ಕಾರ್ಕಳ : ರಾ.ಹೆ 169 ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕು ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುರತಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ರಸ್ತೆ ಅಗಲೀಕರಣಕ್ಕಾಗಿ ಈ ಹಿಂದೆ ಇದ್ದ ಸುಸಜ್ಜಿತ ಬಸ್ಸು ತಂಗುದಾಣ ಕೆಡವಿ ಎರಡು ವರ್ಷಗಳಿಂದ ಪ್ರಯಾಣಿಕರು ರಸ್ತೆ ಮಧ್ಯದಲ್ಲಿಯೇ ಅಪಾಯಕಾರಿ ಸ್ಥಿತಿಯಲ್ಲಿ ಸುಡು ಬಿಸಿಲಿಗೆ ಬಸ್ಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ
ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೆ ಇನ್ನೂ ಕೂಡ ಯಾವುದೇ ಸ್ಥಳವನ್ನು ಅಂತಿಮಗೊಳಿಸಿಲ್ಲ.ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಈ ಬೇಜಾಬ್ದಾರಿ ವರ್ತನೆಗೆ ಜನಪ್ರತಿನಿಧಿಗಳು ಇನ್ನೂ ಯಾಕೆ ಸ್ಪಂದಿಸುತ್ತಿಲ್ಲ.
ಈ ಹಿಂದೆ ಹಲವಾರು ಬಾರಿ ಪತ್ರಿಕೆಗಳಲ್ಲಿ ,ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ,ಸಂಸದರು ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆಗೆ ಬಂದಾಗ ಸಾರ್ವಜನಿಕರು ಈ ಬಗ್ಗೆ ಗಮನಕ್ಕೆ ತಂದರೂ ಹೆದ್ದಾರಿ ಇಲಾಖೆಗೆ ಶೀಘ್ರವಾಗಿ ಬಸ್ಸು ತಂಗುದಾಣ ನಿರ್ಮಾಣ ಮಾಡಲು ಯಾಕೆ ಇನ್ನೂ ಒತ್ತಡ ಹೇರುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ ಪ್ರತಿ ದಿನ ಸುಡು ಬಿಸಿಲಿನಲ್ಲಿ ಕಾದು ಕರಟಿ ಹೋಗಿ ಜನಪ್ರತಿನಿಧಿಗಳಿಗೆ ಹೆದ್ದಾರಿ ಇಲಾಖೆಯವರಿಗೆ ಜನ ಶಾಪ ಹಾಕುತ್ತಿದ್ದಾರೆ