-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ನಟ-ನಟಿಯರ ಜಾಹಿರಾತು ಮೋಡಿಗೆ ಬಲಿಯಾಗಿ ಅದನ್ನೇ ಬಳಸುತ್ತಿದ್ದೀರಾ?: ಈ ವೀಡಿಯೋದಲ್ಲಿದೆ ಅಸಲಿಯತ್ತು

ನಟ-ನಟಿಯರ ಜಾಹಿರಾತು ಮೋಡಿಗೆ ಬಲಿಯಾಗಿ ಅದನ್ನೇ ಬಳಸುತ್ತಿದ್ದೀರಾ?: ಈ ವೀಡಿಯೋದಲ್ಲಿದೆ ಅಸಲಿಯತ್ತು

ಬೆಂಗಳೂರು: ಜಾಹೀರಾತಿನಲ್ಲಿ ತೋರಿಸುವುದೆಲ್ಲವೂ ಸತ್ಯವೇ ಎಂದು ಕೇಳಿದರೆ, ಯಾವುದೂ ಸತ್ಯವೇ ಅಲ್ಲ ಎನ್ನುವ ಸತ್ಯ ಬಹುತೇಕ ಎಲ್ಲರಿಗೂ ಗೊತ್ತಿದ್ದದ್ದೇ. ಕೆಲ ನಟ-ನಟಿಯರು ಕೋಟಿ ಕೋಟಿ ಹಣ ಪಡೆದು ಜಾಹೀರಾತುಗಳಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು, ತಮ್ಮ ಅಭಿಮಾನಿಗಳನ್ನು ತಪ್ಪುದಾರಿಗೆ ಎಳೆಯುವುದು ದೊಡ್ಡ ದುರಂತವೆಂದರೂ ತಪ್ಪಾಗಲಿಕ್ಕಿಲ್ಲ. 

ಕೆಲವು ವಿದೇಶಿ ಪಾನೀಯಗಳ ಜಾಹೀರಾತುಗಳಲ್ಲಿ ನಟಿಸುವ ಚಿತ್ರನಟರು, ಕ್ರಿಕೆಟಿಗರನ್ನು ನೋಡಿ ಪ್ರತಿನಿತ್ಯ ವಿಷ ಸೇವನೆ ಮಾಡಿ ಕ್ಯಾನ್ಸರ್​ನಂಥ ಮಾರಕ ರೋಗಗಳಿಗೆ ಬಲಿಯಾಗುತ್ತಿರುವವರು ಅದೆಷ್ಟೋ ಮಂದಿ. ಇನ್ನು ದಿನನಿತ್ಯ ಬಳಸುವ ಪಾನೀಯ, ಶ್ಯಾಂಪೂ, ಪಾನ್​ ಮಸಾಲಾ, ಎಣ್ಣೆ, ಹಣ್ಣುಗಳ ಜ್ಯೂಸ್​, ಚಿಪ್ಸ್​, ಟೂಥ್​ಪೇಸ್ಟ್, ಹೀಗೆ ಪ್ರತಿಯೊಂದಕ್ಕೂ ಸೆಲೆಬ್ರಿಟಿಗಳನ್ನು ಬಳಸಿಕೊಂಡು, ಅವರಿಗೆ ಕೋಟಿ ಕೋಟಿ ಹಣ ಕೊಟ್ಟು ಜಾಹೀರಾತು ಮಾಡಿ ಜನರನ್ನು ಮರಳು ಮಾಡುವ ತಂತ್ರದ ಬಗ್ಗೆ ಇದೀಗ ಫ್ಯಾಕ್ಟ್​ ಮೈಂಡೆಡ್​ ಎಂಬ ಯೂಟ್ಯೂಬ್​ ಚಾನೆಲ್​ನಲ್ಲಿ ವಿವರಣೆ ನೀಡಲಾಗಿದೆ.

ಪಾನ್​ ಮಸಾಲಾ ಆ್ಯಡ್​ ಮಾಡುವ ತಾರೆಯರು ಅಸಲಿಗೆ ಅದನ್ನು ಸೇವಿಸುವುದೇ ಇಲ್ಲ. ಈ ಶ್ಯಾಂಪೂ ಬಳಸಿದರೆ, ಕೂದಲು ಹೀಗಾಗುತ್ತದೆ ಎನ್ನುವ ನಟಿಯರು ಆ ಕೂದಲನ್ನು ಅಂದಗೊಳಿಸಲು ಗಂಟೆಗಟ್ಟಲೆ ಹೇಗೆ ಹೇರ್ ಸ್ಟೈಲಿಷ್​ ಮುಂದೆ ಕುಳಿತುಕೊಳ್ಳುತ್ತಾರೆ, ಬಿಯರ್​ ಜಾಹೀರಾತಿನಲ್ಲಿ ಪೆಟ್ರೋಲ್​ ಹೇಗೆ ಬಳಸಲಾಗುತ್ತದೆ, ಚಿಪ್ಸ್​ ಜಾಹೀರಾತಿನಲ್ಲಿ ಹೇಗೆ ನಕಲಿ ಚಿಪ್ಸ್​ ಬಳಸುತ್ತಾರೆ. ಅಡುಗೆ ಸಾಮಗ್ರಿ ಅಥವಾ ವಿವಿಧ ರೀತಿಯ ಅಡುಗೆ ಪುಡಿಗಳ ಬಳಕೆಯಲ್ಲಿ ಹೇಗೆ ಬೇರೆ ಬಣ್ಣಗಳನ್ನು ಬಳಸಿ ಜನರನ್ನು ಮರಳು ಮಾಡಲಾಗುತ್ತದೆ ಎನ್ನುವ ಬಗ್ಗೆ ಈ ವಿಡಿಯೋದಲ್ಲಿ ಸವಿಸ್ತಾರವಾಗಿ ತಿಳಿಸಲಾಗಿದೆ.

ಕ್ರಿಕೆಟ್​ ತಾರೆಯರು, ಸಿನಿಮಾ ಸ್ಟಾರ್​ ನಟರು ಬಳಸುವ ವಿದೇಶಿ ಪಾನೀಯಗಳಲ್ಲಿ ಇರುವ ಕ್ರಿಮಿ ನಾಶಕದ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಫಾಸ್ಟ್​ ಫುಡ್​ಗಳಲ್ಲಿ ಬಳಸುವ ಅಪಾಯಕಾರಿ, ಕ್ಯಾನ್ಸರ್​ಗೆ ತುತ್ತಾಗುವ ವಿಷದ ಬಗ್ಗೆಯೂ ಸದ್ದು ಮಾಡಿತ್ತು. ಪ್ರಯೋಗಾಲಯಗಳಲ್ಲಿಯೇ ಇದನ್ನು ಸಾಬೀತು ಮಾಡಲಾಗಿತ್ತು. ಪಾನ್​ ಮಸಾಲಾ ತಿಂದರೆ ಬಾಯಿಯ ಕ್ಯಾನ್ಸರ್​ ಹೇಗೆ ಬರುತ್ತದೆ ಎನ್ನುವ ಸರ್ಕಾರಿ ಜಾಹೀರಾತುಗಳೂ ಬರುತ್ತವೆ, ಇತ್ತೀಚಿನ ದಿನಗಳಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಕ್ಯಾನ್ಸರ್​ ರೋಗಕ್ಕೆ ಇಂಥ ಜಾಹೀರಾತುಗಳು ಹಾಗೂ ಜಾಹೀರಾತುಗಳಲ್ಲಿ ನಟಿಸುವ ಸೆಲೆಬ್ರಿಟಿಗಳ ಕೊಡುಗೆ ಬಹುದೊಡ್ಡದು ಇದೆ ಎನ್ನುವ ಬಗ್ಗೆ ಸೋಷಿಯಲ್​  ಮೀಡಿಯಾದಲ್ಲಿಯೂ ಭಾರಿ ಚರ್ಚೆಯೇ ನಡೆದಿತ್ತು.

ಇದರ ಹೊರತಾಗಿಯೂ ಜನರು ಜಾಹೀರಾತಿಗೆ ಮರಳಾಗುವುದು ನಡೆದೇ ಇದೆ. ಕೆಲ ದಿನಗಳ ಹಿಂದೆ ಪಾನ್​ ಮಸಾಲಾ ಜಾಹೀರಾತಿನಿಂದ ನಟ ಅಕ್ಷಯ್​ ಕುಮಾರ್​ ಹಿಂದಕ್ಕೆ ಸರಿದಿದ್ದರು. ಯುವಜನರನ್ನು ತಪ್ಪು ದಾರಿಗೆ ಎಳೆಯುವುದಿಲ್ಲ ಎಂದು ಅವರು ಹೇಳಿದ್ದರು. ಅದರ ಬೆನ್ನಲ್ಲೇ ಸ್ಯಾಂಡಲ್​ವುಡ್​ ನಟ ಯಶ್​ ಕೂಡ ಪಾನ್​ ಮಸಾಲಾ ಜಾಹೀರಾತನ್ನು ಒಪ್ಪಿಕೊಂಡಿರಲಿಲ್ಲ. ಮೊನ್ನೆಯಷ್ಟೇ ಅನಿಲ್​ ಕಪೂರ್​ 10 ಕೋಟಿ ರೂಪಾಯಿ ಆಫರ್​ ರಿಜೆಕ್ಟ್​ ಮಾಡಿದ್ದು ಸದ್ದು ಮಾಡಿತ್ತು. ಆದರೆ ಎಲ್ಲಾ ಸೆಲೆಬ್ರಿಟಿಗಳೂ ಹೀಗೆಯೇ ಇರಬೇಕೆಂದೇನೂ ಇಲ್ಲ. ಈ ಜಾಹೀರಾತುಗಳನ್ನು ಮಾಡುವಾಗ ಅವರು ನಕಲಿ ವಸ್ತುಗಳನ್ನು ಹೇಗೆ ಉಪಯೋಗಿಸಿ ಜನರಿಗೆ ವಿಷ ಸೇವನೆ ಮಾಡುವಂತೆ ಹೇಗೆ ತೋರಿಸುತ್ತಾರೆ ಎನ್ನುವ ಬಂಡವಾಳನ್ನು ಈ ವಿಡಿಯೋದಲ್ಲಿ ತೆರೆದಿಡಲಾಗಿದೆ... ನೋಡಿ... 

Ads on article

Advertise in articles 1

advertising articles 2

Advertise under the article

ಸುರ