-->

ನಿಮ್ಮ ಮಕ್ಕಳು ವಿಪರೀತ ಸಿಹಿತಿಂಡಿ, ಚಾಕಲೇಟ್, ಸಕ್ಕರೆ ಸೇವಿಸುತ್ತಾರೆಯೋ? ಚಿಂತೆಬೇಡ ಈ ಟ್ರಿಕ್ಸ್ ಬಳಸಿ ಅದರಿಂದ ದೂರವಾಗಿಸಿ

ನಿಮ್ಮ ಮಕ್ಕಳು ವಿಪರೀತ ಸಿಹಿತಿಂಡಿ, ಚಾಕಲೇಟ್, ಸಕ್ಕರೆ ಸೇವಿಸುತ್ತಾರೆಯೋ? ಚಿಂತೆಬೇಡ ಈ ಟ್ರಿಕ್ಸ್ ಬಳಸಿ ಅದರಿಂದ ದೂರವಾಗಿಸಿ


ಮಕ್ಕಳಿಗೆ ಚಾಕಲೇಟ್, ಸಿಹಿತಿಂಡಿ, ಸಕ್ಕರೆ ಅಂದ್ರೆ ಬಲುಪ್ರೀತಿ. ಆದ್ರೆ ಮಕ್ಕಳು ಚಾಕಲೇಟ್, ಸ್ವೀಟ್ಸ್ ಹೆಚ್ಚಾಗಿ ತಿಂದಲ್ಲಿ ಅವರ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ತೂಕ ಹೆಚ್ಚುವುದು, ಮಧುಮೇಹ, ಹಲ್ಲಿನ ಕುಳಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ನಾವು ಎಷ್ಟೇ ಕಡಿವಾಣ ಹಾಕಿದರೂ ಮಕ್ಕಳು ಮಾತ್ರ ಸಿಹಿತಿಂಡಿ, ಸಕ್ಕರೆ, ಚಾಕಲೇಟ್ ತಿನ್ನೋದನ್ನು ಬಿಡಲ್ಲ. ಕೆಲವು ಟ್ರಿಕ್ಸ್‌ಗಳಿಂದ ಮಕ್ಕಳ ಸ್ವೀಟ್ಸ್‌ ಹಂಬಲಕ್ಕೆ ಬ್ರೇಕ್‌ ಹಾಕಬಹುದಂತೆ. ಹೇಗೆ ಎಂದು ನೋಡೋಣ.

ಮಕ್ಕಳ ಸಕ್ಕರೆ ಹಂಬಲ ಕಡಿಮೆ ಮಾಡೋದನ್ನು ಒಂದೇ ಸಲಕ್ಕೆ ಅದನ್ನು ಕೊಡೋದನ್ನು ಬಿಡೋದು ಸರಿಯಲ್ಲ. ಮೊದಲು ಕಡಿಮೆ ಪ್ರಮಾಣದಲ್ಲಿ ಕೊಡಲು ಶುರು ಮಾಡಬೇಕು. ಮಿಠಾಯಿ, ಕುಕೀಸ್, ಸೋಡಾ ತರಹದ ಸಕ್ಕರೆ ಪದಾರ್ಥಗಳನ್ನು ಮನೆಯಲ್ಲಿ ಇಡೋದನ್ನೇ ಬಿಡಬೇಕು. ಇದಕ್ಕೆ ಬದಲಾಗಿ ಹಣ್ಣು, ಬೀಜಗಳು, ತರಕಾರಿಗಳನ್ನು ಅವರ ಆಹಾರದಲ್ಲಿ ಸೇರಿಸಬೇಕು. ಇವುಗಳನ್ನು ತಿಂದರೆ ಸಕ್ಕರೆ ಹಂಬಲ ಕಡಿಮೆಯಾಗುತ್ತದೆ.

ಮಕ್ಕಳ ಸಿಹಿ ತಿನ್ನುವುದನ್ನು ಕಡಿಮೆ ಮಾಡೋಕೆ ಪೌಷ್ಟಿಕಾಂಶಗಳಿಂದ ಕೂಡಿದ ಸಮತೋಲಿತ ಆಹಾರ ಕೊಡಬೇಕು. ಮಕ್ಕಳಿಗೆ ಸಾಕಾಗುವಷ್ಟು ಪ್ರೋಟೀನ್, ಕಾರ್ಬೋಹೈಡ್ರೇಟ್ಸ್, ಆರೋಗ್ಯಕರ ಕೊಬ್ಬು ಇರೋದನ್ನು ಖಚಿತಪಡಿಸಿಕೊಳ್ಳಿ. ಅಗತ್ಯ ವಿಟಮಿನ್, ಖನಿಜಾಂಶಗಳನ್ನ ಕೊಡೋಕೆ ಹಣ್ಣು, ತರಕಾರಿಗಳನ್ನ ಆಹಾರದಲ್ಲಿ ಸೇರಿಸಿ.

ಮಕ್ಕಳು ಹೆಚ್ಚಾಗಿ ತಮ್ಮ ಪೋಷಕರನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಮೊದಲು ಪೋಷಕರು ಸಕ್ಕರೆ ಪದಾರ್ಥಗಳಿಂದ ದೂರ ಇದ್ದು, ಆರೋಗ್ಯಕರ ಆಹಾರ ಸೇವಿಸಬೇಕು. ಆಗ ಮಕ್ಕಳು ಕೂಡ ನಿಮ್ಮನ್ನ ನೋಡಿ ಆರೋಗ್ಯಕರ ಆಹಾರ ತಿನ್ನೋ ಅಭ್ಯಾಸ ಮಾಡ್ಕೋತಾರೆ.

 ಮಕ್ಕಳಿಗೆ ಕನಿಷ್ಠ ದೈಹಿಕ ವ್ಯಾಯಾಮ ಇರಲೇಬೇಕು. ಇದರಿಂದ ಅವರು ಉತ್ಸಾಹದಿಂದ ಇರುತ್ತಾರೆ, ಒತ್ತಡ ಕಡಿಮೆಯಾಗುತ್ತೆ. ಒತ್ತಡ ಕಡಿಮೆಯಾದ್ರೆ ಸಕ್ಕರೆ ಹಂಬಲನೂ ಕಡಿಮೆಯಾಗುತ್ತೆ. ಸೈಕ್ಲಿಂಗ್, ಡ್ಯಾನ್ಸ್, ಈಜು ಮಾಡಿಸುತ್ತಿರಿ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article