ಪತ್ನಿಯನ್ನು ತನ್ನ ಮನೆಗೆ ಕಳುಹಿಸದ ಕೋಪಕ್ಕೆ ಮಾವನ ಅಡಿಕೆ ತೋಟವನ್ನೇ ನಾಶ ಮಾಡಿದ ಅಳಿಯ
Saturday, September 28, 2024
ಹಾವೇರಿ: ಪತ್ನಿಯನ್ನು ತನ್ನ ಮನೆಗೆ ಕಳುಹಿಸದ್ದಕ್ಕೆ ಕೋಪಗೊಂಡ ಅಳಿಯನೋರ್ವ ಮಾವನ ಅಡಿಕೆ ತೋಟವನ್ನೇ ನಾಶಪಡಿಸಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಬಸಾಪುರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ದೇವೇಂದ್ರಪ್ಪ ಗಾಣಿಗೇರ ತನ್ನ ಹೊಲದಲ್ಲಿ ಅಡಿಕೆ ಗಿಡ ಹಾಕಿದ್ದರು. ಇದೀಗ ಗಿಡಗಳು ಬೆಳೆದು 2ವರ್ಷಗಳಾಗಿವೆ. ಇದೀಗ ದೇವೇಂದ್ರಪ್ಪರ ಅಳಿಯ ಬಸವರಾಜ ಈ ಅಡಿಕೆ ಗಿಡಗಳನ್ನು ಕಡಿದು ಹಾಕಿರುವುದಾಗಿ ಆರೋಪಿಸಿದ್ದಾರೆ.
ಬಸವರಾಜ ಸೊರಬದ ಬೈದವಟ್ಟಿ ಗ್ರಾಮದವ. 10 ವರ್ಷ ಹಿಂದೆ ದೇವೇಂದ್ರಪ್ಪರ ಪುತ್ರಿಯನ್ನು ವಿವಾಹವಾಗಿದ್ದರು. ಆದರೆ ಪತಿಯ ಕಿರುಕುಳ ತಾಳಲಾರದೇ ಪತ್ನಿ 3 ತಿಂಗಳ ಹಿಂದೆ ತವರಿಗೆ ತೆರಳಿದ್ದರು. ಪತ್ನಿಯನ್ನು ತನ್ನೊಂದಿಗೆ ಕಳುಹಿಸುವಂತೆ ಬಸವರಾಜ ಪರಿಪರಿಯಾಗಿ ಕೇಳಿಕೊಂಡರೂ ಮಾವ ಕಳುಹಿಸಿಲ್ಲ ಎನ್ನಲಾಗಿದೆ. ಇದರಿಂದ ಕುಪಿತಗೊಂದ ಬಸವರಾಜ ಸೆ.23ರಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದಾನೆ ಎಂದು ದೂರಲಾಗಿದೆ.