೈಲು ನಿಲ್ದಾಣದಲ್ಲಿದ್ದ ರೈಲ್ವೆ ಕೋಚ್‌ನ ಒಳಗೆ ಎಳೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಪುನಃ ಇಬ್ಬರು ರೈಲ್ವೆ ಕೋಚ್ ಒಳಗೆ ಬಂದು ಮಹಿಳೆ ಬಿದ್ದು ಕಾಮತೃಷೆ ತೀರಿಸಿಕೊಂಡಿದ್ದಾರೆ. ಇದಾದ ಬಳಿಕ ಮಹಿಳೆಯನ್ನು ರೈಲ್ವೆ ಹಳಿಗೆ ಕಾಲು ಕಟ್ಟಿ ಬಿಟ್ಟು ಹೋಗಿದ್ದು, ರೈಲು ಬಂದು ಗುದ್ದಿದ್ದರಿಂದ ಮಹಿಳೆ ಕಾಲು ತುಂಡಾಗಿದೆ.
ಈ ಭಯಾನಕ, ಅಮಾನವೀಯ ಘಟನೆ ಹರಿಯಾಣದಲ್ಲಿ ನಡೆದಿದೆ. 35 ವರ್ಷದ ಮಹಿಳೆಯ ಮೇಲೆ ರೈಲು ಕೋಚ್‌ನಲ್ಲಿ ಗ್ಯಾಂಗ್ ರೇಪ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯ ಜೊತೆಗೆ ಜಗಳ ಮಾಡಿಕೊಂಡ ನಂತರ ಮಹಿಳೆ ಮನೆಯಿಂದ ಹೊರಟು ಬಂದಿದ್ದು, ಸಾಮೂಹಿಕ ಬಲಾತ್ಕಾರಕ್ಕೆ ಒಳಗಾಗಿದ್ದಾಳೆ. ಈಕೆ ಜೂನ್ 24 ರಂದು ಮನೆಯಿಂದ ಕಾಣೆಯಾಗಿದ್ದಳು. ಜೂ.26 ರಂದು ಪತಿ ಪೊಲೀಸರಿಗೆ ದೂರು ನೀಡಿದ್ದರು. ಮನೆಯಲ್ಲಿ ಜಗಳ ಮಾಡಿಕೊಂಡು ಹೋದ ಹೆಂಡತಿ ವಾಪಸ್ ಬಂದಿಲ್ಲ. ಈ ಹಿಂದೆಯೂ ಹೀಗೆ ಜಗಳ ಮಾಡಿಕೊಡು ಹೊರಟು ಹೋಗಿದ್ದ ಹೆಂಡತಿ, ವಾಪಸ್ ಬಂದಿದ್ದಳು. ಈಗ ಎರಡು ದಿನವಾದರೂ ವಾಪಸ್ ಬಂದಿಲ್ಲವೆಂದು ಪತಿ ಪೊಲೀಸರಿಗೆ ತಿಳಿಸಿದ್ದಾರೆ.
ಇನ್ನು ಮನೆಬಿಟ್ಟು ಬಂದಿದ್ದ ಮಹಿಳೆ ರೈಲ್ವೆ ನಿಲ್ದಾಣದ ಬಳಿ ಕುಳಿತಿದ್ದಾಗ, ಅಲ್ಲಿಗೆ ಬಂದ ವ್ಯಕ್ತಿ ನಿಮ್ಮ ಹೆಸರೇನು? ಏತಕ್ಕೆ ಅಳುತ್ತಿದ್ದೀರಿ? ಎಂದೆಲ್ಲಾ ಕೇಳಿದ್ದಾನೆ. ನಂತರ ಆಕೆಗೆ ನೀರಿನ ಬಾಟಲಿ ಕೊಟ್ಟು, ನಿಮ್ಮನ್ನು ಕರೆದುಕೊಂಡು ಬರುವುದಕ್ಕೆ ನಿಮ್ಮ ಪತಿಯೇ ನಮ್ಮನ್ನು ಕಳುಹಿಸಿದ್ದಾರೆ ಎಂದು ಹೇಳಿದ ವ್ಯಕ್ತಿ ನಿಮ್ಮನ್ನು ಮನೆಗೆ ಬಿಡುತ್ತೇನೆ ಎಂದು ಹೇಳಿದ್ದಾನೆ. ನಿಮ್ಮ ಪತಿ ಇಲ್ಲೇ ಇದ್ದಾರೆ ಎಂದು ಆಗತಾನೇ ನಿಲ್ದಾಣಕ್ಕೆ ಬಂದು ನಿಲ್ಲಿಸಿದ್ದ ರೈಲಿನ ಖಾಲಿ ಬೋಗಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ಹೇಳಿದ್ದಾಳೆ.
ಆತ ಎದ್ದು ಹೋದ ಬಳಿಕ ಇನ್ನಿಬ್ಬರು ಬೋಗಿಯ ಒಳಗೆ ಬಂದು ನನ್ನ ಮೇಲೆ ಅತ್ಯಾಚಾ*ರ ಮಾಡಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ಮೂವರೂ ಸಾಮೂಹಿಕವಾಗಿ ಬಲಾತ್ಕಾರ ಮಾಡಿದ ನಂತರ ಬಾಯಿಗೆ ಬಟ್ಟೆ ತುರುಕಿ ಕಾಲು ಕಟ್ಟಿ ರೈಲ್ವೆ ಹಳಿ ಮೇಲೆ ಬಿಟ್ಟು ಹೋಗಿದ್ದಾರೆ. ಈ ವೇಳೆ ಹಳಿ ಮೇಲೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದು ಒಂದು ಕಾಲು ಮುರಿದು ಹೋಗಿದೆ. ಇದೀಗ ಮಹಿಳೆ ಚಿಕಿತ್ಸೆಯಲ್ಲಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.