-->

ಕುಳ್ಳಿಯಾದ್ರೂ ಚಿಂತೆಬೇಡ, ಉದ್ದದ ಯುವಕರೂ ಇಷ್ಟಪಡೋದೂ ನಿಮ್ಮನ್ನೇ! ಇಲ್ಲಿದೆ ನೋಡಿ ಅಧ್ಯಯನ ವರದಿ

ಕುಳ್ಳಿಯಾದ್ರೂ ಚಿಂತೆಬೇಡ, ಉದ್ದದ ಯುವಕರೂ ಇಷ್ಟಪಡೋದೂ ನಿಮ್ಮನ್ನೇ! ಇಲ್ಲಿದೆ ನೋಡಿ ಅಧ್ಯಯನ ವರದಿ


ತಾನು ಕುಳ್ಳಿ ಇದ್ದೇನೆ. ನನ್ನನ್ನು ಯಾವ ಹುಡುಗನೂ ಇಷ್ಟಪಡೋದಿಲ್ಲ ಅನ್ನುವ ಚಿಂತೆ ಹುಡುಗಿಯರಲ್ಲಿದ್ರೆ ತಕ್ಷಣವೇ ಬಿಟ್ಟುಬಿಡಿ. ಯಾಕೆಂದರೆ, ಇತ್ತೀಚಿನ ದಿನಗಳಲ್ಲಿ ನಡೆದ ಅಧ್ಯಯನವೊಂದು ಸತ್ಯವೊಂದನ್ನು ಬಹಿರಂಗಪಡಿಸಿದೆ. ಉದ್ದ ಇರುವ ಹುಡುಗಿಯರಿಗಿಂತ ಪುರುಷರು, ಕುಳ್ಳಗಿನ ಯುವತಿಯರತ್ತಲೇ ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರಂತೆ.

ಹಾಗೆಂದು ಇದೊಂದು ಸುಖಾಸುಮ್ಮನೆ ನಡೆಸಿದ ಅಧ್ಯಯನವಲ್ಲ. ಈ ವಿಚಾರಕ್ಕೆ ವೈಜ್ಞಾನಿಕ ಕಾರಣವನ್ನೂ ಸಂಶೋಧನೆ ನೀಡಿದ್ದು. ಅಷ್ಟಕ್ಕೂ ಈ ಅಧ್ಯಯನ ಮಾಡಿರುವುದು ಯೂನಿವರ್ಸಿಟಿ ಆಫ್ ನಾರ್ತ್ ಟೆಕ್ಸಾಸ್. ಇದರ ವಿವರಗಳನ್ನು ಇತ್ತೀಚಿಗೆ ಬಹಿರಂಗಪಡಿಸಿದೆ.
 
ಸಾಮಾನ್ಯವಾಗಿ ಯುವಕರು ತಮ್ಮಷ್ಟೇ ಎತ್ತರವಿರುವ ಅಥವಾ ತಮಗಿಂತ ಎತ್ತರವಿರುವ ಯುವತಿಯರಿಗಿಂತ ಕುಳ್ಳಗಿನ ಯುವತಿಯರತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಅಲ್ಲದೆ, ಈ ಆಕರ್ಷಣೆಗೆ ಕೆಲವು ಕಾರಣಗಳನ್ನು ಕೂಡ ನೀಡಿದೆ.

ತಬ್ಬಿಕೊಳ್ಳೋಕೆ ಬೆಸ್ಟ್‌: ಸಾಮಾನ್ಯವಾಗಿ ಕುಳ್ಳಿ ಇರುವ ಹುಡುಗಿಯರು ಪುರುಷರ ಎದೆಯ ಮಟ್ಟಕ್ಕೆ ಬರುತ್ತಾರೆ.  ತಮ್ಮ ಎದೆಮಟ್ಟಕ್ಕೆ ಬರುವ ಸಂಗಾತಿಯನ್ನು ತಬ್ಬಿಕೊಳ್ಳಲು ಪುರುಷರು ಬಹಳ ಇಷ್ಟಪಡುತ್ತಾರೆ. ಅಂದರೆ ತಮ್ಮ ಎದೆಬಡಿತ ಆಕೆಯ ಕಿವಿಗೆ ಕೇಳಬೇಕೆಂದು ಪುರುಷರು ಬಯಸುತ್ತಾರೆ.

ಶಾರ್ಟ್‌ ಗರ್ಲ್ಸ್‌ ರೊಮ್ಯಾಂಟಿಕ್‌: ಕುಳ್ಳಗಿರುವ ಯುವತಿಯರು, ಸ್ವಭಾವತಃ ಉದ್ದ ಇರುವ ಯುವತಿಯರಿಗಿಂತ ಹೆಚ್ಚು ರೊಮ್ಯಾಂಟಿಕ್‌ ಆಗಿರುತ್ತಾರೆ. ಅಂದ್ಎ, ಕುಳ್ಳಗಿನ ಮಹಿಳೆಯರು ಯಾವಾಗಲೂ ತಮ್ಮ ಸಂಗಾತಿಯನ್ನು ಸಖತ್‌ ಖುಷಿಯಾಗಿ ಇಟ್ಟುಕೊಳ್ಳುತ್ತಾರಂತೆ. ಪ್ರೀತಿಯನ್ನು ಅತ್ಯಂತ ಮುಕ್ತವಾಗಿ ತಿಳಿಸುತ್ತಾರೆ.

ವಿವಾಹ ಬಂಧ ಬಲಿಷ್ಠ: ಕುಳ್ಳಿ ಯುವತಿ ಹಾಗೂ ಉದ್ದನೆಯ ಯುವಕನ ನಡುವಿನ ವಿವಾಹ ಬಂಧ ಸಂತೋಷ, ಬಲಿಷ್ಠವಾಗಿರುತ್ತದೆ. ಪತ್ನಿ ಎತ್ತರವಿದ್ದರೆ ಆಕೆಗೆ ಹೆಚ್ಚು ಆತ್ಮವಿಶ್ವಾಸ ಹಾಗೂ ಸ್ವಲ್ಪ ಕೋಪಿಷ್ಠೆ ಆಗಿರುತ್ತಾಳೆ ಅನ್ನುವ ಅಸುರಕ್ಷಿತ ಭಾವನೆಯು ಪುರುಷರಲ್ಲಿ ಇರುತ್ತದೆ.

ಸಂಬಂಧಗಳಲ್ಲಿ ಗಂಭೀರ: ಕುಳ್ಳಿ ಯುವತಿಯರು ಪತಿ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಯುವಕರು ನಂಬುತ್ತಾರೆ. ಎತ್ತರವಿರುವ ಮಹಿಳೆಯರಿಗೆ ಹೋಲಿಸಿದರೆ, ಕುಳ್ಳಗಿನ ಮಹಿಳೆಯರು ಸಂಬಂಧಗಳಲ್ಲಿ ಹೆಚ್ಚು ಗಂಭೀರವಾಗಿರುತ್ತಾರೆ.

ಮೆದುಳು ತೀಕ್ಷ್ಣ: ಯುವಕರು ಕುಳ್ಳಗಿದ್ದರೂ ಉದ್ದ ಕೂದಲು ಮತ್ತು ಉತ್ತಮ ಆಕಾರವನ್ನು ಹೊಂದಿರುವ ಮಹಿಳೆಯರನ್ನು ಬಯಸುತ್ತಾರೆ. ವರದಿಯ ಪ್ರಕಾರ, ಕುಳ್ಳಗಿರುವ ಮಹಿಳೆಯರ ಮಿದುಳು ಎತ್ತರದ ಮಹಿಳೆಯರಿಗಿಂತ ತೀಕ್ಷ್ಣವಾಗಿರುತ್ತದೆ ಎಂದು ಬ್ರೂನೆಲ್ ವಿಶ್ವವಿದ್ಯಾಲಯದ ವರದಿ ತಿಳಿಸಿದೆ.

ಸರಸವಾಡಲು ಸಲೀಸು: ಪುರುಷ ತನಗಿಂತ ಕುಳ್ಳಗಿರುವ ಯುವತಿಯನ್ನು ತೋಳುಗಳಲ್ಲಿ ಹಿಡಿದಿರೆ, ಅವಳು ಆತನಲ್ಲಿ ಸಂಪೂರ್ಣವಾಗಿ ಲೀನವಾಗುತ್ತಾಳೆ. ಆ ವ್ಯಕ್ತಿ ಅವಳನ್ನು ತಬ್ಬಿಕೊಂಡು ಆನಂದಿಸುತ್ತಾನೆ. ಇದು ಅವರ ಬಂಧಕ್ಕೆ ಸಂತೋಷದ ಕ್ಷಣವನ್ನು ಸೇರಿಸುತ್ತದೆ.  ಮತ್ತೊಂದೆಡೆ, ಪುರುಷರು ಸಮಾನ ಅಥವಾ ಹೆಚ್ಚಿನ ಎತ್ತರವಿರುವ ಮಹಿಳೆಯರೊಂದಿಗೆ ಸರಸವಾಡಲು ಕಷ್ಟಪಡುತ್ತಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article