-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಮಲಗಿದರೆ ಲಾಠಿಯಲ್ಲಿ ತಿವಿಯುವರು, ಬೂಟಿನಲ್ಲಿ ಒದೆಯುವರು, ಜತೆಗೆ ಲಾಡ್ಜ್ ಗೆ ಹೋಗೆಂದು ಅಡ್ರೆಸ್ ಕೊಡುವರು... ದೇವರಿಗೆ ಪತ್ರ ಬರೆದ ಭಕ್ತ

ಮಲಗಿದರೆ ಲಾಠಿಯಲ್ಲಿ ತಿವಿಯುವರು, ಬೂಟಿನಲ್ಲಿ ಒದೆಯುವರು, ಜತೆಗೆ ಲಾಡ್ಜ್ ಗೆ ಹೋಗೆಂದು ಅಡ್ರೆಸ್ ಕೊಡುವರು... ದೇವರಿಗೆ ಪತ್ರ ಬರೆದ ಭಕ್ತ

 






ಮೈಸೂರು:ದೇವಾಲಯದ ಮುಂದೆ ಮಲಗಿದರೆ ಲಾಠಿಯಲ್ಲಿ ತಿವಿಯುವರು, ಬೂಟಿನಲ್ಲಿ ಒದೆಯುವರು, ಜತೆಗೆ ಲಾಡ್ಜ್ ಗೆ

ಹೋಗೆಂದು ಅಡ್ರೆಸ್ ಕೊಡುವರು...ಹೀಗೆ ದೇವರಿಗೆ ಬರೆದ ಪತ್ರ ನಂಜನಗೂಡಿನ ಹುಂಡಿ ಎಣಿಕೆಯಲ್ಲಿ ಸಿಕ್ಕಿದರ.




 ಹುಂಡಿಗೆ ಕಾಣಿಕೆ ಅರ್ಪಿಸುವ ಭಕ್ತರು, ದೇಗುಲದ ಭೇಟಿ ವೇಳೆ ಅನುಭವಿಸುತ್ತಿರುವ ತೊಂದರೆ ನಿವಾರಿಸುವಂತೆ ಕೋರಿಕೆ ಪತ್ರಗಳನ್ನು ಹಾಕಿದ್ದಾರೆ. ಹುಂಡಿಗಳಲ್ಲಿ 1,12,92,056 . 2, 51.380 ಚಿನ್ನ, 1800 ಗ್ರಾಂ ಬೆಳ್ಳಿ ಹಾಗೂ 46 ವಿದೇಶಿ ಕರೆನ್ಸಿ ಕಾಣಿಕೆ ಲಭ್ಯವಾಗಿವೆ ಎಂದು ತಿಳಿದುಬಂದಿದೆ.


ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ಮಂಗಳವಾರ ನಡೆದ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ 35 ಹುಂಡಿಗಳ ಪರ್ಕಾವಣೆ ನಡೆ ಯಿತು. ಈ ವೇಳೆ 150 ಕ್ಕೂ ಹೆಚ್ಚು ಪತ್ರಗಳು ಲಭ್ಯವಾದವು. ಎಣಿಕೆಯಲ್ಲಿ ದೊರೆತಿರುವ ಪತ್ರಗಳಲ್ಲಿ ಬಹುತೇಕ ಭಕ್ತರು ದೇವಾಲಯದಲ್ಲಿ ಮೂಲ ಸೌಕರ್ಯದ ಕೊರತೆಯ ಬಗ್ಗೆಯೇ ಅಹವಾಲು ಹೇಳಿಕೊಂಡಿದ್ದಾರೆ. ಇನ್ನು ಕೆಲವು ಪತ್ರಗಳಲ್ಲಿ ದೇವರಿಗೆ ನೀಡಲಾದ ಹಣವನ್ನು ಮೂಲ ಸೌಕರ್ಯ ಕಲ್ಪಿಸಲು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.


"ಉಳ್ಳವರು ಲಾಡ್ಜ್‌ನಲ್ಲಿ ತಂಗುವರು, ತ ನಾನೇನು ಮಾಡಲಿ ಬಡವನಯ್ಯ, ದೇವಾಲಯದ ಮುಂದೆ ಮಲಗಿದರೆ ಲಾಠಿಯಲ್ಲಿ ತಿವಿಯುವರು, ಬೂಟಿನಲ್ಲಿ ಒದೆಯುವರು, ಜತೆಗೆ ಲಾಡ್ಜ್ ಗೆ

ಹೋಗೆಂದು ಅಡ್ರೆಸ್ ಕೊಡುವರು, ನಾ ಹೇಗೆ ಹೋಗಲಿ ಬಡವನಯ್ಯಾ, ಶ್ರೀಕಂಠಪ್ಪ ನಿನ್ನ ಬಡ ಭಕ್ತರ ಕಷ್ಟ ನೀನೇ ಪರಿಹರಿಸಪ್ಪ' ಎಂಬುದು ಭಕ್ತನೊಬ್ಬರು ವಿನಮ್ರ ಬೇಡಿಕೆಯನ್ನಿಟ್ಟಿದ್ದಾನೆ.


"ಮಾಸಿಕ ಒಂದು ಕೋಟಿ ರೂಪಾಯಿಗೂ ಅಧಿಕ ಆದಾಯವಿರುವ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ದರ್ಶನಕ್ಕೆ ಬರುವ ಭಕ್ತರಿಗೆ ಸರಿಯಾದ ವಸತಿ ವ್ಯವಸ್ಥೆಯಿರುವುದಿಲ್ಲ. ಕಪಿಲಾ ನದಿ ಸ್ನಾನಘಟ್ಟದಲ್ಲಿ ಮಹಿಳೆಯರಿಗೆ ಬಟ್ಟೆ ಬದಲಾಯಿಸಲು ಅನುಕೂಲಕರ ವಾತಾವರಣವಿಲ್ಲ. ಶುದ್ಧ ಕುಡಿಯುವ ನೀರಿನ ಸೌಲಭ್ಯವಿಲ್ಲ. ಉರುಳು ಸೇವೆ ಮಾಡಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಸಮಸ್ಯೆ ಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದರೂ ಏನೂ ಪ್ರಯೋಜನವಾಗಿಲ್ಲ. ಇದರಿಂದ ಬೇಸತ್ತು ನಿನಗೇ ಪತ್ರ ಬರೆಯು ತಿರುವೆ,'' ಎಂದು ಭಕ್ತರೊಬ್ಬರು ದೂರುಗಳ ಪಟ್ಟಿಯನ್ನು ಹುಂಡಿಗೆ ಹಾಕಿದ್ದಾರೆ.


ಹುಂಡಿಗಳಲ್ಲಿ ಲಭ್ಯವಾದ ಪತ್ರಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article