-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
ಉಳ್ಳಾಲ ಕೋಟೆಪುರದ ಟಿಪ್ಪು ಸುಲ್ತಾನ್ ಪ್ರೌಡ ಶಾಲೆಯ ವಿದ್ಯಾರ್ಥಿ ಸಂಸತ್ತು ಚುನಾವಣೆ - ಫಾತಿಮಾ ರಾಯಿಝ ನೂತನ ನಾಯಕಿಯಾಗಿ ಆಯ್ಕೆ

ಉಳ್ಳಾಲ ಕೋಟೆಪುರದ ಟಿಪ್ಪು ಸುಲ್ತಾನ್ ಪ್ರೌಡ ಶಾಲೆಯ ವಿದ್ಯಾರ್ಥಿ ಸಂಸತ್ತು ಚುನಾವಣೆ - ಫಾತಿಮಾ ರಾಯಿಝ ನೂತನ ನಾಯಕಿಯಾಗಿ ಆಯ್ಕೆ

 

 


ಮಂಗಳೂರು: ಉಳ್ಳಾಲ ಕೋಟೆಪುರದ ಅನುದಾನಿತ ಟಿಪ್ಪು ಸುಲ್ತಾನ್ ಪ್ರೌಡ ಶಾಲೆಯ ವಿದ್ಯಾರ್ಥಿ ಸಂಸತ್ತು ಚುನಾವಣೆ  ಇತ್ತೀಚೆಗೆ ನಡೆಯಿತು. ಇದರಲ್ಲಿ ಫಾತಿಮಾ ರಾಯಿಝ ನೂತನ ನಾಯಕಿಯಾಗಿ ಆಯ್ಕೆಯಾದರು.




ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ಚುನಾವಣೆಯು ಬಹಳ ಮಹತ್ತರವಾದ್ದು. ವಿದ್ಯಾರ್ಥಿ ದೆಸೆಯಲ್ಲಿಯೇ ಚುನಾವಣೆಯ ಮಹತ್ವವನ್ನು ಮತ್ತು ನಾಯಕತ್ವದ ಅರಿವನ್ನು ಮೂಡಿಸಲು ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ತು ಚುನಾವಣೆಯನ್ನು ನಡೆಸಲಾಗುತ್ತದೆ.


ಉಳ್ಳಾಲ ಕೋಟೆಪುರದ ಅನುದಾನಿತ ಟಿಪ್ಪು ಸುಲ್ತಾನ್ ಪ್ರೌಡ ಶಾಲೆಯಲ್ಲಿ ನಡೆದ  ಶಾಲಾ ಸಂಸತ್ತು ಚುನಾವಣೆಯಲ್ಲಿ ಅಭ್ಯರ್ಥಿಗಳ ನಾಮ ಪತ್ರಿಕೆ ಸಲ್ಲಿಕೆ, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ, ಚುನಾವಣಾ ಪ್ರಚಾರ ಮುಂತಾದ ಪ್ರಕ್ರಿಯೆ ಗಳು ನಡೆಯಿತು.  ಅಂತಿಮವಾಗಿ ಎಂಟು ಅಭ್ಯರ್ಥಿಗಳು ಕಣದಲ್ಲಿದ್ದು ಮೊಬೈಲ್ ಆ್ಯಪ್ ಇವಿಎಂ ಮೆಷಿನ್ ಗಳ ಮೂಲಕ ಮತದಾನ ಕಾರ್ಯ ನಡೆಸಲಾಯಿತು



ಶಾಲಾ ಸಿಬ್ಬಂದಿ ವರ್ಗದವರಾದ  ಶಾಹಿನಾ ಬೇಗಂ,  ಅಖಿಲ್ , ಈಶ್ವರ್ ಮೂಲ್ಯ ಎಸ್, ಪವಿತ್ರಾಕ್ಷಿ, ಅಲ್ಲಾ ಭಕ್ಷ್ ಅಲಗೂರು,  ಅಝ್ಮೀನ, ಯಶಸ್ವಿನಿ, ಮೊಹಮ್ಮದ್ ಫಾಝಿಲ್, ತಾಜುದ್ದೀನ್, ತಿಮ್ಮಪ್ಪ ರವರು ಮತದಾನ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಗೀತಾ ಡಿ ಶೆಟ್ಟಿಯವರು  ಮುಖ್ಯ ಚುನಾವಣಾಧಿಕಾರಿಗಳಾಗಿದ್ದರು

ಚಿತ್ರಕಲಾ ಶಿಕ್ಷಕ ಬಿ ಎಂ ರಫೀಕ್ ತುಂಬೆಯವರು ಸಹ ಚುನಾವಣಾ ಅಧಿಕಾರಿ ಯಾಗಿ ಕಾರ್ಯ ನಿರ್ವಹಿಸಿದರು

 

ಶಾಲಾ ಸಂಸತ್ತಿನ ನೂತನ ನಾಯಕಿಯಾಗಿ 10 ನೇ ತರಗತಿಯ ಫಾತಿಮಾ ರಾಯಿಝ ಆಯ್ಜೆಯಾಗಿ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.

Ads on article

Advertise in articles 1

advertising articles 2

Advertise under the article

ಸುರ