-->

ವಾಟ್ಸ್ಆ್ಯಪ್‌ಗೆ ಅಪರಿಚಿತರಿಂದ ವೆಡ್ಡಿಂಗ್ ಇನ್ವಿಟೇಷನ್ ಬಂದಿದೆಯೇ ಡೌನ್ಲೋಡ್ ಮಾಡದಿರಿ: ಇದು ಹೊಸಬಗೆಯ ಸ್ಕ್ಯಾಮ್

ವಾಟ್ಸ್ಆ್ಯಪ್‌ಗೆ ಅಪರಿಚಿತರಿಂದ ವೆಡ್ಡಿಂಗ್ ಇನ್ವಿಟೇಷನ್ ಬಂದಿದೆಯೇ ಡೌನ್ಲೋಡ್ ಮಾಡದಿರಿ: ಇದು ಹೊಸಬಗೆಯ ಸ್ಕ್ಯಾಮ್



ನವದೆಹಲಿ: ಇನ್ನೇನು ಮದುವೆ ಸೀಸನ್ ಆರಂಭವಾಗಿದೆ. ಈ ಆಧುನಿಕ ಯುಗದಲ್ಲಿ ಕುಟುಂಬಸ್ಥರು, ಆಪ್ತರ ಮನೆಗೆ ತೆರಳಿ ಮದುವೆ ಆಮಂತ್ರಣ ಪತ್ರಿಕೆ ನೀಡುವುದು ಕಷ್ಟ. ಬಹುತೇಕರು ಡಿಜಿಟಲ್ ಆಮಂತ್ರಣ ಪತ್ರಿಕೆಯನ್ನು ವ್ಯಾಟ್ಸ್‌ಆ್ಯಪ್ ಮೂಲಕ ಹಂಚಲಾಗುತ್ತದೆ. ಬಳಿಕ ಕರೆ ಮಾಡಿ ಮದುವೆಗೆ ಆಮಂತ್ರಣ ಮಾಡುವ ಪದ್ದತಿಯೇ ಈಗ ಹೆಚ್ಚು ಹಾಗೂ ಸುಲಭ. ಆದರೆ ಇದೇ ಡಿಜಿಟಲ್ ಮದುವೆ ಆಮಂತ್ರಣ ಪತ್ರವನ್ನು ಸೈಬರ್ ಕ್ರೈಮ್ ಕಿರಾತಕರು ಬಳಸಿಕೊಂಡಿದ್ದಾರೆ. ನಿಮಗೆ ವ್ಯಾಟ್ಸ್‌ಆ್ಯಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದರೆ ಡೌನ್ಲೋಡ್ ಮಾಡುವ ಮುನ್ನ ಹೊಸ ವೆಡ್ಡಿಂಗ್ ಸೈಬರ್ ಸ್ಕ್ಯಾಮ್ ಬಗ್ಗೆ ತಿಳಿದುಕೊಳ್ಳಿ.

ಹಿಮಾಚಲ ಪ್ರದೇಶದ ಸೈಬರ್ ಪೊಲೀಸರು ಇದೀಗ ಹೊಸ ಸೈಬರ್ ಸ್ಕ್ಯಾಮ್ ಕುರಿತು ಎಚ್ಚರಿಸಿದ್ದಾರೆ. ಒಂದು ಸಣ್ಣ ತಪ್ಪಿನಿಂದ ಅತೀ ದೊಡ್ಡ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಬಹುದು ಎಂದು ಹಿಮಾಚಲ ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ. ಡಿಜಿಟಲ್ ವಂಚನೆ ದಿನ ಹೋದಂತೆ ಹೊಸಹೊಸ ರೂಪ ಪಡೆದುಕೊಳ್ಳುತ್ತಿದೆ. ಸೈಬರ್ ಕ್ರೈಂ ಪೊಲೀಸರು ಅದಷ್ಟೇ ಬಿಗಿ ಹಿಡಿತ ಸಾಧಿಸಿದರೂ ಹೊಸ ವಿಧಾನ, ಹೊಸ ರೂಪದಲ್ಲಿ ವಂಚನೆ ನಡೆಯುತ್ತಲೇ ಇದೆ. ಇದೀಗ ಪತ್ತೆಯಾಗಿರುವ ಡಿಜಿಟಲ್ ವೆಡ್ಡಿಂಗ್ ಕಾರ್ಡ್ ಸ್ಕ್ಯಾಮ್ ನಿಮಗೆ ಅಚ್ಚರಿಯಾಗುವುದು ಖಚಿತ. 

ಏನಿದು ಡಿಜಿಟಲ್ ವೆಡ್ಡಿಂಗ್ ಕಾರ್ಡ್ ಸೈಬರ್ ಸ್ಕ್ಯಾಮ್?
ನಿಮ್ಮ ವ್ಯಾಟ್ಸ್ಆ‌್ಯಪ್ ನಂಬರ್‌ಗೆ ಅಪರಿಚಿತರು ಅಥವಾ ಪರಿಚಿತರಲ್ಲದವರು ಮದುವೆ ಆಮಂತ್ರಣ ಪತ್ರಿಕೆಯನ್ನು ಕಳುಹಿಸುತ್ತಾರೆ. ಒಂದು ಡೌನ್ಲೋಡ್ ಫೈಲ್ ಆಮಂತ್ರಣ ಪತ್ರಿಕೆ. ಮೇಲ್ನೋಟಕ್ಕೆ ಎಲ್ಲರೂ ಕಳುಹಿಸುವ ಆಮಂತ್ರಣ ಪತ್ರಿಕೆ. ಈ ಆಮಂತ್ರಣ ಪತ್ರಿಕೆಯಲ್ಲಿ ವರ ಹಾಗೂ ವಧುವಿನ ಹೆಸರು, ಮದುವೆ ದಿನಾಂಕ, ಮುಹೂರ್ತ, ಸ್ಥಳ ಸೇರಿದಂತೆ ಎಲ್ಲಾ ಮಾಹಿತಿಯೂ ಇರಲಿದೆ. ಆದರೆ ಈ ಮಾಹಿತಿ, ಈ ಮದುವೆ ನಕಲಿ. ಈ ಡೌನ್ಲೋಡ್ ಫೈಲ್ ಕಳುಹಿಸುವ ಜೊತೆಗೆ ಟೆಕ್ಸ್ಟ್ ಮೆಸೇಜ್ ಕೂಡ ಕಳುಹಿಸಿದ್ದಾರೆ. ದಯವಿಟ್ಟು ಮದುವೆ ಬಂದು ಹರಸಿ, ಸಮಯದ ಅಭಾವದಿಂದ ವ್ಯಾಟ್ಸಾಪ್ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಿದ್ದೇನೆ, ಅನ್ಯತಾ ಭಾವಿಸದೆ ದಯವಿಟ್ಟು ಮದುವೆಗೆ ಬನ್ನಿ ಎಂದು ಬರೆಯುತ್ತಾರೆ. 

ಅನಾಮಿಕ ಅಥವಾ ನಿಮ್ಮ ಫೋನ್‌ನಲ್ಲಿ ಸೇವ್ ಇಲ್ಲದ ನಂಬರ್‌ನಿಂದ ಈ ರೀತಿಯ ಟೆಕ್ಸ್ಟ್ ಮೆಸೇಜ್ ಜೊತೆ ಡಿಜಿಟಲ್ ಕಾರ್ಡ್ ಬಂದಾಗ? ಸಹಜವಾಗಿ ಯಾರೋ ಕುಟುಂಬಸ್ಥರು, ಆಪ್ತರು, ಗೆಳೆಯರು ಇರಬಹುದು. ಆಮಂತ್ರಣ ಪತ್ರಿಕೆ ನೋಡಿದಾಗ ಯಾರು ಅನ್ನೋದು ತಿಳಿಯಲಿದೆ ಎಂದುಕೊಂಡು ಡೌನ್ಲೋಡ್ ಮಾಡಿದರೆ ಅಲ್ಲೀಗೆ ಕತೆ ಮುಗೀತು. ಕಾರಣ ಈ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡುತ್ತಿದ್ದಂತೆ ಮಾಲ್‌ವೇರ್ ವೈರಸ್ ನಿಮ್ಮ ಫೋನ್ ಸೇರಿಕೊಳ್ಳಲಿದೆ. ಇದರಿಂದ ನಿಮ್ಮ ಫೋನ್‌ನಿಂದ ರಹಸ್ಯವಾಗಿ ಸೈಬರ್ ಕ್ರೈಂ ಕಿರಾತಕರು ಮಾಹಿತಿ ಕದಿಯುತ್ತಾರೆ. ಪ್ರಮುಖವಾಗಿ ಬ್ಯಾಂಕ್ ಖಾತೆ, ಗೂಗಲ್ ಪೇ, ಫೋನ್ ಪೇ ಸೇರಿದಂತೆ ಖಾತೆಗಳ ಮಾಹಿತಿ ಕದ್ದು ಹಣ ಗುಳುಂ ಮಾಡುತ್ತಾರೆ. ನೀವು ಮದುವೆ ಆಮಂತ್ರಣ ಡೌನ್ಲೋಡ್ ಮಾಡಿ ಓದಿ ಮುಗಿಸುವಷ್ಟರಲ್ಲಿ ನಿಮ್ಮ ಖಾತೆ ಖಾಲಿಯಾಗಲಿದೆ. 

ಇಲ್ಲಿ ನಿಮ್ಮನ್ನು ಟಾರ್ಗೆಟ್ ಮಾಡಿ ಆಮಂತ್ರಣ ಪತ್ರಿಕೆ ಕಳುಹಿಸುವುದಿಲ್ಲ. ಸಿಕ್ಕ ಸಿಕ್ಕ ನಂಬರ್‌ಗೆ ಈ ರೀತಿ ಆಮಂತ್ರಣ ಪತ್ರಿಕೆ ಕಳುಹಿಸಲಾಗುತ್ತದೆ. ಲಕ್ಷಾಂತರ ಮಂದಿಗೆ ಈ ಆಮಂತ್ರಣ ಪತ್ರಿಕೆ ಫಾರ್ವರ್ಡ್ ಮಾಡುತ್ತಾರೆ. ಈ ಪೈಕಿ ಸಾವಿರಾರು ಅಥವಾ ನೂರಾರು ಮಂದಿ ಡೌನ್ಲೋಡ್ ಮಾಡಿದರೂ ಸಾಕು. ಸೈಬರ್ ಕ್ರೈಂ ಕಿರಾತಕರ ಪ್ಲ್ಯಾನ್ ಸಕ್ಸಸ್. ಹೀಗಾಗಿ ಅತೀವ ಎಚ್ಚರವಹಿಸುವಂತೆ ಹಿಮಾಚಲ ಪ್ರದೇಶ ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ. ಅನಾಮಿಕರ ನಂಬರ್, ನಿಮಗೆ ಗೊತ್ತಿಲ್ಲದ ನಂಬರ್‌ಗಳಿಂದ ಡೌನ್ಲೋಡ್ ಫೈಲ್ ಬಂದರೆ, ಮದುವೆ ಆಮಂತ್ರಣ ಪತ್ರಿಕೆ ಬಂದರೆ ಡೌನ್ಲೋಡ್ ಮಾಡಲು ಹೋಗಬೇಡಿ. 

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article