ಸಹಾಯಕ್ಕಾಗಿ ಹಂಬಲಿಸುವ ಮನ, ನೀವೂ ಕೊಡುವ ಹಣ ಇವರ ಬದುಕಿಗೆ ದಾರಿದೀಪ ಆಗಲಿ
Tuesday, August 6, 2024
ಕುರ್ಪಾಡಿ ಊರಿನಲ್ಲಿ ಸುಮಾರು ವರ್ಷಗಳಿಂದ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಾ ಬಂದಿರುವ ಪ್ರಸಾದಿನಿ ಅವರು ಇದೇ ಜುಲೈ ತಿಂಗಳ 18ರಂದು ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಬಿದ್ದ ಪರಿಣಾಮ ತೀರ್ವ ಗಾಯಗೊಂಡು ಮಂಗಳೂರಿನ ವೆಸ್ಲಾಕ್ ಆಸ್ಪತ್ರೆಗೆ ದಾಖಲಾಗಿ ಅಲ್ಲಿ ಅವರ ಎಡಕಾಲಿಗೆ ತೀರ್ವ ಪೆಟ್ಟು ಬಿದ್ದ ಕಾರಣ ಅವರ ಎಡ ಕಾಲನ್ನೇ ಕತ್ತರಿಸಿ ತೆಗೆಯಬೇಕಾದ ಪರಿಸ್ಥಿತಿ ಎದುರಾಯಿತು.
ಇದೇ ತಿಂಗಳಲ್ಲಿ ಕುರ್ಪಾಡಿಯಲ್ಲಿ ಬಂದ ಬಿರುಗಾಳಿಯಿಂದಾಗಿ ಅವರ ಮನೆ ಕೂಡಾ ಸಂಪೂರ್ಣ ಹಾನಿಯಾಗಿದ್ದು, ಬಡತನದಲ್ಲಿ ಜೀವನ ನಡೆಸುತ್ತಿದ್ದ ಇವರಿಗೆ ಏಕಾಏಕಿ ದಿಕ್ಕು ತೋಚದ ಪರಿಸ್ಥಿತಿ ಉಂಟಾಗಿದೆ. ಅವರ ಗಂಡ ಸಹಾ ದಿನಕೂಲಿ ಮಾಡುತ್ತಿದ್ದು, ಮಗ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.
ಪ್ರಸಾದಿನಿ ಅವರಿಗೆ ಇನ್ನೂ ತುಂಬಾ ಸಮಯ ಮನೆಯಲ್ಲೇ ವಿಶ್ರಾಂತಿ ಬೇಕಿದ್ದು, ವೈದ್ಯರು ಸಹಾ ಮುಂದೆ ಕಾಲುಗಳನ್ನು ಜೋಡಿಸಲು ಹಾಗೂ ಮುಂದೆ ಅವರಿಗೆ ಕೆಲಸ ಮಾಡಲು ಸಾಧ್ಯ ಇದೆ ಎಂಬ ಯಾವುದೇ ಖಚಿತತೆ ನೀಡಿಲ್ಲ. ಒಂದೆಡೆ ಆನಾರೋಗ್ಯ, ಇನ್ನೊಂದೆಡೆ ಮನೆಹಾನಿ, ಸಾಲದ ಹೊರೆ, ಮಗನ ವಿದ್ಯಾಭ್ಯಾಸ ಜೀವನ ಇನ್ನೂ ಕಷ್ಟಕರ ಮಟ್ಟಕ್ಕೆ ತಲುಪುವಂತೆ ಮಾಡಿದೆ.
ನಾವೆಲ್ಲರೂ ಒಗ್ಗಟ್ಟಿನಿಂದ ಅವರಿಗೆ ಸಣ್ಣ ರೀತಿಯಲ್ಲಿ ಸಹಾಯ ಮಾಡಿದರೆ ಅದು ಅವರ ಮುಂದಿನ ಜೀವನ ನಡೆಸಲು ಬಹುದೊಡ್ಡ ದಾರಿಯಾಗುತ್ತದೆ. ಇಂದು ನಾವು ಸಣ್ಣ ರೀತಿಯ ಸಹಾಯ ಮಾಡಿದ್ದಲ್ಲಿ ದೇವರು ಮುಂದೊಂದು ದಿನ ನಮಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿಯೇ ಮಾಡುತ್ತಾರೆ.
ಆತ್ಮೀಯ ನನ್ನೆಲ್ಲಾ ಸ್ನೇಹಿತರೇ ನಮ್ಮಿಂದಾಗುವ ಸಹಾಯ ಆ ಬಡ ಕುಟುಂಬಕ್ಕೆ ಮಾಡೋಣ. ಪ್ರಸಾದಿನಿ ಅವರು ಆದಷ್ಟು
ಬೇಗ ಗುಣಮುಖರಾಗಲಿ. ಎದ್ದು ನಡೆಯುವಂತಾಗಲಿ ಅವರ ಮಗನ ವಿದ್ಯಾಭ್ಯಾಸ ಮುಂದುವರೆಯಲಿ.
ಹೆಸರು : ಪ್ರಸಾದಿನಿ
ಬ್ಯಾಂಕ್ : ಕೆನರಾ ಬ್ಯಾಂಕ್ ಶಾಖೆ : 38ನೇ ಕಳ್ಳೂರು-ಸಂತೆಕಟ್ಟೆ
*ಅಕೌಂಟ್ ನಂಬರ್:*
02712250007512
ಐ.ಎಫ್.ಎಸ್.ಸಿ.ನಂಬರ್ : CNRB0010271
UPI No - 8431992657