ಬಪ್ಪನಾಡು ದೇವರ ದರ್ಶನ ಪಡೆದ ಕೆ ಎಲ್ ರಾಹುಲ್ ದಂಪತಿ | K L RAHUL

 

Courtesy- PTI


ಮೂಲ್ಕಿ : ಕ್ರಿಕೆಟಿಗ ಕೆ.ಎಲ್. ರಾಹುಲ್ ಮತ್ತು ಅವರ ಪತ್ನಿ ಬಾಲಿವುಡ್ ನಟಿ ಆಥಿಯಾ ಶೆಟ್ಟಿ ಅವರು ರವಿವಾರ ಮೂಲ್ಕಿಯ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಶಿಮಂತೂರು ಆದಿಜನಾರ್ದನ ದೇವಸ್ಥಾನಕ್ಕೆ ಭೇಟಿಯಿತ್ತು ಪ್ರಸಾದ ಸ್ವೀಕರಿಸಿದರು.


ನಟ ಸುನೀಲ್ ಶೆಟ್ಟಿ ಅವರ ಪುತ್ರಿಯಾದ ಆಥಿಯಾ ಶೆಟ್ಟಿಯವರು ರಾಹುಲ್ ಅವರನ್ನು ಮದುವೆಯಾದ ಬಳಿಕ ಮೊದಲ ಬಾರಿಗೆ ಮೂಲ್ಕಿಯಲ್ಲಿರುವ ತನ್ನ ತಂದೆಯ ಮನೆಗೆ ಆಗಮಿಸಿದ್ದರು.


ಬಪ್ಪನಾಡು ದೇವಳದ ಆಡಳಿತ ಮೊಕ್ತಸರ ಎನ್.ಎಸ್. ಮನೋಹರ್ ಶೆಟ್ಟಿ ಮತ್ತಿತರರು ಕ್ಷೇತ್ರಕ್ಕೆ ಬರಮಾಡಿಕೊಂಡರು.