-->
1000938341
ಬಿಸಿಲಿನ ತಾಪ ಹೆಚ್ಚಾದ ಕಾರಣ ಅಂಗನವಾಡಿ ಸಮಯದಲ್ಲಿ ಬದಲಾವಣೆ

ಬಿಸಿಲಿನ ತಾಪ ಹೆಚ್ಚಾದ ಕಾರಣ ಅಂಗನವಾಡಿ ಸಮಯದಲ್ಲಿ ಬದಲಾವಣೆ


ರಾಜ್ಯದಲ್ಲಿ ಬಿಸಿಲು ಹೆಚ್ಚಾದ ಕಾರಣ  ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಅನ್ವಯವಾಗಿದ್ದ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣಾ ಸಮಯ ಬದಲಾವಣೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಂಗನವಾಡಿ ಕೇಂದ್ರಗಳ ಕಾರ್ಯ ನಿರ್ವಹಣಾ ಸಮಯವನ್ನು ಈ ಮೊದಲು ಬೆಳಗ್ಗೆ 8
ರಿಂದ ಮಧ್ಯಾಹ್ನ 12 ರವರೆಗೂ ನಿಗದಿಪಡಿಸಲಾಗಿತ್ತು.  ಬಿಸಿಲು ಹೆಚ್ಚಾಗಿರುವುದರಿಂದ ಉಳಿದ ಜಿಲ್ಲೆಗಳಿಗೂ ವಿಸ್ತರಿಸಬೇಕು ಎಂಬ ಮನವಿ ಹಿನ್ನೆಲೆಯಲ್ಲಿ ಏ. 15ರಿಂದ ಮೇ 10 ರವರೆಗೂ ರಾಜ್ಯಾದ್ಯಂತ ವಿಸ್ತರಿಸಲಾಗಿದೆ.
ಅಂಗನವಾಡಿ ಸಿಬ್ಬಂದಿಗೆ ಮೇ 11 ರಿಂದ 26ವರೆಗೆ ಬೇಸಿಗೆ ರಜೆ ನೀಡಲಾಗಿದೆ. ಮೇ 27ರಿಂದ ಅಂಗನವಾಡಿಗಳು ಎಂದಿನಂತೆ ಬೆಳಗ್ಗೆ 9.30ರಿಂದ ಸಂಜೆ 4 ಗಂಟೆಯವರೆಗೂ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಲಾಗಿದೆ

Ads on article

Advertise in articles 1

advertising articles 2

Advertise under the article