-->

ಕರುನಾಡ ಕುಳ್ಳ ದ್ವಾರಕೀಶ್ ಆವರ ವಿಶೇಷ ಚಿತ್ರ ಗಳ ಪಟ್ಟಿ ಇಲ್ಲಿದೆ

ಕರುನಾಡ ಕುಳ್ಳ ದ್ವಾರಕೀಶ್ ಆವರ ವಿಶೇಷ ಚಿತ್ರ ಗಳ ಪಟ್ಟಿ ಇಲ್ಲಿದೆ


ಕರುನಾಡ ಕುಳ್ಳ ಎಂದು ಕರೆಯಲ್ಪಡುವ ದ್ವಾರಕೀಶ್ ಅವರು ತನ್ನದೇ ರೀತಿಯಲ್ಲಿ ಕರುನಾಡ ಚಿತ್ರರಂಗಕ್ಕೆ ಕೊಡುಗೆಯನ್ನು ನೀಡಿದ್ದಾರೆ ಅದರಲ್ಲಿ ಆಯ್ದ ಕೆಲವು ಚಿತ್ರಗಳ ವಿವರ ಇಲ್ಲಿದೆ 

ಮೇಯ‌ರ್ ಮುತ್ತಣ್ಣ
ಇದು ದ್ವಾರಕೀಶ್ ಸ್ವತಂತ್ರವಾಗಿ ನಿರ್ಮಾಣ ಮಾಡಿದ ಮೊದಲ ಚಿತ್ರವಾಗಿದೆ 
1969ರಲ್ಲಿ 'ಮೇಯ‌ರ್ ಮುತ್ತಣ್ಣ' ಸಿನಿಮಾದಲ್ಲಿ ಡಾ ರಾಜ್‌ಕುಮಾರ್ ನಟಿಸಿದ್ದರು. 'ಮೇಯ‌ರ್ ಮುತ್ತಣ್ಣ' ಆ ಕಾಲಕ್ಕೆ ದೊಡ್ಡ ಹಿಟ್ ಎನಿಸಿಕೊಂಡಿತ್ತು.
ಭಾಗ್ಯವಂತರು
1977ರಲ್ಲಿ ತೆರೆಕಂಡ 'ಭಾಗ್ಯವಂತರು' ದೊಡ್ಡ ಯಶಸ್ಸು ಕಂಡಿತ್ತು. ಈ ಸಿನಿಮಾದ ಮೂಲಕ ತಮ್ಮ ಸಂಬಂಧಿ ಎಚ್ ಆರ್ ಭಾರ್ಗವ ಅವರನ್ನು ನಿರ್ದೇಶಕರನ್ನಾಗಿ ಮಾಡಿದ್ದರು ದ್ವಾರಕೀಶ್.
ಗುರು ಶಿಷ್ಯರು
1981ರಲ್ಲಿ ತೆರೆಗೆ ಬಂದ 'ಗುರು ಶಿಷ್ಯರು' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಗೆಲುವು ಪಡೆದುಕೊಂಡಿತ್ತು. ಇದನ್ನು ನಿರ್ಮಾಣ ಮಾಡುವುದರ ಜೊತೆಗೆ ಪ್ರಮುಖ ಪಾತ್ರದಲ್ಲೂ ದ್ವಾರಕೀಶ್ ನಟಿಸಿದ್ದರು.
ನೀ ಬರೆದ ಕಾದಂಬರಿ
'ನೀ ಬರೆದ ಕಾದಂಬರಿ' ಸಿನಿಮಾವನ್ನು ನಿರ್ಮಿಸಿ, ಮೊದಲ ಬಾರಿಗೆ ನಿರ್ದೇಶನ ಕೂಡ ಮಾಡಿದ್ದರು. ಈ ಚಿತ್ರವು ದೊಡ್ಡ ಯಶಸ್ಸನ್ನು ಕಂಡಿತ್ತು. ಇದರ ಹಾಡುಗಳು ಜನಪ್ರಿಯವಾಗಿದ್ದವು.
ಕಿಟ್ಟು ಪುಟ್ಟು
ಡಾ ವಿಷ್ಣುವರ್ಧನ್ ಜೊತೆಗೆ ದ್ವಾರಕೀಶ್ ಕೂಡ 'ಕಿಟ್ಟು ಪುಟ್ಟು' ಸಿನಿಮಾದಲ್ಲಿ ನಟಿಸಿದ್ದರು. ಈ ಸಿ ವಿ ರಾಜೇಂದ್ರನ್ ನಿರ್ದೇಶನದ ಈ ಸಿನಿಮಾವು ಉತ್ತಮ ಗಳಿಕೆ ಮಾಡಿತ್ತು.
ಸಿಂಗಾಪೂರ್‌ನಲ್ಲಿ ರಾಜಾ ಕುಳ್ಳ
1978ರಲ್ಲಿ 'ಸಿಂಗಾಪೂರ್‌ನಲ್ಲಿ ರಾಜಾ ಕುಳ್ಳ' ಸಿನಿಮಾ ತೆರೆಗೆ ಬಂದಿತ್ತು. ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನಿಮಾ ಎಂಬ ಖ್ಯಾತಿ ಈ ಸಿನಿಮಾಗೆ ಇದೆ.

ಪ್ರೀತಿ ಮಾಡು ತಮಾಷೆ ನೋಡು
ಶಂಕರ್ ನಾಗ್, ಶ್ರೀನಾಥ್ ಜೋಡಿಯ 'ಪ್ರೀತಿ ಮಾಡು ತಮಾಷೆ ನೋಡು' ಸಿನಿಮಾವನ್ನು ನಿರ್ಮಾಣ ಮಾಡುವುದರ ಜೊತೆಗೆ ಪ್ರಮುಖ ಪಾತ್ರವನ್ನು ಮಾಡಿದ್ದರು ದ್ವಾರಕೀಶ್. ಈ ಚಿತ್ರ ಕೂಡ ನೋಡುಗರಿಗೆ ಇಷ್ಟವಾಗಿತ್ತು.

ಶ್ರುತಿ
ದ್ವಾರಕೀಶ್ ನಿರ್ಮಿಸಿ, ನಿರ್ದೇಶನ ಮಾಡಿದ್ದ 'ಶ್ರುತಿ' ಸಿನಿಮಾವು ಹಾಡುಗಳಿಂದಲೇ ಜನಪ್ರಿಯವಾಗಿತ್ತು. ಈ ಸಿನಿಮಾದಿಂದ ನಟಿ ಶ್ರುತಿ ಮತ್ತು ನಟ ಸುನೀಲ್‌ಗೆ ಬೇಡಿಕೆ ಹೆಚ್ಚಾಗಿತ್ತು.
ಆಪ್ತಮಿತ್ರ
2004ರಲ್ಲಿ ತೆರೆಗೆ ಬಂದ 'ಆಪ್ತಮಿತ್ರ' ಬ್ಲಾಕ್ ಬಸ್ಟರ್ ಸಕ್ಸಸ್‌ ಅನ್ನು ಪಡೆಯುವುದರ ಜೊತೆಗೆ ದ್ವಾರಕೀಶ್‌ಗೆ ಒಳ್ಳೆಯ ಹಣ ತಂದುಕೊಟ್ಟಿತ್ತು. ಈ ಚಿತ್ರವು ಸತತ 1 ವರ್ಷ ಪ್ರದರ್ಶನ ಕಂಡಿತ್ತು.
ಚೌಕ
ಬಹುತಾರಾಗಣ 'ಚೌಕ' ಸಿನಿಮಾವು ಒಂದು ವಿಶೇಷ ಪ್ರಯತ್ನವಾಗಿತ್ತು. ದರ್ಶನ್ ಅತಿಥಿ ಪಾತ್ರ ಮಾಡಿದ್ದ ಈ ಸಿನಿಮಾವು ಶತದಿನೋತ್ಸವ ಪೂರೈಸಿತ್ತು

ಹೀಗೆ ಕನ್ನಡ ಚಿತ್ರ ರಂಗಕ್ಕೆ ತನ್ನದೇ ರೀತಿಯಲ್ಲಿ ಕೊಡುಗೆ ಕೊಟ್ಟ ದ್ವಾರಕೀಶ್ ಆವರ ಆತ್ಮಕ್ಕೆ ಚಿರಶಾಂತಿ ಸಿಗಲಿ

Ads on article

Advertise in articles 1

advertising articles 2

Advertise under the article