-->
ಏರ್‌ಟೆಲ್‌ನಿಂದ 161ರೂ.ನಿಂದ ಮೂರು ರಿಚಾರ್ಜ್ ಪ್ಲ್ಯಾನ್ 30ದಿನಗಳ ವ್ಯಾಲಿಡಿಟಿ

ಏರ್‌ಟೆಲ್‌ನಿಂದ 161ರೂ.ನಿಂದ ಮೂರು ರಿಚಾರ್ಜ್ ಪ್ಲ್ಯಾನ್ 30ದಿನಗಳ ವ್ಯಾಲಿಡಿಟಿ



ನವದೆಹಲಿ: ದೇಶದಲ್ಲಿ ಡೇಟಾ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. 2 ಜಿಬಿ, 3 ಜಿಬಿ ಎಂಬಂತೆ ದಿನಂಪ್ರತಿ ಡೇಟಾ ಖಾಲಿಯಾಗುತ್ತಲೇ ಇರುತ್ತದೆ. ಇದೀಗ ಏರ್‌ಟೆಲ್ ತನ್ನ ಪ್ರೇ ಪೇಯ್ಡ್ ಗ್ರಾಹಕರಿಗೆ ಈ ಡೇಟಾ ಸಮಸ್ಯೆಗೆ ಮುಕ್ತಿ ಹಾಡಲು ಹೊಸ ರೀಚಾರ್ಜ್ ಪ್ಲಾನ್ ಪರಿಚಯಿಸಿದೆ. ಕೇವಲ 161 ರೂಪಾಯಿ, 181 ರೂಪಾಯಿ ಹಾಗೂ 361 ರೂಪಾಯಿ ರೀಚಾರ್ಜ್ ಪ್ಲಾನ್ ಗ್ರಾಹಕರಿಗೆ ಡೇಟಾ ಜೊತೆಗೆ ಒಟಿಟಿ ಸೇರಿದಂತೆ ಇತರ ಎಂಟರ್‌ಟೈನ್‌ಮೆಂಟ್ ಸ್ಕೀಮ್ ಸಿಗಲಿದೆ. ಜೊತೆಗೆ 30ದಿನದ ವ್ಯಾಲಿಟಿಡಿ ಇರಲಿದೆ.


ಪ್ರತಿದಿನದ ಡೇಟಾ ಬೇಗನೆ ಖಾಲಿಯಾಗುವ ಏರ್‌ಟೆಲ್ ಗ್ರಾಹಕರಿಗೆ ಈ ಪ್ಲ್ಯಾನ್ ಸೂಕ್ತವಾಗಿದೆ. ಪ್ರತಿದಿನದ ಡೇಟಾ ಖಾಲಿಯಾಗಿ ಹೆಚ್ಚುವರಿ ಡೇಟಾಕ್ಕಾಗಿ ದುಬಾರಿ ಡೇಟಾ ಪ್ಲಾನ್ ಆಯ್ಕೆಮಾಡಿಕೊಳ್ಳುವ ಬದಲು ಇದೀಗ ಈ ಪ್ಲಾನ್ ಜಾರಿಮಾಡಲಾಗಿದೆ. 161ರೂ. ರಿಚಾರ್ಜ್ ಮಾಡಿದರೆ ಒಟ್ಟು 12 ಜಿಬಿ ಡೇಟಾ ಸಿಗಲಿದೆ. ಇದರ ವ್ಯಾಲಿಟಿಡಿ 30 ದಿನಗಳು.


181 ರೂಪಾಯಿ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿದರೆ, ಒಟ್ಟು 15ಜಿಬಿ ಡೇಟಾ ನೀಡಲಾಗುತ್ತಿದೆ. ಇದರ ವ್ಯಾಲಿಟಿಡಿ 30 ದಿನಗಳು. ಇನ್ನು ಇದರೊಂದಿಗೆ 20 ಒಟಿಟಿ ಸ್ಕೀಮ್, ಏರ್‌ಟೆಲ್ ಏಕ್ಸ್‌ಟ್ರೀಮ್ ಪ್ಲಾನ್ ಕೂಡ ಉಚಿತವಾಗಿ ಸಿಗಲಿದೆ. ಇನ್ನು 361ರೂಪಾಯಿ ಡೇಟಾ ರಿಚಾರ್ಜ್ ಪ್ಲಾನ್ ಆಯ್ಕೆಮಾಡಿಕೊಂಡರೆ, ಬರೋಬ್ಬರಿ 50ಜಿಬಿ ಡೇಟಾ ಸಿಗಲಿದೆ. ವಿಶೇಷ ಅಂದರೆ ಇಲ್ಲಿ ಮೂಲ ರಿಚಾರ್ಜ್ ಪ್ಲಾನ್ ವಾಲಿಟಿಡಿಯನ್ನು ಈ ಪ್ಲಾನ್ ಪಡೆಯಲಿದೆ. ಉದಾಹರಣೆಗೆ ನೀವು ಪ್ರತಿ ದಿನ 1 ಜಿಬಿ ಡೇಟಾ ಪ್ಲಾನ್ ನಿಗದಿತ ಮೊತ್ತಕ್ಕೆ ರಿಚಾರ್ಜ್ ಮಾಡಿಕೊಂಡಿದ್ದರೆ, ಇದರ ವ್ಯಾಲಿಟಿಡಿ ಅವಧಿ 30 ದಿನ ಅಥವಾ 60 ದಿನ ಆಗಿರಬಹುದು. ಈ ವ್ಯಾಲಿಟಿಡಿ ಅವಧಿ ಹೆಚ್ಚುವರಿಯಾಗಿ 351 ರೂಪಾಯಿ ರಿಚಾರ್ಜ್ ಪ್ಲಾನ್‌ಗೂ ಅನ್ವಯವಾಗಲಿದೆ.


ಏರ್‌ಟೆಲ್ ಇದೀಗ ಗ್ರಾಹಕರನ್ನು ತನ್ನಲ್ಲೇ ಉಳಿಸಿಕೊಂಡು ಹೊಸ ಗ್ರಾಹಕರ ಆಕರ್ಷಿಸಲು ಹೊಸ ಹೊಸ ಪ್ಲಾನ್ ಜಾರಿಗೆ ತರುತ್ತಿದೆ. ಇತ್ತೀಚೆಗೆ ರಿಚಾರ್ಜ್ ಬೆಲೆ ಏರಿಕೆಯಿಂದ, ಏರ್‌ಟೆಲ್ ಸೇರಿದಂತೆ ಇತರ ಟೆಲಿಕಾಂ ಸರ್ವೀಸ್ ಪೋರ್ಟ್ ಭೀತಿ ಎದುರಿಸುತ್ತಿದೆ. ಗ್ರಾಹಕರು ಬೇರೆ ನೆಟ್‌ವರ್ಕ್‌ಗೆ ಪೋರ್ಟ್ ತಪ್ಪಿಸಲು ಏರ್‌ಟೆಲ್ ಹೊಸ ಪ್ಲಾನ್ ಘೋಷಿಸಿದೆ.


ಏರ್ಟೆಲ್ ಇತ್ತೀಚೆಗೆ 365 ವಾರ್ಷಿಕ ಪ್ಲಾನ್ ಘೋಷಿಸಿದೆ. ಇತರ ಟೆಲಿಕಾಂ ಸರ್ವೀಸ್‌ಗೆ ಹೋಲಿಕೆ ಮಾಡಿದರೆ ಏರ್‌ಟೆಲ್ ಕಡಿಮೆ ಬೆಲೆಯಲ್ಲಿ 365 ವ್ಯಾಲಿಟಿಡಿ ಪ್ಲಾನ್ ಘೋಷಿಸಿತ್ತು. 1999 ರೂಪಾಯಿಗೆ 365 ದಿನ ವ್ಯಾಲಿಟಿಡಿ, ಪ್ರತಿ ದಿನ 100 ಎಸ್ಎಂಎಸ್, ಕಾಲ್ ಹಾಗೂ 24 ಜಿಬಿ ಡೇಟಾ ಕೂಡ ಸಿಗಲಿದೆ.


Ads on article

Advertise in articles 1

advertising articles 2

Advertise under the article