.jpg)
ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗ: ಕುಪ್ಪೆಪದವಿನಲ್ಲಿ ರೈತ ಸಂಘ ಬೃಹತ್ ಪ್ರತಿಭಟನೆ
ಉಡುಪಿ-ಕಾಸರಗೋಡು ವಿದ್ಯುತ್ ಮಾರ್ಗ: ಕುಪ್ಪೆಪದವಿನಲ್ಲಿ ರೈತ ಸಂಘ ಬೃಹತ್ ಪ್ರತಿಭಟನೆ
ಕರ್ನಾಟಕದ ಉಡುಪಿಯಿಂದ ಮಂಗಳೂರು ಕುಪ್ಪೆಪದವು ವಿಟ್ಲ ಮೂಲಕ ಕಾಸರಗೋಡು ವರೆಗೆ ಹಾದುಹೋಗುವ ಉದ್ದೇಶಿತ 440 ಹೈಟೆನ್ಷನ್ ವಿದ್ಯುತ್ ಮಾರ್ಗ ವಿರೋಧಿಸಿದ ರೈತ ಸಂಘ ನಿರಂತರ ಚಳವಳಿ ರೂಪಿಸಿದೆ.
ಕುಪ್ಪೆಪದವು ಗ್ರಾಮದಲ್ಲಿ ರೈತ ಸಂಘ ಬೃಹತ್ ಪ್ರತಿಭಟನೆ ನಡೆಸಿದ್ದು, ಕಾಮಗಾರಿ ನಡೆಯುವ ಸ್ಥಳದಲ್ಲಿ ಪ್ರತಿರೋಧ ತೋರಿದೆ.
ಮಂಗಳೂರು, ಬಂಟ್ವಾಳ, ವಿಟ್ಲ ಮತ್ತು ಉಡುಪಿ ಜಿಲ್ಲೆಯಿಂದ ಆಗಮಿಸಿದ ರೈತ ಮುಖಂಡರು ಮತ್ತು ಸಂತ್ರಸ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮನೋಹರ್ ಶೆಟ್ಟಿ ನಡಿಕಂಬಳಗುತ್ತು ಅವರು ಕಂಪೆನಿಯು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಈ ಕಾಮಗಾರಿ ನಡೆಯುತ್ತಿದೆ ಎಂದು ಆರೋಪಿಸಿದರು.
ಈ ಯೋಜನೆಯ ವಿರುದ್ಧ ಕಾನೂನಾತ್ಮಕ ಹೋರಾಟ ರೂಪಿಸುತ್ತೇವೆ. ಮತ್ತು ಪ್ರಬಲ ಜನ ಚಳವಳಿಯನ್ನು ಕಟ್ಟುತ್ತೇವೆ. ಜನಾಭಿಪ್ರಾಯದ ಮೂಲಕ ಕಾಮಗಾರಿಯನ್ನು ತಡೆಯುತ್ತೇವೆ ಎಂದು ರೈತ ಸಂಘದ ನಾಯಕರು ಸವಾಲು ಹಾಕಿದರು.