ಉಡುಪಿ: 'ಡಿ ಬಾಸ್' ಬಂಧಮುಕ್ತಿಗೆ ಪತ್ನಿಯಿಂದ ಕೊಲ್ಲೂರಿನಲ್ಲಿ ನವ ಚಂಡಿಕಾಯಾಗ
Friday, July 26, 2024
ಉಡುಪಿ: ಇಲ್ಲಿನ ಬೈಂದೂರು ತಾಲೂಕಿನ ಪ್ರಸಿದ್ಧ ಶಕ್ತಿಕೇಂದ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ "ಡಿ ಬಾಸ್" ಬಂಧಮುಕ್ತಿಗಾಗಿ ಪತ್ನಿ ವಿಜಯಲಕ್ಷ್ಮಿ ನವ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ.
ವಿಜಯಲಕ್ಷ್ಮಿಯವರು ತಮ್ಮ ಆಪ್ತರೊಂದಿಗೆ ಗುರುವಾರ ಸಂಜೆ ಕೊಲ್ಲೂರಿಗೆ ಆಗಮಿಸಿದ್ದರು. ರಾತ್ರಿ ಕೊಲ್ಲೂರಿನಲ್ಲಿಯೇ ವಾಸ್ತವ್ಯ ಹೂಡಿರುವ ಇಂದು ಬೆಳಗ್ಗೆ ನವ ಚಂಡಿಕಾ ಹೋಮದಲ್ಲಿ ಭಾಗಿಯಾಗಿದ್ದಾರೆ. ದರ್ಶನ್ ಬಂಧಮುಕ್ತಿಗಾಗಿ ಪ್ರಾರ್ಥನೆ- ಸಂಕಲ್ಪ ಮಾಡಿ ನವ ಚಂಡಿಕಾಯಾಗದಲ್ಲಿ ಭಾಗಿಯಾಗಿದ್ದಾರೆ. ಕೊಲ್ಲೂರಿನ ಅರ್ಚಕರಾದ ನರಸಿಂಹ ಅಡಿಗ ನೇತೃತ್ವದಲ್ಲಿ ಚಂಡಿಕಾಯಾಗ ನಡೆಯುತ್ತಿದೆ.
ಅರ್ಚಕ ಸುಬ್ರಹ್ಮಣ್ಯ ಅಡಿಗ ಚಂಡಿಕಾಯಾಗಕ್ಕೆ ಸಂಕಲ್ಪ ಮಾಡಿಸಿದ್ದಾರೆ. ತಮ್ಮ ಪತಿ ಸಂಕಷ್ಟಗಳಿಂದ ಪಾರಾಗಿ ಶೀಘ್ರ ಜೈಲಿನಿಂದ ಬಿಡುಗಡೆಯಾಗಲಿ ಎಂದು ಪತ್ನಿ ಈ ವೇಳೆ ದೇವಿಯ ಬಳಿ ಪ್ರಾರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಲ್ಲಿರುವುದರಿಂದ ಪತ್ನಿ ವಿಜಯಲಕ್ಷ್ಮಿ ಅವರ ಕೊಲ್ಲೂರು ಭೇಟಿ ಧಾರ್ಮಿಕವಾಗಿ ಮಹತ್ವ ಪಡೆದಿದೆ.