VIDEO: ಉಡುಪಿಯಲ್ಲಿ ಗ್ಯಾಂಗ್ ವಾರ್ - ಗರುಡ ಗ್ಯಾಂಗ್ ನ ಇಬ್ಬರ ಅರೆಸ್ಟ್
ಉಡುಪಿ: ಉಡುಪಿ ನಗರದಲ್ಲಿ ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು , ಇದರ ವಿಡಿಯೋ ವೈರಲ್ ಆಗುತ್ತಿದೆ.
ಮೇ 18ರಂದು ರಾತ್ರಿ ಎರಡು ತಂಡಗಳ ನಡುವೆ ನಡು ರಸ್ತೆಯಲ್ಲೇ ಭಾರಿ ಹೊಡೆದಾಟ ನಡೆದಿದೆ. ಅಡ್ಡಾದಿಡ್ಡಿ ಕಾರು ಚಲಾಯಿಸಿ 2 ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಬಳಿಕ ಎರಡು ತಂಡಗಳ ನಡುವೆ ಬಿಗ್ ಫೈಟ್ ನಡೆದಿದೆ.ಈ ವೇಳೆ
ನಡುರಸ್ತೆಯಲ್ಲೇ ತಂಡವೊಂದು ತಲವಾರು ಹಿಡಿದು ಹೊಡೆದಾಟ ನಡೆಸಿದೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳು ಕಾರಿನಲ್ಲಿ ಅಕ್ರಮವಾಗಿ ತಲವಾರ್‌ನ್ನು ಇರಿಸಿ ಉಡುಪಿಯಲ್ಲಿ ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿಯೂ ನಗರ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಉಡುಪಿ ಜಿಲ್ಲಾ ಎಸ್ ಪಿ ಅರುಣ್ ಕೆ ಈ ಬಗ್ಗೆ ಮಾತನಾಡಿ
ಈ ಬಗ್ಗೆ ಪ್ರಕರಣ ದಾಖಲಾಗಿದೆ. ಆಶಿಕ್ ಮತ್ತು ರಕೀಬ್ ಎಂಬಿಬ್ಬರು ಆರೋಪಿಗಳ ಬಂಧಿಸಲಾಗಿದೆ. ಎರಡು ಸ್ವಿಪ್ಟ್ ಕಾರು, ಎರಡು ಬೈಕ್ , ಒಂದು ತಲವಾರು ಮತ್ತು ಒಂದು ಡ್ರ್ಯಾಗರ್ ವಶಪಡಿಸಿಕೊಳ್ಳಲಾಗಿದೆ. ಬಂಧಿತರು ಗರುಡ ಗ್ಯಾಂಗ್ ನವರು ಎಂದು ತಿಳಿಸಿದ್ದಾರೆ.