-->

ಬೆಳ್ಮಣ್ :ಉಚಿತ ಆರೋಗ್ಯ ತಪಾಸಣಾ ಶಿಬಿರ

ಬೆಳ್ಮಣ್ :ಉಚಿತ ಆರೋಗ್ಯ ತಪಾಸಣಾ ಶಿಬಿರ

ಜೆಸಿಐ ಬೆಳ್ಮಣ್, ಅಭಿ ಮೆಡಿಕಲ್ಸ್ , ಪ್ರಧಾನಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಸೂರಜ್ ಹಿಲ್ಸ್ , ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ ಬೆಳ್ಮಣ್ ಇವರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಕೆಎಂಸಿ ಮಣಿಪಾಲ ದಂತ ವೈದ್ಯಕೀಯ  ಕಾಲೇಜಿನ ತಜ್ಞ ವೈದ್ಯರಿಂದ ಉಚಿತ ದಂತ ಚಿಕಿತ್ಸಾ ಶಿಬಿರ ಹಾಗೂ ಸಿ.ಎಸ್.ಐ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಹಾಗೂ ರೆಡ್ ಕ್ರಾಸ್ ಸೊಸೈಟಿ ಉಡುಪಿ ಇದರ ವತಿಯಿಂದ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಬೆಳ್ಮಣ್ 
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಸಭಾಂಗಣದಲ್ಲಿ ನಡೆಯಿತು.

  ಉದ್ಯಮಿ  ಎಸ್. ಕೆ .ಸಾಲಿಯನ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬೆಳ್ಮಣ್ ಜೆ ಸಿ ಐ ಅಧ್ಯಕ್ಷ ಪ್ರದೀಪ್ ಶೆಟ್ಟಿ ಇನ್ನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಜೆಸಿಐ ನ ವಲಯ ಉಪಾಧ್ಯಕ್ಷ ಜೆಸಿ ಸಮದ್ ಖಾನ್, ಅಭಿ ಮೆಡಿಕಲ್ಸ್ ನ ಮಾಲಕ ಸತೀಶ್ ಎರ್ಮಾಲ್, ಉದ್ಯಮಿ ಶೋಧನ್ ಕುಮಾರ್ ಶೆಟ್ಟಿ, ಉದ್ಯಮಿ ಗ್ರೇಗೋರಿ ಮಿಮೇಜಸ್, ಬಿಲ್ಲವ ಸಂಘದ ಅಧ್ಯಕ್ಷ ವಸಂತ್ ಕುಮಾರ್  ಡಾ.ವಿಜಯಕುಮಾರ್ ಮುಖ್ಯಸ್ಥರು ಮಕ್ಕಳ ಶಾಸ್ತ್ರ ಚಿಕಿತ್ಸೆ ವಿಭಾಗ ಕೆಎಂಸಿ, ಡಾ.ಅಭಿನಯ ಅಶೋಕ್ ಕಣ್ಣಿನ ತಜ್ಞರು ಸಿ ಎಸ್ ಸಿ ಲೋಂಬಾಡ್ ಹಾಸ್ಪಿಟಲ್ಬ್ ಉಡುಪಿ, 
ಡಾ. ಪೂಜಾ ಸಮುದಾಯ ದಂತ ಚಿಕಿತ್ಸಾ ವಿಭಾಗ ಕೆಎಂಸಿ ಮಣಿಪಾಲ, 
ಡಾಕ್ಟರ್ ಅರ್ಜುನ್ ಬಳ್ಳಾಲ್ ಮೂಳೆ ತಜ್ಞರು ಸಿ ಎಸ್ ಸಿ ಲೋoಬಾರ್ಡ್ ಹಾಸ್ಪಿಟಲ್ ಉಡುಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


 ಜೆಸಿ ರವಿರಾಜ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ,ಬೆಳ್ಮಣ್ ಜೆಸಿಐ ನ ಕಾರ್ಯದರ್ಶಿ ಜೆ ಸಿ ವೀರೇಂದ್ರ ಆರ್ ಕೆ ಧನ್ಯವಾದವಿತ್ತರು. ಸುಮಾರು 205 ಜನ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article