-->
1000938341
ಕಾಸರಗೋಡು: ನಾಲ್ಕು ತಿಂಗಳ ಹೆಣ್ಣು ಶಿಶುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ತಾಯಿ

ಕಾಸರಗೋಡು: ನಾಲ್ಕು ತಿಂಗಳ ಹೆಣ್ಣು ಶಿಶುವನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ತಾಯಿ


ಕಾಸರಗೋಡು: ನಾಲ್ಕು ತಿಂಗಳ ಹಸುಳೆಯನ್ನು ಹತ್ಯೆಗೈದು ತಾಯಿಯೂ ಕೈ ನರ ಕತ್ತರಿಸಿ ನೇಣಿಗೆ ಶರಣಾಗಿರುವ  ದಾರುಣ ಘಟನೆ ಕಾಸರಗೋಡಿನ ಮುಳ್ಳೇರಿಯ ಸಮೀಪ ನಡೆದಿದೆ. ‌

ಇಡುಕ್ಕಿ ತೊಡುಪುಳ ನಿವಾಸಿ ಶರತ್‌ ಎಂಬರ ಪತ್ನಿ ಬಿಂದು (28) ಆತ್ಮಹತ್ಯೆಗೆ ಶರಣಾದವರು. ಘಟನೆಯಲ್ಲಿ ಅವರ ನಾಲ್ಕು ತಿಂಗಳ ಹೆಣ್ಣು ಶಿಶು ಶ್ರೀನಂದಾ ಕೂಡಾ ಮೃತಪಟ್ಟಿದೆ. 

ಶರತ್‌ ಇಸ್ರೇಲ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಬಿಂದು ತೊಡುಪುಳದಲ್ಲಿರುವ ಪತಿಯ ಮನೆಯಿಂದ ಪುತ್ರಿ ಶ್ರೀನಂದಾ ಮತ್ತು ಪುತ್ರ ಶ್ರೀಹರಿಯೊಂದಿಗೆ ಕಳೆದ ರವಿವಾರ ಮುಳಿಯಾರು ಬಳಿಯ ಕೋಪಾಳಕೊಚ್ಚಿಗೆ ಬಂದಿದ್ದರು. ಎ.5ರಂದು ಮಧ್ಯಾಹ್ನ ಬಿಂದು ಅವರು ತಮ್ಮ ಮನೆ ಪಕ್ಕದ ಮರಕ್ಕೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಕೈನರ ಕತ್ತರಿಸಲ್ಪಟ್ಟು ರಕ್ತ ಒಸರುತ್ತಿತ್ತು.

ಇದೇ ವೇಳೆ ಅವರು ಹೆಣ್ಣು ಶಿಶು ಶ್ರೀನಂದಾ ಮನೆಯ ಮಲಗುವ ಕೊಠಡಿಯಲ್ಲಿ ಗಂಭೀರಾವಸ್ಥೆಯಲ್ಲಿ ಕಂಡು ಬಂದಿತ್ತು. ತಕ್ಷಣ ಮನೆಯವರು ಶಿಶುವನ್ನು ಚೆಂಗಳ ಸಹಕಾರಿ ಆಸ್ಪತ್ರೆಗೆ ಸಾಗಿಸಿದ್ದರೂ, ರಕ್ಷಿಸಲು ಸಾಧ್ಯವಾಗಲಿಲ್ಲ.

ವಿಷಯ ತಿಳಿದ ಕಾಸರಗೋಡು ತಹಶೀಲ್ದಾರ್‌ ಪಿ.ಎಂ.ಅಬೂಬಕ್ಕರ್‌ ಸಿದ್ದಿಕ್‌, ಕಾಸರಗೋಡು ಡಿವೈಎಸ್‌ಪಿ ಜಯನ್‌ ಡೊಮಿನಿಕ್‌ ಹಾಗೂ ಆದೂರು ಪೊಲೀಸ್‌ ಇನ್‌ಸ್ಪೆಕ್ಟರ್‌ ಸಂಜಯ್‌ ಕುಮಾರ್‌ ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಉನ್ನತ ಮಟ್ಟದ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿದೆ.‌ ಸಾವಿಗೆ ಕಾರಣ ಇನ್ನಷ್ಟೇ ತಿಳಿಯ ಬೇಕಿದ್ದು, ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article