-->
ಸಿಬ್ಬಂದಿಗೆ ಸಂಬಳ, ನಿರ್ವಹಣೆ ಗೆ ಬೇಕಂತೆ ದುಡ್ಡು: , ಮಂಗಳೂರಿನ ಕದ್ರಿ ಆಸ್ತಿ ಮಾರಲು ಮುಂದಾದ BSNL

ಸಿಬ್ಬಂದಿಗೆ ಸಂಬಳ, ನಿರ್ವಹಣೆ ಗೆ ಬೇಕಂತೆ ದುಡ್ಡು: , ಮಂಗಳೂರಿನ ಕದ್ರಿ ಆಸ್ತಿ ಮಾರಲು ಮುಂದಾದ BSNL


 


 

ಮಂಗಳೂರು: ಸಿಬ್ಬಂದಿಗೆ ಸಂಬಳ,  ಸಂಸ್ಥೆಯ ನಿರ್ವಹಣೆ ಮತ್ತು 4 ಗಿ ಅಪ್ ಗ್ರೇಡ್ ಗಾಗಿ ಬಿಎಸ್ ಎನ್ ಎಲ್ ಸಂಸ್ಥೆಗೆ ಹಣದ ಕೊರತೆ ಇದೆಯಂತೆ.  ಹೀಗಾಗಿ ಮಂಗಳೂರಿನ ಕದ್ರಿಯಲ್ಲಿರುವ ಭೂಮಿಯನ್ನುಮಾರಲು ನಿರ್ಧರಿಸಿದೆ .

ಈ ಬಗ್ಗೆ ಮಂಗಳೂರಿನಲ್ಲಿ ಬಿಎಸ್ಎನ್ಎಲ್ ಕರ್ನಾಟಕ ಸರ್ಕಲ್ ಚೀಪ್ ಜನರಲ್ ಮೆನೆಜರ್ ಉಜ್ವಲ್ ಗುಲ್ಹಾನೆ ಮಾತನಾಡಿದ್ದಾರೆ. ಸಿಬ್ಬಂದಿಗೆ ವೇತನ ನೀಡುವುದು, ಸಂಸ್ಥೆಯನ್ನು ನಿರ್ವಹಣೆ ಮಾಡುವುದು ಮತ್ತು 4 ಜಿ ಅಪ್ ಗ್ರೇಡ್ ಗಾಗಿ ಹಣಕಾಸಿನ ಅಗತ್ಯತೆ ಇದೆ. ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸೂಚನೆಯಂತೆ ಬಿಎಸ್ಎನ್ಎಲ್ ಉಪಯೋಗಿಸದೆ ಇರುವ ಭೂಮಿಯನ್ನು ಮಾರಲು ನಿರ್ಧರಿಸಿದೆ ಎಂದು ಅವರು ತಿಳಿಸಿದರು.

ನಗರದ ಕದ್ರಿ ಹಿಲ್ಸ್ ಪಾರ್ಕ್ ರೋಡ್ ಲ್ಯಾಂಡ್ ಪಾರ್ಸೆಲ್ ಸ್ಟೋರ್ ಯಾರ್ಡ್  2 ಎಕ್ರೆ (8094 . ಮೀ) ಭೂಮಿಯನ್ನು ಮೀಸಲು ಬೆಲೆ 39 ಕೋಟಿ ಗೆ ಮಾರಾಟ ಮಾಡಲು ಉದ್ದೇಶಿಸಿದೆ. ಜುಲೈ 1 ಕ್ಕೆ ಬಿಡ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದು ಮೊದಲ ಹಂತದ ಪ್ರಕ್ರಿಯೆಯಾಗಿದ್ದು, ಎರಡನೇ ಹಂತದಲ್ಲಿ ಎಕ್ಕೂರಿನಲ್ಲಿರುವ ಬಜಾಲ್ ಬಿಟಿಎಸ್ ಸೈಟ್ 30 ಸೆಂಟ್ಸ್,  ಕುಂಜತ್ತೂರಿನ ಮೈಕ್ರೋವೇವ್ ಸ್ಟಾಪ್ ಕ್ವಾಟ್ರಸ್ ಕಂಪೌಂಡ್ 20592 .ಮೀ, ಬೋಳಾರದ ಟೆಲಿಪೋನ್ ಎಕ್ಸ್ ಚೇಂಜ್ ಕಂಪೌಂಡ್ 13 ಸೆಂಟ್ಸ್ ಮಾರಾಟ ಮಾಡಲಾಗುವುದು ಎಂದು ತಿಳಿಸಿದರು.

4ಜಿ ನೆಟ್ ವರ್ಕ್ ಅಪ್ ಗ್ರೇಡ್

 ಬಿಎಸ್ಎನ್ ಎಲ್ ಸ್ಟ್ಯಾಂಡ್ ಅಲೋನ್ ಮೇಕ್ ಇನ್ ಇಂಡಿಯಾ 4 ಜಿ ನೆಟ್ ವರ್ಕ್ ಅನ್ನು ಹೊರತರಲಿದ್ದು, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ದ ಲಿಮಿಟೆಡ್ ಮೂಲಕ ಇದರ ಸರಬರಾಜು ಮತ್ತು ಸ್ಥಾಪನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇದೇ ನೆಟ್ ವರ್ಕ್ ಮೂಲಕ 5ಜಿ ಗೆ ಅಪ್ ಗ್ರೇಡ್ ಮಾಡಬಹುದಾಗಿದೆ ಎಂದರು.

ಮಂಗಳೂರು ಕಾರ್ಯಕ್ಷೇತ್ರದಲ್ಲಿ (. 412, ಉಡುಪಿ 198) ಒಟ್ಟು 610  4 ಜಿ ಟವರ್ ಗಳನ್ನು ಕಾರ್ಯಾರಂಭ ಮಾಡಲು ಯೋಜಿಸಲಾಗಿದೆ. ಈಗಾಗಲೇ ಮಂಗಳೂರಿನಲ್ಲಿ 161 4 ಜಿ ಟವರ್ ಇದ್ದು ಮುಮದೆ 412  4ಜಿ ಟವರ್ ಬರಲಿದೆ. ಈಗಾಗಲೇ ಎರಡು ಜಿಲ್ಲೆಗಳಲ್ಲಿ ಸುಮಾರು 20 ಟವರ್ ಗಳನ್ನು 4 ಜಿ ಗಾಗಿ ಪ್ರಯೋಗ ಮಾಡಲಾಗಿದೆ ಎಂದರು.

ಬಿಎಸ್ಎನ್ ಎಲ್ ಭಾರತ ಸರಕಾರದ 4ಜಿ ಸ್ಯಾಚುರೇಶನ್ ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಇದರ ಮೇಲ್ವಿಚಾರಣೆಯನ್ನು ಪ್ರಧಾನಮಂತ್ರಿ ಕಾರ್ಯಾಲಯದಿಂದ ನಡೆಸಲಾಗುತ್ತಿದೆ. ಯೋಜನೆಯ ಮೊಲದ ಹಂತದಲ್ಲಿ ., ಉಡುಪಿ ಜಿಲ್ಲೆಗಳನ್ನು ಒಳಗೊಂಡಿರುವ  ಕಾರ್ಯಕ್ಷೇತ್ರದ ಗ್ರಾಮಾಂತರ ಭಾಗದಲ್ಲಿ 76 ಸ್ಥಳಗಳನ್ನು ಗುರುತಿಸಲಾಗಿದೆ. ಇಲ್ಲಿಯವರೆಗೆ ಸ್ಥಳಗಳಲ್ಲಿ ಯಾವುದೇ ಪ್ರೈವೆಟ್  ಮೊಬೈಲ್ ಆಪರೇಟರ್ ಗಳಿಂದ  ನೆಟ್ ವರ್ಕ್ ಕವರೇಜ್ ಲಭ್ಯವಿರುವುದಿಲ್ಲ. . ಜಿಲ್ಲೆಯಲ್ಲಿ 43 ನಿವೇಶನಗಳ ಪೈಕಿ 40 ಕಡೆ ಟವರ್ ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಉಡುಪಿ ಜಿಲ್ಲೆಯಲ್ಲಿ 33 ನಿವೇಶನಗಳ ಪೈಕಿ 30 ಕಡೆ ಟವರ್ ಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಎಂದರು.

Ads on article

Advertise in articles 1

advertising articles 2

Advertise under the article