ಕೇಸರಿ ಕಲ್ಲಂಗಡಿ ಹಣ್ಣು ಮಾರುಕಟ್ಟೆಗೆ ಬರಲಿದೆ


 ಬಿಸಿಲಿನ ತಾಪಕ್ಕೆ ಮಾರುಕಟ್ಟೆಯಲ್ಲಿ ಹಣ್ಣಿನ  ದರ ಹೆಚ್ಚಾಗುವುದರ ಜೊತೆಗೆ ಭಾರೀ ಬೇಡಿಕೆ ಬರುತ್ತಿದೆ . ಅದರಲ್ಲಿಯೂ  ಕಲ್ಲಂಗಡಿ ಹಣ್ಣಿಗೆ  ಬಾರಿ  ಬೇಡಿಕೆ ಉಂಟು ಹೀಗಿರುವಾಗ  ಮಾರುಕಟ್ಟೆಗೆ ಕೇಸರಿ ಬಣ್ಣದ ಕಲ್ಲಂಗಡಿ ಹಣ್ಣು ಬರಲಿದೆ 
ಹಿರಿಯಡಕದ ಸುರೇಶ್ ನಾಯಕ್ ಅವರು ಸುಮಾರು 2 ಎಕರೆ ಜಾಗದಲ್ಲಿ ಈ ಕಲ್ಲಂಗಡಿ ಹಣ್ಣನ್ನು ಬೆಳಸುದ್ದಾರೆ . ಈಗಾಗಲೇ ಬೆಳೆ ಫಸಲು ನೀಡಿದೆ. ಕೇಸರಿ ಕಲ್ಲಂಗಡಿ ಹಣ್ಣುಗಳು ಸಾಮಾನ್ಯವಾಗಿ ಥೈವಾನ್ ದೇಶದಲ್ಲಿ ಅಧಿಕವಾಗಿ ಬೆಳೆಯಲಾಗುತ್ತದೆ. ಭಾರತದಲ್ಲಿ ಈ ಬೆಳೆ ವಿರಳ ಎಂದು ಹೇಳಲಾಗುತ್ತಿದೆ. 
ಕಳೆದ ವರ್ಷ ಇವರು ಹಳದಿ ಕಲ್ಲಂಗಡಿ ಬೆಳೆಸಿದ್ದರು. ಹಳದಿ ಕಲ್ಲಂಗಡಿ ಕೆಜಿಗೆ 35 ರೂ., ಕೆಂಪು ಕಲ್ಲಂಗಡಿ ಕೆಜಿಗೆ
30 ರೂ.ಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕೇಸರಿ ಕಲ್ಲಂಗಡಿ ಹಣ್ಣುಗಳು ಇನ್ನು ಕೂಡ ಪಕ್ವಗೊಳ್ಳದ ಕಾರಣ ಎ.28ರ ಬಳಿಕ ಮಾರಾಟ ಮಾಡಲು ಉದ್ದೇಶಿಸಿದ್ದಾರೆ. ಕೇಸರಿ ಕಲ್ಲಂಗಡಿ ಕೆಜಿಗೆ 40 ರೂ. ದರ ನಿಗದಿಯಾಗುವ ಸಾಧ್ಯತೆ ಉಂಟು.
10 ಎಕರೆಯಲ್ಲಿ ಕಲ್ಲಂಗಡಿ ಕೃಷಿ ಮಾಡಿದ್ದಾರೆ. 6 ಎಕ್ರೆಯಲ್ಲಿ ಹಳದಿ ಹಾಗೂ ಕೇಸರಿ ಬಣ್ಣದ ಕಲ್ಲಂಗಡಿ ಮತ್ತು 4 ಎಕರೆಯಲ್ಲಿ ಕೆಂಪು ಕಲ್ಲಂಗಡಿ ಬೆಳೆದಿದ್ದಾರೆ. ಈಗಾಗಲೇ 8 ಎಕರೆಯಲ್ಲಿದ್ದ ಕಲ್ಲಂಗಡಿ ಹಣ್ಣುಗಳೆಲ್ಲವೂ ಮಾರಾಟಗೊಂಡಿವೆ. ಬಿಸಿಲಿನ ತಾಪಕ್ಕೆ ಬೇಡಿಕೆ ಹೆಚ್ಚಾಗಿ ಕಂಡುಬರುತ್ತಿದೆ. ಸ್ಥಳೀಯವಾಗಿಯೇ ಹಣ್ಣುಗಳು ಮಾರಾಟವಾಗುತ್ತಿದೆ  ಹಾಗಾಗೀ ಮಾರುಕಟ್ಟೆಗೆ ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎನ್ನುತ್ತಾರೆ