-->

ಪತ್ನಿಯ ದೇಹ ಇಷ್ಟ ಆದ್ರೆ ಕಣ್ಣುಗಳು ಇಷ್ಟವಿಲ್ಲವೆಂದ ಪತಿ- ಮುಂದೆ ಆದದ್ದು ಘೋರ

ಪತ್ನಿಯ ದೇಹ ಇಷ್ಟ ಆದ್ರೆ ಕಣ್ಣುಗಳು ಇಷ್ಟವಿಲ್ಲವೆಂದ ಪತಿ- ಮುಂದೆ ಆದದ್ದು ಘೋರ


ಭಾರತದಲ್ಲಿ ಮದುವೆಗೆ ಮುನ್ನ ಹುಡುಗಿ ನೋಡುವ ಶಾಸ್ತ್ರವನ್ನು ಮಾಡಿ ಹುಡುಗ - ಹುಡುಗಿ ಹಾಗೂ ಎರಡೂ ಕಡೆಯ ಕುಟುಂಬಸ್ಥರಿಗೆ ಒಪ್ಪಿಗೆಯಾದರೆ ಮಾತ್ರ ಮದುವೆ ಮಾಡಲಾಗುತ್ತದೆ. ಆದರೆ, ಇಲ್ಲೋರ್ವ ತಾನೇ ಒಪ್ಪಿ ಮದುವೆಯಾದ ಬಳಿಕ ಪತ್ನಿಯ ಕಣ್ಣುಗಳು ತನಗೆ ಇಷ್ಟವಾಗುತ್ತಿಲ್ಲ ಎಂದು ಕ್ಯಾತೆ ತೆಗೆದಿದ್ದಾನೆ. ಬಳಿಕ, ಆತ ಪತ್ನಿಗೆ ಮಾಡಬಾರದ ಕೆಲಸ ಮಾಡಿ ಇದೀಗ ಕಂಬಿ ಎಣಿಸುತ್ತಿದ್ದಾನೆ.

ಈ ದುರ್ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ. ಪಾಲಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ 7 ವರ್ಷಗಳ ಹಳೆಯ ಕೊಲೆ ಪ್ರಕರಣದಲ್ಲಿ ತೀರ್ಪು ನೀಡಿದ್ದು, ಆರೋಪಿ ಸುನಿಲ್ ತನ್ನ ಪತ್ನಿ ಗಂಗಾಳನ್ನು ಕೊಲೆಗೈದ ಅಪರಾಧಿ ಎಂದು ತೀರ್ಪು ನೀಡಿದೆ. ನ್ಯಾಯಾಧೀಶ ಶರದ್ ತನ್ವರ್ ಸುನಿಲ್‌ಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. 

2018ರ ಸೆಪ್ಟೆಂಬರ್ 3ರಂದು ಗಂಗಾ ಕೊಲೆ ನಡೆದಿದೆ ನಡೆದಿದೆ. ವರದಿಯ ಪ್ರಕಾರ, ಗಂಗಾ ಮದುವೆ 2018ರ ಎಪ್ರಿಲ್ 29ರಂದು ಧುಂಧನಿ ಗ್ರಾಮದ ಸುನಿಲ್‌ನೊಂದಿಗೆ ನಡೆದಿತ್ತು. ಗಂಗಾ ಒಂದು ಕಣ್ಣಿನಿಂದ ಸ್ವಲ್ಪ ಓರೆಯಾಗಿ ನೋಡುತ್ತಿದ್ದಳು. ಈ ಬಗ್ಗೆ ಮದುವೆಗೆ ಮೊದಲೇ ಸುನಿಲ್ ಹಾಗೂ ಆತನ ಕುಟುಂಬಕ್ಕೆ ತಿಳಿಸಲಾಗಿತ್ತು. ಆ ಬಳಿಕವೇ ಸುನಿಲ್ ಮದುವೆಗೆ ಒಪ್ಪಿಕೊಂಡಿದ್ದನು. ಹಾಗಾಗಿ ಎರಡೂ ಕುಟುಂಬಗಳು ಸಂತೋಷವಾಗಿದ್ದವು. 

ಆದರೆ, ಮದುವೆಯಾದ ಕೆಲ ತಿಂಗಳ ಬಳಿಕ ಸುನಿಲ್ ಗಂಗಾಳನ್ನು ಅವಮಾನಿಸಲು ಪ್ರಾರಂಭಿಸಿದನು. ಜೊತೆಗೆ, ಆಕೆಯ ದೇಹ ನನಗೆ ಇಷ್ಟವಾಗಿದೆ, ಆದರೆ ಆಕೆಯ ಕಣ್ಣುಗಳು ತನಗೆ ಇಷ್ಟವಿಲ್ಲ ಎಂದು ಹೇಳಿದನು. ಜಗಳ ಹೆಚ್ಚಾದಂತೆ ಆಕೆ ಬೇಡವಾಗಿದ್ದಾಳೆ. ಆದ್ದರಿಂದ ಸುನಿಲ್ ಒಂದು ದಿನ ಗಂಗಾಳಿಗೆ ಊಟದಲ್ಲಿ ನಿದ್ರೆ ಮಾತ್ರೆಗಳನ್ನು ಹಾಕಿ ನುಂಗಿಸಿದ್ದಾನೆ. ನಂತರ, ಅವಳು ಪ್ರಜ್ಞಾಹೀನಳಾದಾಗ ಅವಳ ಕತ್ತು ಹಿಸುಕಿ ಕೊಂದಿದ್ದಾನೆ.

ಸುನೀಲ್ ತನ್ನ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆತ್ಮಹತ್ಯೆ ಎಂದು ತೋರಿಸಲು ಮುಂದಾಗಿದ್ದಾನೆ. ಇದಕ್ಕಾಗಿ ಸುನೀಲ್, ಗಂಗಾಳ ಕುಟುಂಬಕ್ಕೆ ಫೋನ್ ಮಾಡಿ ಗಂಗಾಳಿಗೆ ಹಾವು ಕಚ್ಚಿದೆ ಎಂದು ಹೇಳಿದ್ದಾನೆ. ಗಂಗಾಳ ಸಂಬಂಧಿಕರು ಅತ್ತೆ ಮನೆಗೆ ಬಂದಾಗ, ಅಂತ್ಯಕ್ರಿಯೆಯ ತಯಾರಿ ನಡೆಯುತ್ತಿತ್ತು. ಗಂಗಾಳ ದೇಹದ ಮೇಲೆ ಕತ್ತು ಹಿಸುಕಿದ ಗುರುತುಗಳನ್ನು ನೋಡಿ ಸಂಬಂಧಿಕರಿಗೆ ಅನುಮಾನ ಬಂದು ಪೊಲೀಸರಿಗೆ ದೂರು ನೀಡಿದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇನ್ನು ಸುನೀಲ್‌ನಲ್ಲಿ ಪೊಲೀಸರು ನಿರಂತರ ವಿಚಾರಣೆ ನಡೆಸಿ ತನಿಖೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದನ್ನು ಬಾಯಿ ಬಿಟ್ಟಿದ್ದಾನೆ. ಜೊತೆಗೆ, ಗಂಗಾಳ ಮೃತದೇಹದ ಮೇಲಿನ ಗುರುತುಗಳನ್ನು ಕೂಡ ಪತ್ತೆ ಮಾಡಿ, ಸಾಕ್ಷಿಗಳ ಹೇಳಿಕೆಗಳನ್ನೂ ಪಡೆದಿದ್ದಾರೆ. ಈ ಆಧಾರದ ಮೇಲೆ ಆರೋಪಿ ಸುನಿಲ್‌ನನ್ನು ಕೊಲೆಯ ತಪ್ಪಿತಸ್ಥನೆಂದು ಸಾಬೀತು ಮಾಡಲಾಗಿದೆ. ಪಾಲಿಯ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಶರದ್ ತನ್ವರ್ ಅವರು ಆರೋಪಿ ಸುನಿಲ್‌ಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಶಿಕ್ಷೆ ಪಡೆದ ನಂತರವೂ ಸುನಿಲ್‌ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿಕೊಂಡಿದ್ದಾನೆ. ಇದಕ್ಕೆ ಜನರು ಈತನಿಗೆ ಜೀವನ ಪೂರ್ತಿ ಜೈಲಿನಲ್ಲಿಯೇ ಇಡಬೇಕು ಎಂದು ಹೇಳಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article