ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಸಮಯ ಬದಲಾವಣೆ


ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ನಗರದ ಬ್ರಹ್ಮಶ್ರೀ ನಾರಾಯಣಗುರು ಸರ್ಕಲ್ ನಿಂದ ನವಭಾರತ ಸರ್ಕಲ್ ವರೆಗೆ ನಡೆಯುವ ರೋಡ್ ಶೋ ಸಮಯ ಬದಲಾವಣೆಯಾಗಿದೆ. ರವಿವಾರ ರಾತ್ರಿ 7.45ಕ್ಕೆ ರೋಡ್ ಶೋ ಆರಂಭವಾಗಲಿದೆ.

ಈ ಬಗ್ಗೆ ಮಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಸುನಿಲ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ನಾಳೆ ಸಂಜೆ 7.45 ಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಆರಂಭವಾಗಿ ನವಭಾರತ್ ಸರ್ಕಲ್ ವರೆಗೆ ರೋಡ್ ಶೋವರೆಗೆ ನಡೆಯಲಿದೆ. ವಿಜಯ ಸಂಕಲ್ಪ ರೋಡ್ ಶೋನಲ್ಲಿ ಭಾಗವಹಿಸಲು ಬರುವವರು 6.45 ರಿಂದ 7ರೊಳಗೆ ಬರಬೇಕು ಎಂದು ಹೇಳಿದರು.

ಈ ಹಿಂದೆ ಮೋದಿಯವರು ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ಸಮಾವೇಶದ ಆಯೋಜನೆ ಆಗಿತ್ತು. ಸಮಾವೇಶಕ್ಕೆ ಚಪ್ಪರ ಮುಹೂರ್ತವೂ ಆಗಿತ್ತು. ಆದರೆ ಏಕಾಏಕಿ ಸಮಾವೇಶ ರದ್ದುಗೊಂಡು ರೋಡ್ ಶೋ ಆಯೋಜನೆಗೊಂಡಿದೆ. ಆದರೆ ಈ ಹಿಂದೆ 6ಗಂಟೆಗೆ ರೋಡ್ ಶೋ ನಿಗದಿಯಾಗಿತ್ತು. ಸದ್ಯ ಸಮಯ ಬದಲಾವಣೆಗೊಂಡು 7.45ಕ್ಕೆ ರೋಡ್ ಶೋ ಆರಂಭವಾಗಲಿದೆ.