-->

1,500 ರೂ.ನಿಂದ ಮಹಿಳೆ ಆರಂಭಿಸಿದ ಉದ್ಯಮ ಇಂದು 3ಕೋಟಿ ಮೌಲ್ಯದ ಕಂಪೆನಿ

1,500 ರೂ.ನಿಂದ ಮಹಿಳೆ ಆರಂಭಿಸಿದ ಉದ್ಯಮ ಇಂದು 3ಕೋಟಿ ಮೌಲ್ಯದ ಕಂಪೆನಿ


ಗೋರಖ್‌ಪುರ: ಉತ್ತರಪ್ರದೇಶದ ಗೊರಖ್‌ಪುರ ಜಿಲ್ಲೆಯ ಸಂಗೀತಾ ಪಾಂಡೆ ಎಂಬವರು 1,500 ರೂ.ನಿಂದ ಆರಂಭಿಸಿದ ಉದ್ಯಮ ಇಂದು 3 ಕೋಟಿ ಮೌಲ್ಯದ ಕಂಪೆನಿಯಾಗಿ ಬೆಳೆದಿದೆ. ಸಾಮಾನ್ಯ ಕುಟುಂಬದ ಗೃಹಿಣಿ ಸಂಗೀತಾ ಪಾಂಡೆ ಇಂದು ಹಲವು ಮಹಿಳೆಯರಿಗೆ ಉದ್ಯೋಗವನ್ನು ನೀಡಿ, ಅವರಿಗೆ ಸ್ಪೂರ್ತಿಯಾಗಿದ್ದಾರೆ. ಕುಟುಂಬದ ಜವಾಬ್ದಾರಿಗಳನ್ನು ಮರೆಯದ ಸಂಗೀತಾ ಪಾಂಡೆ ಯಶಸ್ವಿ ಉದ್ಯಮಿಯಾಗಿದ್ದಾರೆ.


ಗೊರಖ್‌ಪುರದ ಸಾಧಾರಣ ಕುಟುಂಬದ ಮಹಿಳೆ ಸಂಗೀತಾ ಪಾಂಡೆ ಜೀವನ ಸದಾ ಆರ್ಥಿಕ ಸಂಘರ್ಷದಿಂದ ಕೂಡಿತ್ತು. ಜೀವನದ ಪ್ರತಿಯೊಂದು ಹಂತದಲ್ಲಿಯೂ ಸವಾಲುಗಳನ್ನು ಎದುರಿಸುತ್ತಲೇ ಬಂದ ಸಂಗೀತಾ ಪಾಂಡೆ, ಗೊರಖ್‌ಪುರ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. 10 ವರ್ಷಗಳ ಹಿಂದೆ ಸಂಗೀತಾ ಕುಟುಂಬದ ಆರ್ಥಿಕ ಪರಿಸ್ಥಿತಿ ತುಂಬಾ ಕುಸಿದಿತ್ತು. ಹೊರಗೆ ಕೆಲಸ ಮಾಡೋಣ ಅಂದ್ರೆ ಮನೆಯಲ್ಲಿ ಚಿಕ್ಕ ಮಕ್ಕಳ ಜವಾಬ್ದಾರಿ ಇತ್ತು. ಹಾಗಾಗಿ ಮನೆಯಲ್ಲಿದ್ದುಕೊಂಡು ಏನಾದರೂ ಮಾಡಬೇಕು ಅಂತ ಅಂದುಕೊಂಡಾಗ ಕಣ್ಮುಂದೆ ಬಂದಿದ್ದು ಸಿಹಿ ತಿಂಡಿಯ ಬಾಕ್ಸ್ ತಯಾರಿಕೆ. 


10 ವರ್ಷಗಳ ಹಿಂದೆ ಕೇವಲ 1,500 ರೂ. ಬಂಡವಾಳ ಹೂಡಿಕೆ ಮಾಡಿ ತಮ್ಮ ಉದ್ಯಮವನ್ನು ಆರಂಭಿಸಿದರು. ತಾವೇ ಅಂಗಡಿಗಳಿಗೆ ತೆರಳಿ ಬಾಕ್ಸ್ ತಯಾರಿಸಲು ಬೇಕಾಗುವ ಕಚ್ಛಾ ವಸ್ತುಗಳನ್ನು ಸೈಕಲ್ ಮೇಲೆ ತೆಗೆದುಕೊಂಡು ಬರುತ್ತಿದ್ದರು. ನಂತರ ಬಾಕ್ಸ್ ತಯಾರಿಸಿ ಸೈಕಲ್ ಮೇಲೆ ಹೋಗಿ ತಲುಪಿಸುತ್ತಿದ್ದರು. ಸಂಗೀತಾ ಪಾಂಡೆ ಹಲವು ಸವಾಲು ಮತ್ತು ಟೀಕೆಗಳನ್ನು ಸಹ ಎದುರಿಸಿದ್ದಾರೆ. ಯಾವುದಕ್ಕೂ ಎದೆಗುಂದದ ಸಂಗೀತಾ ಪಾಂಡೆ ಇಂದು ಮೂರು ಕೋಟಿ ಮೌಲ್ಯದ ಕಂಪನಿಯ ಒಡತಿಯಾಗಿದ್ದಾರೆ.


ಸಂಗೀತಾ ಪಾಂಡೆ ಮೊದಲ ದಿನ 100 ಬಾಕ್ಸ್ ತಯಾರಿಸಿ ಮಾರಾಟ ಮಾಡಿದ್ದರು. ನಂತರ ಗ್ರಾಹಕರ ವಿಶ್ವಾಸ ಮತ್ತು ನಂಬಿಕೆ ಗಳಿಸಲು ಬೇಡಿಕೆಗೆ ತಕ್ಕಂತೆ ಬಾಕ್ಸ್ ಡಿಸೈನ್ ಮತ್ತು ಕ್ವಾಲಿಟಿಯನ್ನು ಬದಲಿಸಿದ್ದರು. ಇಂತಹ ಸಂದರ್ಭದಲ್ಲಿ ನಷ್ಟ ಆಗಿರುವ ಪ್ರಸಂಗ ಸಹ ಎದುರಾಗಿತ್ತು. ಅಂತಿಮವಾಗಿ ಲಕ್ನೋದಿಂದ ಕಚ್ಛಾ ವಸ್ತುಗಳನ್ನು ಖರೀದಿ ಮಾಡಲ ಶುರು ಮಾಡಿದಾಗ ಡಬ್ಬಗಳ ಗುಣಮಟ್ಟ ಸುಧಾರಣೆ ಜೊತೆಯಲ್ಲಿ ಲಾಭದ ಪ್ರಮಾಣವೂ ಹೆಚ್ಚಳವಾಯ್ತು. ಹಂತ ಹಂತ ವ್ಯಾಪಾರ ವಿಸ್ತರಣೆ ಮಾಡಿಕೊಂಡು ಬೆಳೆದಿದ್ದಾರೆ. 


ಮುಂದಿನ ದಿನಗಳಲ್ಲಿ 35 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಫ್ಯಾಕ್ಟರಿ ಆರಂಭಿಸಿ, ಉತ್ಪಾದನೆಯನ್ನು ಹೆಚ್ಚಿಸಿಕೊಂಡರು. ಇಂದು ಡಬ್ಬಗಳ ತಯಾರಿಕೆಗಾಗಿ ಆಧುನಿಕ ಯಂತ್ರೋಪಕರಣಗಳನ್ನು ಬಳಕೆ ಮಾಡುತ್ತಿದ್ದಾರೆ. ಈಗ ಈ ಬಾರಿಯ ದೀಪಾವಳಿಗೆ ಗೋವಿನ ಸಗಣಿಯಿಂದ ತಯಾರಿಸಿದ ವಿಶೇಷ ಸಾವಯವ ದೀಪಗಳನ್ನು ಸಿದ್ಧಪಡಿಸುತ್ತಿದ್ದಾರೆ. 100ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗವನ್ನೂ ನೀಡಿದ್ದಾರೆ.


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article