-->

ಒಂದು ಕಾಲದ ಸ್ಟಾರ್ ನಟಿ ಉದ್ಯಮಿ ಪತಿ ಮೃತಪಟ್ಟ ಬಳಿಕ ಮುಖ್ಯಮಂತ್ರಿಯನ್ನೇ ವಿವಾಹವಾದರು- ಈಗ ಆಕೆ ಶತಕೋಟಿ ಒಡತಿ

ಒಂದು ಕಾಲದ ಸ್ಟಾರ್ ನಟಿ ಉದ್ಯಮಿ ಪತಿ ಮೃತಪಟ್ಟ ಬಳಿಕ ಮುಖ್ಯಮಂತ್ರಿಯನ್ನೇ ವಿವಾಹವಾದರು- ಈಗ ಆಕೆ ಶತಕೋಟಿ ಒಡತಿ


ಕನ್ನಡ ಸಿನಿಮಾದಲ್ಲಿ ಒಂದು ಕಾಲದಲ್ಲಿ ಅತ್ಯಂತ ಬೇಡಿಕೆ ನಟಿಯಾಗಿದ್ದ ನಟಿ ರಾಧಿಕಾ ಅವರು ಸಣ್ಣ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಕಾಲಿಟ್ಟವರು. ಆರಂಭದಲ್ಲಿ ಉದ್ಯಮಿಯೊಬ್ಬರನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳಬೇಕು ಎಂದು ಬಯಸಿದ್ದರೂ, ವಿಧಿಯಾಟ ಬೇರೆಯೇ ಆಗಿತ್ತು. ಆಗಿನ ಸಿಎಂ ಅನ್ನು ಮದುವೆಯಾದ ಬಳಿಕ ಅವರ ಅದೃಷ್ಟವೇ ಬದಲಾಗಿದೆ. ಇದೀಗ ಇವರು ಶತಕೋಟಿ ರೂಪಾಯಿ ಒಡತಿಯಾಗಿದ್ದಾರೆ.


ಭಾರತೀಯ ಚಿತ್ರರಂಗದಲ್ಲಿ ಬಾಲಿವುಡ್, ಕಾಲಿವುಡ್, ಸ್ಯಾಂಡಲ್‌ವುಡ್, ಮಾಲಿವುಡ್, ಟಾಲಿವುಡ್ ಸೇರಿದಂತೆ ಅಷ್ಟೇ ಏಕೆ ಹಾಲಿವುಡ್‌ ಸಿನಿಮಾ ನಟಿಯರು ಹಾಗೂ ರಾಜಕೀಯ ನಾಯಕರ ನಡುವಿನ ಸಂಬಂಧಗಳಿಗೆ ಕೊನೆಯೇ ಇಲ್ಲ. ಅನೇಕ ಚಿತ್ರನಟಿಯರು ರಾಜಕೀಯ ನಾಯಕರನ್ನು ಮದುವೆಯಾಗಿ ಶ್ರೀಮಂತಿಕೆಯನ್ನೇ ಅನುಭವಿಸಿದ್ದಾರೆ. ಇನ್ನು ಕೆಲವರು ಉದ್ಯಮಿಗಳನ್ನು, ಕ್ರೀಡಾಪಟುಗಳನ್ನು, ಕ್ರಿಕೆಟ್ ಆಟಗಾರರನ್ನು ಸೇರಿ ಅನೇಕ ಕ್ಷೇತ್ರಗಳ ಶ್ರೀಮಂತರನ್ನು ಮದುವೆ ಮಾಡಿಕೊಂಡಿದ್ದಾರೆ. ಇದಕ್ಕೆ ಕನ್ನಡ ಚಿತ್ರರಂಗವೇನೂ ಭಿನ್ನವಾಗಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಜ್ವಲಂತ ಸಾಕ್ಷಿ ಆಗಿದ್ದಾರೆ.

ಕನ್ನಡ ಚಿತ್ರರಂಗದ ಸ್ವೀಟಿ ಎಂದೇ ಖ್ಯಾತಿಯಾಗಿರುವ ನಟಿ ರಾಧಿಕಾ ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ತೆಲುಗು, ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದರು. ಆದರೆ, ದಿನ ಕಳೆದಂತೆ ಸಿನಿಮಾದಲ್ಲಿ ಉತ್ತುಂಗದಲ್ಲಿರುವಾಗಲೇ ಉದ್ಯಮಿಯೊಬ್ಬರನ್ನು ಪ್ರೀತಿಸಿ ಅವರನ್ನು ಮದುವೆ ಮಾಡಿಕೊಂಡಿದ್ದಾರೆ ಎಂಬ ಮಾತು ಎಲ್ಲಡೆ ಕೇಳಿಬಂದಿತ್ತು. ಆದರೆ, ಉದ್ಯಮಿ ರತನ್ ಕುಮಾರ್ ಅವರು ರಾಧಿಕಾಳನ್ನು ಮದುವೆಯಾಗಿದ್ದಕ್ಕೆ ತನ್ನ ಮಗಳ ಸಿನಿಮಾ ಭವಿಷ್ಯ ಹಾಳಾಗುತ್ತದೆ ಎಂದು ರಾಧಿಕಾ ತಾಯಿ ಉದ್ಯಮಿ ವಿರುದ್ಧವೇ ಕಿಡ್ನಾಪ್ ದೂರು ನೀಡಿದರು. ಇದಾದ ಬಳಿಕ ರಾಧಿಕಾಳ ಮದುವೆ ಒಂದು ವಿವಾದದ ಸ್ವರೂಪ ಪಡೆದುಕೊಂಡಿತು. ಈ ವಿವಾದ ಜೀವಂತವಾಗಿರುವಾಗಲೇ 2002ರಲ್ಲಿ ಉದ್ಯಮಿ ರತನ್ ಕುಮಾರ್ ಸಾವನ್ನಪ್ಪಿದರು.

ಬಳಿಕ ಅಂದು ಕರ್ನಾಟಕದ ಸಿಎಂ ಅನ್ನೇ ರಾಧಿಕಾ ಮದುವೆ ಮಾಡಿಕೊಂಡರು. ಆದರೆ ಈ ಮದುವೆಯನ್ನು ಅವರು 4 ವರ್ಷಗಳ ಕಾಲ ಮುಚ್ಚಿಟ್ಟಿದ್ದರು. 2010ರ ಸಮಯಕ್ಕೆ ಮಗುವಾದ ಬಳಿಕ ತಾನು 2006ರಲ್ಲಿ ಮುಖ್ಯಮಂತ್ರಿಯನ್ನು ಗುಟ್ಟಾಗಿ ಮದುವೆ ಮಾಡಿಕೊಂಡಿರುವುದಾಗಿ ತಿಳಿಸಿದ್ದರು. ಆಗ ಸಣ್ಣ ಆಸ್ತಿಯನ್ನು ಹೊಂದಲೂ ಪರದಾಡುತ್ತಿದ್ದ ನಟಿ ಇದೀಗ ಶತಕೋಟಿ ಆಸ್ತಿಯ ಒಡತಿ ಆಗಿದ್ದಾರೆ.

 ಆರಂಭದಲ್ಲಿ ಸಿನಿಮಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದ್ದ ಸ್ವೀಟಿ ರಾಧಿಕಾ ಕುಮಾರಸ್ವಾಮಿ ಅವರು ಪ್ರೀತಿ, ಪ್ರೇಮ ಮತ್ತು ಮದುವೆಯ ವಿವಾದದ ಬಳಿಕ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಮಗಳನ್ನು ಸಾಮಾಜಿಕವಾಗಿ ಎಲ್ಲಿಯೂ ತೋರಿಸಿಲ್ಲ. ಇತ್ತೀಚೆಗೆ ಪುನಃ ಸಿನಿಮಾ ಕೆರಿಯರ್‌ ಪುನಾರಂಭಿಸಿದ ರಾಧಿಕಾ ಮೂರ್ನಾಲ್ಕು ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಆದರೆ, ಸಿನಿಮಾದ 2ನೇ ಇನ್ನಿಂಗ್ಸ್‌ನಲ್ಲಿ ಯಶಸ್ಸು ಸಿಗಲಿಲ್ಲ. ಇತ್ತೀಚೆಗೆ ಬೈರಾದೇವಿ ಸಿನಿಮಾದ ಮೂಲಕ ಕೊನೆಯ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಈ ಸಿನಿಮಾ ವಿಫಲವಾದರೆ ಸಿನಿಮಾ ಕೆರಿಯರ್ ನಿಲ್ಲಿಸುವುದಾಗಿ ತಿಳಿಸಿದ್ದರು. ಈಗ ಭೈರಾದೇವಿ ಸಿನಿಮಾ ಕೂಡ ಫೇಲ್ ಆಗಿದೆ. ಆದರೆ, ಉದ್ಯಮದಲ್ಲಿ ರಾಧಿಕಾ ಬಹಳ ಮುಂದಿದ್ದಾರೆ. ಈಗ ಸಿನಿಮಾಗೆ ಸಂಬಂಧಪಟ್ಟ ಉದ್ಯಮ ಸೇರಿದಂತೆ, ಜಮೀನು ಎಲ್ಲಾ ಮೂಲಗಳಿಂದ ರಾಧಿಕಾ ಕುಮಾರಸ್ವಾಮಿ ಅವರು ಬರೋಬ್ಬರಿ 124 ಕೋಟಿ ಆಸ್ತಿಯ ಒಡತಿ ಎಂದು ಹೇಳಲಾಗುತ್ತಿದೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article