ಮಂಗಳೂರು: ನಿಧಿಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲರ್ಸ್‌ನಿಂದ ಎರಡು ನೂತನ ಐಶಾರಾಮಿ ವಸತಿ ಸಮುಚ್ಚಯ ಶಿಲಾನ್ಯಾಸ ಸಮಾರಂಭ
Saturday, May 3, 2025
ಮಂಗಳೂರು: ನಗರದ ಜನಪ್ರಿಯ ಹಾಗೂ ವಿಶ್ವಾಸಾರ್ಹ ನಿರ್ಮಾಣ ಸಂಸ್ಥೆ ನಿಧಿಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಇಂಡಿಯಾ ಪ್ರೈ.ಲಿ.ನ ಡೆವಲರ್ಸ್‌ನಿಂದ ಎರಡು ನೂತನ ಐಶಾರಾಮಿ ವಸತಿ ಸಮುಚ್ಚಯ ಸ್ಕೈ ಗಾರ್ಡನ್ ಮತ್ತು ಪೂರ್ವಜ್‌ನ ಶಿಲಾನ್ಯಾಸ ಸಮಾರಂಭ ಶನಿವಾರ ನೆರವೇರಿತು.
ಸ್ಕೈ ಗಾರ್ಡನ್: ಮಂಗಳೂರಿನ ಲೇಡಿಹಿಲ್-ಚಿಲಿಂಬಿ ಮುಖ್ಯರಸ್ತೆಯಲ್ಲಿ ನಿರ್ಮಾಣಗೊಳ್ಳಲಿರುವ ಸ್ಕೈ ಗಾರ್ಡನ್ 33 ಮಹಡಿಗಳ ಅತ್ಯಾಧುನಿಕ ಸೌಲಭ್ಯಯುಳ್ಳ ಐಷಾರಾಮಿ ವಸತಿ ಸಮುಚ್ಚಯ. ಇದರ ಕೆಳಗಿನ ಹಾಗೂ ಮೇಲಿನ ತಳ ಅಂತಸ್ತಿನಲ್ಲಿ ಕಾರ್ ಪಾರ್ಕಿಂಗ್ ಮತ್ತು ಮೇಲಿನ ನೆಲ ಅಂತಸ್ತು ಹಾಗೂ ಮೊದಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಸೌಲಭ್ಯಗಳನ್ನು ಒಳಗೊಂಡಿದೆ. ಈ ವಸತಿ ಸಮುಚ್ಚಯದಲ್ಲಿ ವಿಶಾಲವಾದ 3 ಬಿಎಚ್‌ಕೆ, 4 ಬಿಎಚ್‌ಕೆ ಹಾಗೂ 5ಬಿಎಚ್‌ಕೆ ಅಪಾರ್ಟ್ಮೆಂಟ್‌ಗಳು ಹಾಗೂ ಎರಡು ಡ್ಯೂಪ್ಲೆಕ್ಸ್ ಅಪಾರ್ಟ್ಮೆಂಟ್‌ಗಳನ್ನು ಗ್ರಾಹಕರ ಆದ್ಯತೆಗೆ ಅನುಗುಣವಾಗಿ ನಿರ್ಮಿಸಲಾಗುವುದು.
ಸ್ಕೈ ಗಾರ್ಡನ್ ನಿವಾಸಿಗಳಿಗೆ ಝೆನ್ ರೂಂ, ಯೋಗ/ ಎರೋಬಿಕ್ಸ್, ಮಕ್ಕಳ ಅಧ್ಯಯನ ಕೊಠಡಿ, ಮಕ್ಕಳ ಆಟದ ಪ್ರದೇಶ, ವಾಕಿಂಗ್/ ಜಾಗಿಂಗ್ ಟ್ರಾಕ್, ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಟೇಬಲ್ ಟೆನ್ನಿಸ್, ಬಿಲಿಯರ್ಡ್ಸ್ ಟೇಬಲ್, ಚೆಸ್, ಕ್ಯಾರಮ್ ಮತ್ತು ಇತರ ಬೋರ್ಡ್ ಆಟಗಳ ಕೊಠಡಿ, ಕಾರ್ಡ್ಸ್ ರೂಮ್, ಮಿನಿ ಥಿಯೇಟರ್, ಸೌನಾ ಸ್ಟೀಮ್ ರೂಂ, ಜಕುಜಿ, ಕಟ್ಟಡದ ಪ್ರವೇಶದ್ವಾರದ ಬಳಿ ನೀರಿನ ಫೌಂಟೇನ್ ಹೊಂದಿರುವ ವೈಶಿಷ್ಟಯುತ ಗೋಡೆಗಳು, ಸಮ್ಮೇಳನ ಸಭಾಂಗಣ ಮತ್ತು ಇನ್ನೂ ಹಲವಾರು ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿರುತ್ತವೆ.
ಪೂರ್ವಜ್: ಮಂಗಳೂರಿನ ಶಿವಭಾಗ್‌ನಲ್ಲಿ ನಿರ್ಮಾಣಗೊಳ್ಳಲಿರುವ ಪೂರ್ವಜ್‌ನಲ್ಲಿ ತಳ ಮತ್ತು ಕೆಳಗಿನ ನೆಲ ಅಂತಸ್ತಿನಲ್ಲಿ ಕಾರ್ ಪಾರ್ಕ್ ಸೌಲಭ್ಯ ಹಾಗೂ ಮೇಲಿನ ನೆಲ ಅಂತಸ್ತಿನಲ್ಲಿ ಕ್ಲಬ್ ಹೌಸ್ ಇರಲಿದೆ. ಉಳಿದ 12 ಮಹಡಿಗಳಲ್ಲಿ ವಿಶಿಷ್ಟ 4 ಬಿಎಚ್‌ಕೆ ಗೃಹಗಳನ್ನು ಹೊಂದಿದೆ. ಪ್ರತಿಯೊಂದು ಮಹಡಿಗೂ ಒಂದೊಂದು ಅಪಾರ್ಟ್ಮೆಂಟ್ ಮಾತ್ರವಿದ್ದು ಅನುಕೂಲಕ್ಕೆ ತಕ್ಕಂತೆ ವಿನ್ಯಾಸಗೊಳಿಸಲು ಸಾಧ್ಯವಾಗುವ ವಿಶಾಲ ಕೋಣೆಗಳು ಪೂರ್ವಜ್ ವಸತಿ ಸಮುಚ್ಚಯದ ವೈಶಿಷ್ಟ್ಯವಾಗಿದೆ.
ಪೂರ್ವಜ್‌ನಲ್ಲೂ, ರೂಫ್‌ಟಾಪ್ ಓಝೋನೈಸ್ಡ್ ಸ್ವಿಮ್ಮಿಂಗ್ ಪೂಲ್, ಸುಸಜ್ಜಿತ ಜಿಮ್ನಾಸಿಯಮ್, ಬಿಲಿಯರ್ಡ್ಸ್ ಟೇಬಲ್, ಚೆಸ್/ ಕ್ಯಾರಮ್/ ಇತರ ಬೋರ್ಡ್ ಆಟಗಳ ಕೊಠಡಿ, ಸೌನಾ, ಸ್ಟೀಮ್ ರೂಂ, ಜಕುಜಿ, ಸಮ್ಮೇಳನ ಸಭಾಂಗಣ ಮುಂತಾದ ಆಧುನಿಕ ಸೌಲಭ್ಯಗಳು ಸಿದ್ಧಗೊಳ್ಳಲಿವೆ.
ಈ ಎರಡು ಪ್ರತಿಷ್ಠಿತ ವಸತಿ ಸಮುಚ್ಚಯಗಳ ಮೂಲಕ ನಿಧಿಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಂಗಳೂರಿನಲ್ಲಿ ಅತ್ಯಾಧುನಿಕವಾಗಿ ವಿಶಿಷ್ಟ ರೀತಿಯಲ್ಲಿ ಐಷಾರಾಮಿ ವಸತಿ ಸಮುಚ್ಚಯವನ್ನು ನಿರ್ಮಿಸುತ್ತಿದ್ದಾರೆ.
ಇನ್‌ಫ್ರಾಸ್ಟ್ರಕ್ಚರ್ ಡೆವಲರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿಧಿಲ್ಯಾಂಡ್ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪ್ರಶಾಂತ್ ಕೆ. ಸನಿಲ್ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ 32ವರ್ಷಗಳ ಅನುಭವ ಹೊಂದಿದ್ದಾರೆ. ಸಂಸ್ಥೆಯು ಆರಂಭವಾಗಿ 12 ವರ್ಷಗಳಾಗಿದ್ದು 11 ಯೋಜನೆಗಳನ್ನು ಪೂರ್ಣಗೊಳಿಸಿದೆ. ಶಕ್ತಿ ಹೈಟ್ಸ್ ಮತ್ತು ಸ್ಮೃತಿ ಹೈಟ್ಸ್ ನಿರ್ಮಾಣದ ಹಂತದಲ್ಲಿದ್ದು, ವೈಟ್ ರೋಸ್, ಬಿಸಿನೆಸ್ ಬೇ, ಬಿಸಿನೆಸ್ ಪಾರ್ಕ್, ಕ್ಯಾಸಲ್ ಗ್ರೀನ್ ಸಂಸ್ಥೆಯ ಮುಂಬರುವ ಪ್ರಮುಖ ಯೋಜನೆಗಳಾಗಿವೆ.