ಬಾಳೆಹಣ್ಣು ತಿನ್ನುವ ವಿಧಾನ ಹೇಗೆ ಗೊತ್ತೇ? ಈ ಯೂಟ್ಯೂಬರ್ ತಿಳಿಸಿದ್ದಾರೆ ನೋಡಿ


ಅತ್ಯಂತ ಸಲೀಸಾಗಿ ತಿನ್ನಬಹುದಾದ ಹಣ್ಣು ಎಂದರೆ ಅದು ಬಾಳೆಹಣ್ಣು. ಆದರೆ ಬಾಳೆಹಣ್ಣನ್ನು ಯಾವ ವಿಧಾನದಲ್ಲಿ ಹೇಗೆ ತಿನ್ನಬೇಕು ಎನ್ನುವುದನ್ನು ಹೆಚ್ಚಿನವರಿಗೆ ತಿಳಿದಿಲ್ಲ. ಅದನ್ನು ಕಲಿಸಿದ್ದಾರೆ ನೋಡಿ ಈ ಯುಟ್ಯೂಬರ್​. ಅದರ ವಿಡಿಯೋ ವೈರಲ್​ ಆಗಿದೆ. 

ಯಾವ ಕೆಲಸವಾದರೈ ಸುಲಭದಲ್ಲ ಎಂದು ಹೇಳುವಾಗ ಸಾಮಾನ್ಯವಾಗಿ ಆಡು ಮಾತಿನಲ್ಲಿ ಅದೇನು ಬಾಳೆಹಣ್ಣು ಸಿಪ್ಪೆ ಸುಲಿದು ತಿನ್ನುವಷ್ಟು ಸುಲಭವೇ ಎಂದು ಹೇಳುವುದಿದೆ. ಇದರರ್ಥ ಬಾಳೆಹಣ್ಣು ಅತ್ಯಂತ ಸಲೀಸಾಗಿ ತಿನ್ನುವ ಹಣ್ಣು ಎಂದು. ಕೆಲವು ಹಣ್ಣುಗಳನ್ನು ಸಿಪ್ಪೆ ಬಿಡಿಸಿ ತಿನ್ನಬೇಕು. ಮತ್ತೆ ಕೆಲವು ಬೀಜ ತೆಗೆದು ತಿನ್ನಬೇಕು. ಸೀತಾಫಲದಂಥ ಹಣ್ಣುಗಳು ಸಿಹಿಯಾಗಿದ್ದರೂ ಬೀಜ ತೆಗೆದು ತಿನ್ನುವುದೇ ದೊಡ್ಡ ತಲೆನೋವಿನ ಕೆಲಸ. ಆದರೆ ಬಾಳೆಹಣ್ಣನ್ನು ನಾವು ತಿನ್ನುವ ರೀತಿಯೇ ಸರಿಯಲ್ಲ ಎನ್ನುತ್ತಲೇ ಅದನ್ನು ಹೇಗೆ ತಿನ್ನುವುದು ಎನ್ನುವುದನ್ನು ಯೂಟ್ಯೂಬರ್​ ಒಬ್ಬರು ತೋರಿಸಿಕೊಟ್ಟಿದ್ದು ಇದೀಗ ಭಾರಿ ವೈರಲ್​ ಆಗುತ್ತಿದೆ. ಬಾಳೆಹಣ್ಣು ಹೀಗೆ ತಿನ್ನಬೇಕು ಎನ್ನುವುದು ನಮಗೆ ಗೊತ್ತೇ ಇರಲಿಲ್ಲ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.

ವಿಲಿಯಮ್​ಹ್ಯಾನ್ಸನ್​ ಎನ್ನುವ ಯೂಟ್ಯೂಬರ್​ ಇದನ್ನು ಶೇರ್​ ಮಾಡಿದ್ದಾರೆ. ಮೊದಲಿಗೆ ಬಾಳೆಹಣ್ಣನ್ನು ಒಂದು ಪ್ಲೇಟ್​ನಲ್ಲಿಟ್ಟು ಎರಡೂ ತುದಿಗಳನ್ನು ಕತ್ತರಿಸಿದ್ದಾರೆ. ಬಳಿಕ ಚಮಚದ ಸಹಾಯದಿಂದ ಸಿಪ್ಪೆಯನ್ನು ತೆಗೆದು ಬಾಳೆಯ ಹಣ್ಣನ್ನು ಕಟ್​ ಮಾಡಿ ಅದನ್ನು ತಿಂದಿದ್ದಾರೆ. ಅರ್ಧ ನಿಮಿಷದಲ್ಲಿ ತಿಂದು ಮುಗಿಸಬಹುದಾದ ಬಾಳೆಹಣ್ಣನ್ನು ಈ ರೀತಿ ಮಾಡಿ ತಿಂದರೆ ಅರ್ಧ ಗಂಟೆ ಬೇಕಾಗಬಹುದು. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ನಮಗೆ ಇದರ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಹಲವರು ಹೇಳುತ್ತಿದ್ದಾರೆ. ಭಾರತಕ್ಕೆ ಬಂದು ಇಲ್ಲಿನವರಿಗೂ ಈ ವಿಧಾನವನ್ನು ಕಲಿಸಿ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ವಿದೇಶದಲ್ಲಿ 52 ಕೋಟಿ ರೂ. ಬಾಳೆಹಣ್ಣು ಬಾರಿ ಸದ್ದು ಮಾಡಿತ್ತು. ಕ್ರಿಪ್ಟೋಕರೆನ್ಸಿ ಉದ್ಯಮಿ ಜಸ್ಟಿನ್ ಸನ್ ಅವರು 52 ಕೋಟಿ ರೂಪಾಯಿ ಬಾಳೆಹಣ್ಣನ್ನು ಗುಳುಂ ಮಾಡಿದ್ದರು. ಅಂದಹಾಗೆ ಇದೇನು ವಿಶೇಷ ತಳಿಯ ಬಾಳೆಹಣ್ಣಲ್ಲ, ಮಾಮೂಲಿ ಹಣ್ಣೆ. ಆದರೂ ಇದಕ್ಕೆ ಇಷ್ಟೊಂದುಬೆಲೆ ಯಾಕೆ ಎನ್ನುವ ಹಿಂದಿಗೆ ಕುತೂಹಲದ ಕಥೆ. ಅಷ್ಟಕ್ಕೂ ಇದು ಗೋಡೆ ಮೇಲೆ ಟೇಪ್​ ಹಾಕಿ ಅಂಟಿಸಿದ್ದ ಬಾಳೆಹಣ್ಣಷ್ಟೇ. ಇದು ಕೆಲ ವಾರಗಳ ಹಿಂದೆ 52 ಕೋಟಿಗೆ ಹರಾಜಿನಲ್ಲಿ ಮಾರಾಟವಾಗಿತ್ತು. ನ್ಯೂಯಾರ್ಕ್‌ನಲ್ಲಿ ನಡೆದ ಈ ಹರಾಜು ಪ್ರಕ್ರಿಯೆಯಲ್ಲಿ ಜಸ್ಟಿನ್ ಸನ್ 6.2 ಮಿಲಿಯನ್​ ಡಾಲರ್ ಅಂದರೆ ಸುಮಾರು 52 ಕೋಟಿ 45 ಲಕ್ಷದ 89 ಸಾವಿರದ 440 ಕೋಟಿ ಕೊಟ್ಟು ಖರೀದಿಸಿದ್ದರು. ಅವರು ಈ ಹಿಂದೆ ಅದನ್ನು ಸಾರ್ವಜನಿಕರ ಎದುರು ತಿನ್ನುವುದಾಗಿ ತಿಳಿಸಿದ್ದರು. ಅದರಂತೆ ಈಗ ನಡೆದುಕೊಂಡಿದ್ದರು.