ಶ್ರೀ ಕಾಂತೇಶ್ವರ ಪ್ರೌಢಶಾಲೆ, ಕಾಂತಾವರ, ಕಮಲಾಕ್ಷ ಕಾಮತ್ ರವರಿಂದ ಕಂಪ್ಯೂಟರ್ ಹಸ್ತಾಂತರ
Friday, February 21, 2025
ಶ್ರೀಕಾಂತೇಶ್ವರ ಪ್ರೌಢಶಾಲೆ ಕಾಂತಾವರ ಇಲ್ಲಿಗೆ ಕಾರ್ಕಳದ ಕಮಲಾಕ್ಷ ಕಾಮತ್ ಇವರು 10 ಕಂಪ್ಯೂಟರ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.ಈಪ್ರಯುಕ್ತ ದಿನಾಂಕ ಫೆ. 19 ರಂದು ಕಾರ್ಕಳ ಕಮಲಾಕ್ಷ ಕಾಮತ್ ಇವರಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಊರ ಮಹನೀಯರು ವಿದ್ಯಾರ್ಥಿಗಳು ಮತ್ತು ಹಳೆ ವಿದ್ಯಾರ್ಥಿಗಳು ಸೇರಿ ಅತ್ಯಂತ ಗೌರವದಿಂದ ಸನ್ಮಾನಿಸಿರುತ್ತಾರೆ.