-->

ಉಳ್ಳಾಲ: ವ್ಯಕ್ತಿ ಆತ್ಮಹತ್ಯೆಗೆ ಶರಣು

ಉಳ್ಳಾಲ: ವ್ಯಕ್ತಿ ಆತ್ಮಹತ್ಯೆಗೆ ಶರಣು


ಉಳ್ಳಾಲ: ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಳ್ಳಾಲ ಸಮೀಪದ ಕುಂಪಲ ಹನುಮಾನ್ ನಗರದಲ್ಲಿ ನಡೆದಿದೆ.

ಕುಂಪಲ ಹನುಮಾನ್ ನಗರ ನಿವಾಸಿ ಯೋಗೀಶ್(44)ಆತ್ಮಹತ್ಯೆಗೆ ಶರಣಾದವರು.

ಯೋಗೀಶ್ ಸೋಮವಾರ ಬೆಳಗ್ಗೆ ತಮ್ಮ ಮನೆಗೆ ತಾಗಿಕೊಂಡಿರುವ ಶೌಚಾಲಯದ ಮರದ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಇವರು ಸ್ವಸಹಾಯ ಗುಂಪೊಂದರ ಸದಸ್ಯರಾಗಿದ್ದು, ಸಂಘದ 40 ಸಾವಿರ ರೂ. ಹಣವನ್ನು ಬ್ಯಾಂಕಿಗೆ ಕಟ್ಟದೆ ಖರ್ಚು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಸಂಘದ ಉಳಿದ ಸದಸ್ಯರು ಭಾನುವಾರ ಬೆಳಗ್ಗೆ ಮತ್ತು ಸಂಜೆ ಯೋಗೀಶ್ ಮನೆಗೆ ತೆರಳಿ ಹಣ ಕಟ್ಟುವಂತೆ ಪೀಡಿಸಿದ್ದರಂತೆ. ಈ ಅವಮಾನದಲ್ಲಿ ಯೋಗೀಶ್ ಆತ್ಮಹತ್ಯೆಗೈದಿರುವುದಾಗಿ ಹೇಳಲಾಗುತ್ತಿದೆ.

ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಯೋಗೀಶ್ ಮೃತಪಟ್ಟಿದ್ದರಿಂದ ಮನನೊಂದು ಅವರ ಪತ್ನಿಯೂ ನೇಣು ಬಿಗಿದು ಆತ್ಮ ಹತ್ಯೆಗೈಯಲು ಮುಂದಾಗಿದ್ದರು. ಆದರೆ ಸ್ಥಳದಲ್ಲಿದ್ದ ಸ್ಥಳೀಯರು ಅವರನ್ನು ತಡೆದಿದ್ದಾರೆ. ಮೃತ ಯೋಗೀಶ್ ಇಬ್ಬರು ಪುಟ್ಟ ಗಂಡು ಮಕ್ಕಳು,ಪತ್ನಿ,ತಾಯಿಯನ್ನು ಅಗಲಿದ್ದಾರೆ.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article