-->
1000938341
ಪೋಸ್ಟ್ ಆಫೀಸ್‌ನಲ್ಲಿದೆ ನಿಮ್ಮ ಲೈಫ್ ಚೇಂಜ್ ಮಾಡೋ ಸ್ಟೀಮ್.. ಜಸ್ಟ್ 10 ವರ್ಷ ಕೈಗೆ ಸಿಗಲಿದೆ 17 ಲಕ್ಷ ರೂ. -

ಪೋಸ್ಟ್ ಆಫೀಸ್‌ನಲ್ಲಿದೆ ನಿಮ್ಮ ಲೈಫ್ ಚೇಂಜ್ ಮಾಡೋ ಸ್ಟೀಮ್.. ಜಸ್ಟ್ 10 ವರ್ಷ ಕೈಗೆ ಸಿಗಲಿದೆ 17 ಲಕ್ಷ ರೂ. -

ಈ ದುಬಾರಿಯ ಪ್ರಪಂಚದಲ್ಲಿ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ . ದೊಡ್ಡ ಸಂಕಷ್ಟದಿಂದ ಪಾರಾಗಲು ಉಳಿತಾಯ ಅತಿಮುಖ್ಯ ಅಂದಹಾಗೆ ಉಳಿತಾಯ ಪ್ರತಿಯೊಬ್ಬರಿಗೂ ಅವಶ್ಯಕ. ಉಳಿತಾಯ ಮಾಡುವವರಿಗೆ ಅಂತಾನೇ ಈಗ ಅನೇಕ ಯೋಜನೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅಂತಹ ಒಂದು ಯೋಜನೆ ಎಂದರೆ ಪೋಸ್ಟ್ ಆಫೀಸ್ ಠೇವಣಿ ಯೋಜನೆ. 
 ಇಂದಿನ ಯುವ ಪೀಳಿಗೆ ಕೆಲಸ ಮಾಡುತ್ತಿರಲಿ ಅಥವಾ ವ್ಯಾಪಾರ ಮಾಡುತ್ತಿರಲಿ ಸಾಕಷ್ಟು ಆದಾಯವನ್ನು ಉಳಿಸಬೇಕು ಎಂಬ ಆಸಕ್ತಿಯನ್ನು ಹೊಂದಿದ್ದಾರೆ, ಭವಿಷ್ಯದಲ್ಲಿ ಯಾವುದೇ ಹಣಕಾಸಿನ ತೊಂದರೆಗಳನ್ನು ತಪ್ಪಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಉಳಿತಾಯದ ಹಣ ಬಳಕೆ ಮಾಡಿ ಸಂಕಷ್ಟದಿಂದ ಪಾರಾಗುವ ಯೋಜನೆ - ಯೋಚನೆ ಹೊಂದಿರುತ್ತಾರೆ. ಯಾವುದೇ ರಿಸ್ಕ್ ಇಲ್ಲದೇ ಹೂಡಿಕೆ ಮಾಡಿದ ಹಣ ಕಳೆದುಹೋಗುತ್ತದೆ ಎಂಬ ಭಯ ಇಲ್ಲದೇ ಪೋಸ್ಟ್ ಆಫೀಸ್ ಆರ್‌ಡಿ ಸ್ಕಿಮ್‌ನಲ್ಲಿ ಹೂಡಿಕೆ ಮಾಡಿ ಹಣಗಳಿಸಬಹುದು.
ಆರ್‌ಡಿ ನಾವು ಗಳಿಸಿದ ಹಣವನ್ನು ಹೂಡಿಕೆ ಮಾಡಲು ಲಭ್ಯವಿರುವ ಅತ್ಯುತ್ತಮ ಹೂಡಿಕೆ ಯೋಜನೆಗಳಲ್ಲಿ ಒಂದಾಗಿದೆ. ಪ್ರಸ್ತುತ ಈ ಆರ್‌ಡಿ ಯೋಜನೆ ದೇಶದ ವಿವಿಧ ಬ್ಯಾಂಕ್‌ಗಳು ಮತ್ತು ಭಾರತೀಯ ಅಂಚೆ ಕಚೇರಿಯಲ್ಲಿ ಸುಲಭವಾಗಿ ಲಭ್ಯವಾಗಿದೆ.
ಬ್ಯಾಂಕ್ ಗಳಿಗೆ ಹೋಲಿಸಿದರೆ ಅಂಚೆ ಕಚೇರಿಯಲ್ಲಿಯೇ ಈ ಹೂಡಿಕೆ ಮಾಡಲು ಹೆಚ್ಚು ಜನರು ಆಸಕ್ತಿ ತೋರುತ್ತಾರೆ. ನೀವು 10 ವರ್ಷಗಳ ವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ 17 ಲಕ್ಷ ರೂಪಾಯಿ ಆದಾಯಗಳಿಸಬಹುದಾಗಿದೆ .
ಆರ್‌ಡಿ : 
ಕಡಿಮೆ ಅವಧಿಯಲ್ಲಿ ಭಾರಿ ಲಾಭ ಪಡೆಯಲು ಬಯಸುವವರಿಗೆ ಪೋಸ್ಟ್ ಆಫೀಸ್‌ ಆರ್‌ಡಿ ಉತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ನೀವು ಮಾಸಿಕ ಆಧಾರದ ಮೇಲೆ ಉಳಿತಾಯ ಮಾಡಬಹುದು. ಈ ಯೋಜನೆಯ ಮುಕ್ತಾಯದ ಅವಧಿ ಕೇವಲ 5 ವರ್ಷಗಳು. ಕೇಂದ್ರ ಸರ್ಕಾರ ಪ್ರಸ್ತುತ ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಶೇಕಡಾ 6.7 ರ ಬಡ್ಡಿದರವನ್ನು ನೀಡುತ್ತಿದೆ. ಅಲ್ಲದೇ ಮೆಚೂರಿಟಿಯ ನಂತರ ಬಯಸಿದಲ್ಲಿ ಈ ಯೋಜನೆಯನ್ನು ಇನ್ನೂ 5 ವರ್ಷಗಳವರೆಗೆ ವಿಸ್ತರಿಸಬಹುದು. ನೀವು ಯೋಜನೆಯಲ್ಲಿ ಕನಿಷ್ಠ 100 ರೂ.ಗಳಿಂದಲೇ ಹೂಡಿಕೆ ಮಾಡಬಹುದು. ಇದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ. ಉದಾಹರಣೆಗೆ, ನೀವು ತಿಂಗಳಿಗೆ 1000 ರೂ.ನಂತೆ 5 ವರ್ಷಗಳವರೆಗೆ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ 60 ಸಾವಿರ ಆಗುತ್ತದೆ. ಇನ್ನು ಐದು ವರ್ಷ ವಿಸ್ತರಿಸಿ 10 ವರ್ಷಗಳ ನಂತರ ತೆಗೆದುಕೊಂಡರೆ ಬಡ್ಡಿ ಸೇರಿ 1.70 ಲಕ್ಷ ರೂ. ಆದಾಯ ಪಡೆದುಕೊಳ್ಳಬಹುದು.
ಮಾಸಿಕ ಆದಾಯ ಬೇಕೇ :  
ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದರೆ 9 ಸಾವಿರ ರೂ. ಬರುತ್ತೆ: 10 ವರ್ಷಗಳಲ್ಲಿ ರೂ.17 ಲಕ್ಷಗಳನ್ನು ಪಡೆಯಬೇಕು ಎಂದು ಯೋಚಿಸಿದ್ದರೆ, ನೀವು ದಿನಕ್ಕೆ 333 ಹೂಡಿಕೆ ಮಾಡಬೇಕು. ಇಲ್ಲವೇ ತಿಂಗಳಿಗೆ 10 ಸಾವಿರ ರೂ ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯ ಮೆಚೂರಿಟಿ ಅವಧಿ 5 ವರ್ಷವಾಗಿರುವುದರಿಂದ, ಈ ವೇಳೆಗೆ ನಿಮ್ಮ ಒಟ್ಟು ಹೂಡಿಕೆ ಬಡ್ಡಿ ಸೇರಿ 7 ಲಕ್ಷದ 13 ಸಾವಿರ ರೂ. ಆಗುತ್ತದೆ. ನೀವು ಇನ್ನೂ 5 ವರ್ಷಗಳವರೆಗೆ ಈ ಯೋಜನೆಯನ್ನು ವಿಸ್ತರಿಸಿದರೆ 10 ವರ್ಷಗಳ ಮುಕ್ತಾಯದ ನಂತರ ನಿಮ್ಮ ಹೂಡಿಕೆಯು 12 ಲಕ್ಷ ರೂ. ಹಾಗೂ ಅದರ ಮೇಲಿನ ಬಡ್ಡಿ 5 ಲಕ್ಷದ 8 ಸಾವಿರದ 546 ಆಗಿರುತ್ತದೆ. ಅಂದರೆ 10 ವರ್ಷಗಳ ನಂತರ ನಿಮಗೆ ಅಸಲು ಮತ್ತು ಬಡ್ಡಿ ಸೇರಿ 17 ಲಕ್ಷದ 8 ಸಾವಿರದ 546 ರೂ. ಆದಾಯ ಬರುತ್ತದೆ. ಈ ಯೋಜನೆಯು ಯಾವುದೇ ರಿಸ್ಕ್ ಇಲ್ಲದೇ ತಿಂಗಳಿಗೆ 10 ಸಾವಿರ ರೂ ಹೂಡಿಕೆ ಮಾಡಿ ಸುಲಭವಾಗಿ ಹಣ ಗಳಿಸಬಹುದು.

Ads on article

Advertise in articles 1

advertising articles 2

Advertise under the article