-->

ವಿಕ್ಸ್ ಡಬ್ಬಿ ಮುಚ್ಚಳ ನುಂಗಿ ಮಗು ಸಾವು: 18ವರ್ಷಗಳ ವೃತ-ನೇಮ-ನಿಷ್ಠೆಯಿಂದ ಹುಟ್ಟಿದ ಕಂದಮ್ಮ 14 ತಿಂಗಳೂ ಬದುಕಲಿಲ್ಲ

ವಿಕ್ಸ್ ಡಬ್ಬಿ ಮುಚ್ಚಳ ನುಂಗಿ ಮಗು ಸಾವು: 18ವರ್ಷಗಳ ವೃತ-ನೇಮ-ನಿಷ್ಠೆಯಿಂದ ಹುಟ್ಟಿದ ಕಂದಮ್ಮ 14 ತಿಂಗಳೂ ಬದುಕಲಿಲ್ಲ


ರಾಜಸ್ಥಾನ: ಈ ದಂಪತಿಗೆ ಮದುವೆಯಾಗಿ 18 ವರ್ಷಗಳು ಕಳೆದರೂ ಮಕ್ಕಳಾಗಿರಲಿಲ್ಲ. ಇದ್ದ ದೇವರೆಗೆಲ್ಲಾ ಹರಕೆ ಹೇಳಿದರು, ಪೂಜೆ-ಪುನಸ್ಕಾರ, ವೃತ, ಆಯುರ್ವೇದ, ಗಿಡಮೂಲಿಕೆ ಹಾಗೂ ಆಸ್ಪತ್ರೆ ಚಿಕಿತ್ಸೆ ಸೇರಿ ಎಲ್ಲವನ್ನೂ ಮಾಡಿದರು. 18 ವರ್ಷಗಳ ಬಳಿಕ ಈ ದಂಪತಿಗೆ ಗಂಡು ಮಗುವೊಂದು ಜನಿಸಿತು. ದುರ್ದೈವವಶಾತ್, ಈ  ಮಗು ಕೇವಲ 14 ತಿಂಗಳೂ ಬದುಕಲಿಲ್ಲ. ವಿಕ್ಸ್ ಡಬ್ಬಿ ನುಂಗಿ, ಸಕಾಲಕ್ಕೆ ಚಿಕಿತ್ಸೆ ದೊರಕದೆ ತಂದೆ-ತಾಯಿಯ ಕೈಯಲ್ಲೇ ಪ್ರಾಣ ಬಿಟ್ಟಿತು.

ಈ ಘಟನೆ ರಾಜಸ್ಥಾನದ ಬಾಂಸ್ವಾಡದ ಲೋಹಾರಿ ಠಾಣಾ ಪ್ರದೇಶದ ಸರೆಡಿ ಪಟ್ಟಣದಲ್ಲಿ ನಡೆದಿದೆ. ಇನ್ನು 14 ತಿಂಗಳ ಮಗುವಿನ ಸಾವು ಇಡೀ ಗ್ರಾಮವನ್ನೇ ಶೋಕದಲ್ಲಿ ಮಡುವಿಗೆ ದೂಡುದೆ. ಆಟವಾಡುತ್ತಾ ಮಗು ವಿಕ್ಸ್ ಡಬ್ಬಿಯ ಮುಚ್ಚಳವನ್ನು ನುಂಗಿತ್ತು, ಆದರೆ, ಸಕಾಲಕ್ಕೆ ಚಿಕಿತ್ಸೆ ದೊರಕದೆ ಅದರ ಪ್ರಾಣಪಕ್ಷಿ ಹಾರಿ ಹೋಯಿತು.

ಸರೆಡಿ ಗ್ರಾಮದ ನಿವಾಸಿ ಹೀರೆನ್ ಜೋಶಿ ಅವರ ಪುತ್ರ ಮಾನ್ವಿಕ್ ಸೋಮವಾರ ರಾತ್ರಿ ವಿಕ್ಸ್ ಡಬ್ಬಿಯೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಡಬ್ಬಿಯ ಮುಚ್ಚಳ ನುಂಗಿದೆ. ಮನೆಯಲ್ಲಿದ್ದವರು ಮುಚ್ಚಳ ತೆಗೆಯಲು ಪ್ರಯತ್ನ ಮಾಡಿದರೂ ಸಾಧ್ಯವಾಗದೇ ಮಗುವಿನ ಉಸಿರುಗಟ್ಟುತ್ತಿತ್ತು. ಇದನ್ನು ನೋಡಿದ ಪೋಷಕರು ತಕ್ಷಣ ಸರೆಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ವೈದ್ಯರಿಲ್ಲದೆ ಆರೋಗ್ಯ ಕೇಂದ್ರದಲ್ಲಿ ಕೇವಲ ಒಬ್ಬ ನರ್ಸ್ ಮತ್ತು ಕಾಯಂ ಸಿಬ್ಬಂದಿ ಇದ್ದರು. ವೈದ್ಯರ ಅನುಪಸ್ಥಿತಿಯಿಂದಾಗಿ ಪೋಷಕರು ತಕ್ಷಣ ಮಗುವನ್ನು ಬಾಂಸ್ವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾರೆ‌. ಆದರೆ, ದಾರಿ ಮಧ್ಯೆ ಮಗು ಸಾವನ್ನಪ್ಪಿದೆ.

ಮಗು ಪ್ರಾಣಾಪಾಯದಲ್ಲಿದ್ದಾಗ ವೈದ್ಯರು ಲಭ್ಯವಿಲ್ಲದೇ ಚಿಕಿತ್ಸೆ ಸಿಗದ ಕಾರಣ ಬೇಸತ್ತ ಪೋಷಕರು ಸ್ಥಳೀಯ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಗಲಾಟೆ ಮಾಡಿದರು. ಆಸ್ಪತ್ರೆಗೆ ಬೀಗ ಹಾಕಿ ವೈದ್ಯಕೀಯ ಇಲಾಖೆ ಮತ್ತು ಆಡಳಿತದ ವಿರುದ್ಧ ಘೋಷಣೆ ಕೂಗಿದರು. ವೈದ್ಯರ ಅನುಪಸ್ಥಿತಿಯಿಂದಾಗಿ ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದ ಕಾರಣ ಪ್ರಾಣ ಹೋಗಿದೆ ಎಂದು ಆರೋಪಿಸಿದರು. ಇನ್ನು ಮೃತ ಮಗುವಿನ ತಂದೆ ಹೀರೆನ್ ಜೋಶಿ ಸರ್ಕಾರಿ ಶಿಕ್ಷಕರಾಗಿದ್ದಾರೆ.

ಇನ್ನು ಮಗು ವಿಕ್ಸ್ ಬಾಟಲಿ ಮುಚ್ಚಳ ನುಂಗಿದ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಸ್ಥಳೀಯ ವೈದ್ಯರು ಲಭ್ಯವಿದ್ದು, ಸೂಕ್ತ ಸಮಯಕ್ಕೆ ಚಿಕಿತ್ಸೆ ಲಭ್ಯವಾಗಿ ಮಗುವನ್ನು ಉಳಿಸಬಹುದಾಗಿತ್ತು. ಆದರೆ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಆಗಾಗ್ಗೆ ಗೈರುಹಾಜರಾಗುತ್ತಾರೆ. ತೀವ್ರ ತುರ್ತು ಸಂದರ್ಭಗಳಲ್ಲಿಯೂ ಚಿಕಿತ್ಸೆ ಸಿಗುವುದಿಲ್ಲ, ಇದರಿಂದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಾರೆ. ಮಗುವ ವಿಕ್ಸ್ ಡಬ್ಬಿಯ ಮುಚ್ಚಳ ನುಂಗಿದಾಗಲೂ ಚಿಕಿತ್ಸೆ ನೀಡಲು ವೈದ್ಯರು ಇರಲಿಲ್ಲ. ಆಸ್ಪತ್ರೆಗೆ ಬೀಗ ಜಡಿದು ಸ್ಥಳೀಯರು ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಆಗಮಿಸಿದ ಬ್ಲಾಕ್ ವೈದ್ಯಾಧಿಕಾರಿ ಮತ್ತು ಆಡಳಿತಾಧಿಕಾರಿಗಳು ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಜರಿರುವ ಬಗ್ಗೆ ಭರವಸೆ ನೀಡಿದರು. ನಂತರ ಪರಿಸ್ಥಿತಿ ಶಾಂತವಾಯಿತು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article