ಏರ್ಪೋರ್ಟ್‌ನಲ್ಲಿ ಅಳುತ್ತಿದ್ದ ನಟಿ ನೋರಾ ಫತೇಹಿ: ಅಷ್ಟಕ್ಕೂ ಆಗಿದ್ದೇನು?
ಬಾಹುಬಲಿ ಸಿನಿಮಾ ನಟಿ ಪ್ರಖ್ಯಾತ ಡ್ಯಾನ್ಸರ್ ನೋರಾ ಫತೇಹಿ ಜುಲೈ 6ರಂದು ಮುಂಬೈ ಏಪೋರ್ಟ್ನಲ್ಲಿ ಅಳುತ್ತಿರುವ ದೃಶ್ಯ ಕಂಡು ಬಂದಿದೆ. ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಳುತ್ತಿದ್ದ ದೃಶ್ಯಗಳು ಈಗ ಆನ್ಲೈನ್ನಲ್ಲಿ ವೈರಲ್ ಆಗಿವೆ.
ನೋರಾ ಫತೇಹಿ ಅಳುತ್ತಿರುವುದು ಅವರ ಅಭಿಮಾನಿಗಳಲ್ಲಿ ಕಳವಳ ಮೂಡಿಸಿದೆ. ಕಪ್ಪು ಬಣ್ಣದ ಉಡುಪನ್ನು ಧರಿಸಿರುವ ಅವರು ಕಪ್ಪು ಸನ್ ಗ್ಲಾಸ್ ಇಟ್ಟುಕೊಂಡಿದ್ದ ನಟಿ ಭಾವನಾತ್ಮಕವಾಗಿ ಕಾಣಿಸಿಕೊಂಡಿದ್ದರು.
ನಟಿ ವಿಮಾನ ನಿಲ್ದಾಣದೊಳಗೆ ಹೋಗುವಾಗ ಪಾಪರಾಜಿಗಳು ಅವರ ಫೋಟೋಗಳನ್ನು ಕ್ಲಿಕ್ ಮಾಡುತ್ತಲೇ ಇದ್ದರೂ, ಈ ಸಂದರ್ಭ ನಟಿ ಕಣ್ಣೀರನ್ನು ತಡೆದುಕೊಳ್ಳಲು ಪ್ರಯತ್ನಿಸಿದರು. ಅವರ ಹಿಂದೆ ನಡೆಯುತ್ತಿದ್ದ ಅಂಗರಕ್ಷಕ, ನಟಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬಂದಾತನನ್ನು ತಳ್ಳಿದ್ದಾರೆ. ನಟಿಯೊಂದಿಗೆ ಸೆಲ್ಫಿ ತೆಗೆಯಲು ಪ್ರಯತ್ನಿಸುವಾಗ ತುಂಬಾ ಹತ್ತಿರ ಬಂದ ಅಭಿಮಾನಿಯನ್ನು ಬಾಡಿಗಾರ್ಡ್ ಕೋಪದಿಂದ ತಳ್ಳಿ, ಹಿಂದೆ ಸರಿಯುವಂತೆ ಗಟ್ಟಿ ಧ್ವನಿಯಲ್ಲಿ ಕೇಳಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳ ಮೊದಲು, ನೋರಾ ತನ್ನ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ 'ಇನ್ನಾ ಲಿಲ್ಲಾಹಿ ವಾ ಇನ್ನ ಇಲೈಹಿ ರಾಜಿ'ಉನ್' ಎಂಬ ಅರೇಬಿಕ್ ವಾಕ್ಯದೊಂದಿಗೆ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದರರ್ಥ 'ವಾಸ್ತವವಾಗಿ, ನಾವು ಅಲ್ಲಾಹನಿಗೆ ಸೇರಿದವರು, ಮತ್ತು ನಿಜಕ್ಕೂ, ನಾವು ಅವನಲ್ಲಿಗೆ ಹಿಂತಿರುಗುತ್ತೇವೆ' ಎಂದಾಗಿದೆ.
ಸಾವಿನ ಸುದ್ದಿ ಕೇಳಿದ ತಕ್ಷಣ ಮುಸ್ಲಿಮರು ಈ ವಾಕ್ಯವನ್ನು ಪಠಿಸುತ್ತಾರೆ. ಆದರೆ ನೋರಾ ಫತೇಹಿ ಯಾರಿಗಾಗಿ ಶೋಕಿಸುತ್ತಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಮತ್ತು ಅಧಿಕೃತ ಹೇಳಿಕೆಗಾಗಿ ಕಾಯಲಾಗುತ್ತಿದೆ.
ನಟಿಯ ಕೆಲಸದ ಬಗ್ಗೆ ನೋಡುವುದಾದರೆ ನೋರಾ ಕೊನೆಯ ಬಾರಿಗೆ ನೆಟ್‌ಫ್ಲಿಕ್ಸ್ ಸರಣಿ ದಿ ರಾಯಲ್ಸ್‌ನಲ್ಲಿ ಇಶಾನ್ ಖಟ್ಟರ್, ಭೂಮಿ ಪೆಡ್ನೇಕರ್, ಸಾಕ್ಷಿ ತನ್ವರ್, ಜೀನತ್ ಅಮನ್, ವಿಹಾನ್ ಸಮತ್, ಡಿನೋ ಮೋರಿಯಾ ಮತ್ತು ಮಿಲಿಂದ್ ಸೋಮನ್ ಅವರೊಂದಿಗೆ ಕಾಣಿಸಿಕೊಂಡರು.
ಅವರು ಈ ಕಾರ್ಯಕ್ರಮದಲ್ಲಿ ಇಶಾನ್ ಪಾತ್ರದ ಮಾಜಿ ಗೆಳತಿ ಆಯೇಷಾ ಧೋಂಡಿ ಪಾತ್ರವನ್ನು ನಿರ್ವಹಿಸಿದರು. ಅವರ ಪಾತ್ರ ಗಮನಾರ್ಹವಾಗಿ ಮೆಚ್ಚುಗೆ ಗಳಿಸಿತು.
ಜಾನ್ ಅಬ್ರಹಾಂ ನಟಿಸಿದ 2019 ರ ಚಲನಚಿತ್ರ ಬಾಟ್ಲಾ ಹೌಸ್‌ನ ಹಿಟ್ ಡ್ಯಾನ್ಸ್ ಟ್ರ್ಯಾಕ್ ಓ ಸಾಕಿ ಸಾಕಿಯೊಂದಿಗೆ ನೋರಾ ಖ್ಯಾತಿಯನ್ನು ಗಳಿಸಿದರು. ಅವರು ಪ್ರಭಾಸ್ ಅವರ ಬಾಹುಬಲಿಯಲ್ಲಿಯೂ ನಟಿಸಿದ್ದಾರೆ. ಹಿನ್ನೆಲೆ ನೃತ್ಯಗಾರ್ತಿಯಾಗಿ ಕಾಣಿಸಿಕೊಂಡಿದ್ದರು.