-->

ತಂಗಿ ಮನೆಯಿಂದ 5.5 ಲಕ್ಷ ರೂ ಮೌಲ್ಯದ ಚಿನ್ನ ಕದ್ದ ಅಕ್ಕ!

ತಂಗಿ ಮನೆಯಿಂದ 5.5 ಲಕ್ಷ ರೂ ಮೌಲ್ಯದ ಚಿನ್ನ ಕದ್ದ ಅಕ್ಕ!



ಬೆಂಗಳೂರು: ತಂಗಿ ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಅಕ್ಕನನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.


ಶಶಿಕಲಾ (30) ಬಂಧಿತ ಆರೋಪಿ. ಈಕೆಯಿಂದ 5.50 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಆಡುಗೋಡಿ ವಿಎಸ್‌ಆರ್ ಬಡಾವಣೆಯಲ್ಲಿ ವಾಸವಾಗಿರುವ ಚಂದ್ರಿಕಾ ಅವರು ಪಿ.ಜಿ.ಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು. ಪತಿ ಶರವಣ ವಾಹನ ಚಾಲಕರಾಗಿದ್ದಾರೆ. ಕೆಲವು ದಿನಗಳ ಹಿಂದೆ ಪತಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಎಲೆಕ್ಟ್ರಾನಿಕ್ ಸಿಟಿಯ ದೊಡ್ಡ ತೂಗೂರಿನಲ್ಲಿರುವ ಅಕ್ಕ ಶಶಿಕಲಾ ಮನೆಗೆ ವಿಶ್ರಾಂತಿ ಪಡೆಯಲು ತಂಗಿ ಚಂದ್ರಿಕಾ ಆ. 15ರಂದು ಹೋಗಿದ್ದರು. ಈ ಮಧ್ಯೆ ಔಷಧ ತರುವಂತೆ ಅಕ್ಕ ಶಶಿಕಲಾಗೆ ತಂಗಿ ಚಂದ್ರಿಕಾ ಸೂಚಿಸಿ ಸ್ಕೂಟರ್‌ನ ಕೀ ನೀಡಿದ್ದಳು. ಕೀ ಬಂಚ್‌ನಲ್ಲಿ ಮನೆಯ ಕೀ ಇರುವುದನ್ನು ಶಶಿಕಲಾ ಗಮನಿಸಿದ್ದಳು. ದ್ವಿಚಕ್ರವಾಹನವನ್ನು ಅಂಗಡಿಗೆ ಹೋಗುವ ಬದಲು ತಂಗಿ ಚಂದ್ರಿಕಾಳ ಆಡುಗೋಡಿಯಲ್ಲಿರುವ ಮನೆಯತ್ತ ತಿರುಗಿಸಿದ್ದಳು.


ಕಪಾಟು ಒಡೆದು ಕಳವು.


ಮಾರ್ಗಮಧ್ಯೆ ಅನುಮಾನ ಬಾರದಂತೆ ಶಶಿಕಲಾ ದೊಡ್ಡಮ್ಮನನ್ನೂ ಸಹ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ತೆರಳಿದ್ದಳು. ತಂಗಿ ಮನೆಗೆ ಸುಮಾರು 100 ಮೀಟರ್ ದೂರವಿರುವಾಗ ದೊಡ್ಡಮ್ಮನನ್ನ ಇಳಿಸಿದ್ದಳು. ಬಳಿಕ ತಂಗಿಯ ಮನೆಯ ಬೀಗ ತೆಗೆದು ಒಳ ನುಗ್ಗಿ ಕಪಾಟಿನ ಕೀ ಹುಡುಕಾಡಿದ್ದಳು. ಅದು ಸಿಗದೇ ಇದ್ದಾಗ ಬೀರು ಒಡೆದು 74 ಗ್ರಾಂ ಚಿನ್ನ ಹಾಗೂ 354 ಗ್ರಾಂ ಬೆಳ್ಳಿ ಆಭರಣ ಕದ್ದಿದ್ದಾಳೆ. ಇತ್ತ ಶಶಿಕಲಾ ಮನೆಯಿಂದ ಆ.20ರಂದು ತನ್ನ ಮನೆಗೆ ಬಂದ ತಂಗಿ ಚಂದ್ರಿಕಾ ಬೀರು ಪರಿಶೀಲಿಸಿದಾಗ ಕಳ್ಳತನವಾಗಿರುವುದು ಕಂಡು ಬಂದಿತ್ತು. ಪೊಲೀಸರು, ಚಂದ್ರಿಕಾ ಮನೆಯ ಸುತ್ತ-ಮುತ್ತ ಅಳವಡಿಸಿದ್ದ ಸಿಸಿ ಕೆಮರಾ ಪರಿಶೀಲಿಸಿದಾಗ ಅಕ್ಕ ಬಂದು ಹೋಗಿರುವ ಸುಳಿವು ಸಿಕ್ಕಿತ್ತು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article