-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಬರೋಬ್ಬರಿ 405 ಗಂಟೆಯಲ್ಲಿ ತಯಾರಾಯ್ತು ನಟಿ ಕೀರ್ತಿ ಸುರೇಶ್ ಮದುವೆ ಸೀರೆ: ಈ ಸೀರೆಯಲ್ಲಿ ಅಂಥಹದ್ದೇನಿದೆ ಗೊತ್ತಾ?

ಬರೋಬ್ಬರಿ 405 ಗಂಟೆಯಲ್ಲಿ ತಯಾರಾಯ್ತು ನಟಿ ಕೀರ್ತಿ ಸುರೇಶ್ ಮದುವೆ ಸೀರೆ: ಈ ಸೀರೆಯಲ್ಲಿ ಅಂಥಹದ್ದೇನಿದೆ ಗೊತ್ತಾ?


ದಕ್ಷಿಣ ಭಾರತದ ಪ್ರಖ್ಯಾತ ಸಿನಿಮಾನಟಿ ಕೀರ್ತಿ ಸುರೇಶ್ ಅವರ ವಿವಾಹ ಡಿಸೆಂಬರ್ 12ರಂದು ಗೋವಾದಲ್ಲಿ ನೆರವೇರಿತು. ಕೀರ್ತಿ ದುರೇಶ್ ತಮ್ಮ ಬಹುಕಾಲದ ಗೆಳೆಯ, ದುಬೈ ಮೂಲದ ಉದ್ಯಮಿ ಆ್ಯಂಟನಿ ಥಟ್ಟಿಲ್ ಅವರನ್ನು ಮದುವೆಯಾಗಿದ್ದಾರೆ.

ಆ್ಯಂಟನಿ ಥಟ್ಟಿಲ್ ಕ್ರಿಶ್ಚಿಯನ್ ಸಮುದಾಯದವರು. ಆದ್ದರಿಂದ ಕೀರ್ತಿ ಸುರೇಶ್ ಅವರ ಮದುವೆ ಚರ್ಚ್‌ನಲ್ಲಿ ನಡೆಯುದೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಕೀರ್ತಿ ಸುರೇಶ್ ಅವರ ಕುಟುಂಬದ ಸಂಪ್ರದಾಯದಂತೆ ತಮಿಳು ಬ್ರಾಹ್ಮಣ ಶೈಲಿಯಲ್ಲಿ ನಡೆದಿದೆ. ಕೀರ್ತಿ ಸೀರೆ ಉಟ್ಟು, ಆಂಡಾಳ್ ವೇಷದಲ್ಲಿ, ತಂದೆಯ ಮಡಿಲಲ್ಲಿ ಕುಳಿತು ತಾಳಿ ಕಟ್ಟಿಸಿಕೊಂಡರು.



 
ತಮ್ಮ ವಿವಾಹವನ್ನು ಅದ್ದೂರಿಯಾಗಿ ಆಚರಿಸಲು ಇಷ್ಟಪಡದ ಕೀರ್ತಿ ಸುರೇಶ್, ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಮದುವೆಗೆ ಆಹ್ವಾನಿಸಿದ್ದರು. ಗೋವಾದಲ್ಲಿ ನಡೆದ ಮದುವೆಯಲ್ಲಿ ನಟ ವಿಜಯ್ ಮತ್ತು ನಟಿ ತ್ರಿಷಾ ಭಾಗವಹಿಸಿದ್ದರು. 
 

ತ್ರಿಷಾ ಮತ್ತು ವಿಜಯ್ ಇಬ್ಬರೂ ಖಾಸಗಿ ವಿಮಾನದಲ್ಲಿ ಹೋಗಿ, ಕಾರಿಗೆ ಬದಲಾಗುವಾಗ ತೆಗೆದ ಫೋಟೋಗಳು ವೈರಲ್ ಆಗಿವೆ. ವಿಜಯ್ ಅಭಿಮಾನಿಗಳು ಸಂಗೀತಾಗೆ ನ್ಯಾಯ ಬೇಕು ಎಂದು ಹ್ಯಾಶ್‌ಟ್ಯಾಗ್ ಹಾಕಿ ಸಂಚಲನ ಮೂಡಿಸಿದ್ದಾರೆ.


ಈ ನಡುವೆ ಕೀರ್ತಿ ಸುರೇಶ್ ಅವರು ತಮ್ಮ ಮದುವೆಯ ಸಂದರ್ಭ ಉಟ್ಟಿರುವ ಸೀರೆಯ ಬಗ್ಗೆ ಕುತೂಹಲಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಕೀರ್ತಿ ಸುರೇಶ್ ತಮ್ಮ ಮದುವೆಯಲ್ಲಿ ಉಟ್ಟಿರುವ ಸೀರೆ ಸರಳವಾಗಿ ಕಂಡರೂ, ಅದರ ಬೆಲೆ 3 ಲಕ್ಷಕ್ಕೂ ಅಧಿಕ ಎಂದು ಹೇಳಲಾಗುತ್ತಿದೆ.

ಕಾಂಚೀಪುರದಲ್ಲಿ ನೇಯ್ದ ಈ ರೇಷ್ಮೆ ಸೀರೆಯನ್ನು ಉತ್ತಮ ದರ್ಜೆಯ ರೇಷ್ಮೆ ದಾರದಿಂದ ಮತ್ತು ಅದರಲ್ಲಿರುವ ಜರಿಗಳನ್ನು ಸಂಪೂರ್ಣವಾಗಿ ಚಿನ್ನದ ದಾರದಿಂದ ನೇಯಲಾಗಿದೆ. ಈ ಸೀರೆಯನ್ನು ನೇಯಲು ಸುಮಾರು 405 ಗಂಟೆಗಳು ಬೇಕಾಗಿದೆ ಎಂದು ಹೇಳಲಾಗುತ್ತಿದೆ. ಅದೇ ರೀತಿ ಆ್ಯಂಟನಿ ಥಟ್ಟಿಲ್ ಅವರ ರೇಷ್ಮೆ ಪಟ್ಟೆ - ಶರ್ಟ್ ಮತ್ತು ಅಂಗವಸ್ತ್ರವನ್ನು ತಯಾರಿಸಲು 150 ಗಂಟೆಗಳು ಬೇಕಾಗಿದೆ ಎಂದು ಹೇಳಲಾಗುತ್ತಿದೆ. ಕೀರ್ತಿ ಸುರೇಶ್ ಕಾಸ್ಟ್ಯೂಮ್ ಡಿಸೈನರ್ ಆಗಿರುವುದರಿಂದ ಈ ಸೀರೆಯನ್ನು ಅವರೇ ವಿನ್ಯಾಸಗೊಳಿಸಿದ್ದಾರೆ ಎಂಬುದು ವಿಶೇಷ.

Ads on article

Advertise in articles 1

advertising articles 2

Advertise under the article

ಸುರ