ಇಬ್ಬರು ಸ್ನೇಹಿತೆಯರಿಗೆ ಒಬ್ಬನೇ ಪ್ರಿಯಕರ : ಗೋರಖ್‌ಪುರದ ವಿಶಿಷ್ಟ ಪ್ರೇಮಕಥೆ
Wednesday, October 23, 2024
ಗೋರಖ್‌ಪುರ: ಉತ್ತರಪ್ರದೇಶದ ಗೋರಖ್‌ಪುರದಲ್ಲಿ ವಿಶಿಷ್ಟವೂ ವಿಚಿತ್ರವೂ ಆದ ಪ್ರೇಮಕಥೆ ಘಟಿಸಿದೆ. ಇಲ್ಲಿ ಇಬ್ಬರು ಅಪ್ರಾಪ್ತ ವಯಸ್ಕ ಸ್ನೇಹಿತೆಯರು ಒಬ್ಬನನ್ನೇ ಪ್ರೀತಿಸಲು ಪ್ರಾರಂಭಿಸಿ, ಆತನೊಂದಿಗೆ ಪರಾರಿಯಾಗಿದ್ದಾರೆ.
ಈ ವಿಶಿಷ್ಟ ಪ್ರೇಮಕಥೆ ಗೋರಖ್‌ಪುರದ ಶಾಹಪುರ ಠಾಣಾ ವ್ಯಾಪ್ತಿಯದ್ದಾಗಿದೆ. 12ನೇ ತರಗತಿಯಲ್ಲಿ ಓದುತ್ತಿದ್ದ ಇಬ್ಬರು ಸ್ನೇಹಿತೆಯರು ಒಬ್ಬನೇ ಯುವಕನನ್ನು ಪ್ರೀತಿಸುತ್ತಿದ್ದರು. ಓರ್ವಾಕೆ ಯುವತಿಯ ತಾಯಿ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಯುವತಿಯ ಮೊಬೈಲ್ ಅನ್ನು ನಿಗಾದಲ್ಲಿಟ್ಟು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಕೊನೆಗೆ ಮೂವರನ್ನೂ ಬಿಹಾರದ ಗೋಪಾಲ್‌ಗಂಜ್‌ನಿಂದ ಬಂಧಿಸಲಾಯಿತು. ಓರ್ವ ಯುವತಿ ಹಾಗೂ ಆ ಯುವಕ ಮಾತ್ರವೇ ಪ್ರೀತಿ ಮಾಡ್ತಿದ್ದರು. ಈಕೆ ತನ್ನ ಪ್ರೇಮಿಯನ್ನು ಭೇಟಿ ಮಾಡುವ ವೇಳೆಗೆ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಬರ್ತಿದ್ದಳು. ಕೊನೆಗೆ ಈ ಸ್ನೇಹಿತೆಯೂ ಕೂಡ ಯುವಕನ ಪ್ರೇಮದ ಬಲೆಗೆ ಬಿದ್ದಿದ್ದಾಳೆ.
ಇಬ್ಬರು ಯುವತಿಯರು ಪೊಲೀಸರಿಗೆ, “ನಮ್ಮ ಪ್ರೀತಿ ಮೂರು ವರ್ಷ ಹಳೆಯದು. ನಾವು ಮೂವರೂ ಜೀವನಪೂರ್ತಿ ಒಟ್ಟಿಗೆ ಬದುಕಬೇಕೆಂದು ಬಯಸುತ್ತೇವೆ” ಎಂದು ತಿಳಿಸಿದ್ದಾರೆ. ಯುವಕ ಪೊಲೀಸರಿಗೆ, “ನಾವು ಮೊದಲು ಲಕ್ನೋಗೆ ತಲುಪಿದೆವು ಮತ್ತು ಅಲ್ಲಿಂದ ಬಿಹಾರಕ್ಕೆ ಹೋದೆವು. ಆಧಾರ್ ಕಾರ್ಡ್ ತೋರಿಸಬೇಕಾದ ಕಾರಣ ಹೋಟೆಲ್‌ನಲ್ಲಿ ಉಳಿದುಕೊಂಡಿರಲಿಲ್ಲ” ಎಂದು ಹೇಳಿದ್ದಾನೆ.