ಆಳ್ವಾಸ್ ಯಶಸ್ವಿನ ಮುಕುಟಕ್ಕೆ ಮತ್ತೊಂದು ಗರಿ: ಎಂಜಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ- ಡಾ. ಮೋಹನ್ ಆಳ್ವ
ಆಳ್ವಾಸ್ ಯಶಸ್ವಿನ ಮುಕುಟಕ್ಕೆ ಮತ್ತೊಂದು ಗರಿ: ಎಂಜಿಯರಿಂಗ್ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ- ಡಾ. ಮೋಹನ್ ಆಳ್ವ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (AEIT) ಇದಕ್ಕೆ ಸ್ವಾಯತ್ತ ಸ್ಥಾನಮಾನ ದೊರಕಿದೆ. ಮೂಡಬಿದಿರೆಯಲ್ಲಿ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ ಅವರು ಈ ವಿಷಯ ಪ್ರಕಟಿಸಿದ್ದಾರೆ.
ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜು (AEIT) ಈಗಾಗಲೇ ನ್ಯಾಕ್(NAAC)ನಲ್ಲಿ ಎ+ ಶ್ರೇಣಿ, ಸಿಜಿಪಿಎ 3.32 (4 Special) ಗ್ರೇಡ್ ಪಡೆದುಕೊಂಡಿದೆ. ನಿರ್ಫ್ (NIRF) ಇನ್ನೋವೇಶನ್ ranking ಅನ್ನು 150ರಿಂದ 300 ಬ್ಯಾಂಡ್‌ನಲ್ಲಿ ಪಡೆದುಕೊಂಡಿದೆ.
ಕಾಲೇಜಿನ ಹಲವು ಎಂಜಿನಿಯರಿಂಗ್ ವಿಭಾಗಗಳು ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆಯನ್ನು ಪಡೆದುಕೊಂಡಿವೆ ಎಂದು ಅವರು ವಿವರಿಸಿದರು.
ಇಸ್ರೋ ಹಾಗೂ ಇಸ್ರೋ ಸಹ ಸಂಸ್ಥೆಗಳಾದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ, ಹೈದರಾಬಾದ್, ಬೆಂಗಳೂರಿನ ಪ್ರಾದೇಶಿಕ ದೂರ ಸಂವೇದಿ ಕೇಂದ್ರ, ಗಡಂಕಿಯ ರಾಷ್ಟ್ರೀಯ ವಾಯುಮಂಡಲ ಸಂಶೋಧನಾ ಪ್ರಯೋಗಾಲಯಗಳು, ಎಸ್‌ಸಿಎಲ್ ಬಾಹ್ಯಾಕಾಶ ವಿಭಾಗ ಚಂಡೀಗಡ, ಡಿಫೆನ್ಸ್ ಇನ್ಸ್ಟಿಟ್ಯುಟ್ ಆಫ್ ಅಡ್ವಾನ್ಸಡ್ ಟೆಕ್ನಾಲಜಿ ಪುಣೆ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಿಶ್ವವಿದ್ಯಾನಿಲಯಗಳಾದ ಕುಮಾಮೊಟೊ ವಿಶ್ವವಿದ್ಯಾನಿಲಯ ಜಪಾನ್, ಭಾರತೀಯ ಮಾಹಿತಿ ತಂತ್ರಜ್ಙಾನ ಸಂಸ್ಥೆ ಅಲಹಾಬಾದ್ ಹಾಗೂ ಏಳು ಐರೋಪ್ಯ ವಿಶ್ವವಿದ್ಯಾನಿಲಯಗಳ ಜೊತೆಗೆ ಆಳ್ವಾಸ್ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.
ಆಳ್ವಾಸ್ ಶಿಕ್ಷಣ ಸಂಸ್ಥೆಯು 2024ರಲ್ಲಿ 15 ಪೇಟೆಂಟ್‌ಗಳಿಗೆ ಅರ್ಜಿ ಹಾಕಿದ್ದು, ಇದರಲ್ಲಿ 8 ಪೇಟೆಂಟ್‌ಗಳ ಮಾನ್ಯತೆಯನ್ನು ಗಳಿಸಿದೆ. 2023-24ರ ಸಾಲಿನಲ್ಲಿ ಸರ್ಕಾರಿ ಸಂಶೋಧನಾ ಕೇಂದ್ರಗಳಿಂದ 1.25 ಕೋಟಿ ರೂ. ಅನುದಾನ ಪಡೆದಿರುವುದು ಸಂಸ್ಥೆಯ ಆವಿಷ್ಕಾರ ಮತ್ತು ತಂತ್ರಜ್ಙಾನ ಉನ್ನತೀಕರಣದಲ್ಲಿ ಹೊಂದಿರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ ಎಂದು ಮೋಹನ ಆಳ್ವ ಹೇಳಿದರು.