-->
1000938341
ಯಾವ ಗಿಡಗಳು ಹಾವನ್ನು ಆಕರ್ಷಿಸಿತ್ತದೆ

ಯಾವ ಗಿಡಗಳು ಹಾವನ್ನು ಆಕರ್ಷಿಸಿತ್ತದೆ


ಅನೇಕ ಜನರು ಗಿಡಗಳನ್ನು ಬೆಳೆಯುತ್ತಾರೆ ಆದರೆ ಯಾರೂ ಕೂಡ ಮುಂದೆ ಆಗುವ ಅಪಾಯದ ಬಗ್ಗೆ ಯೋಚನೆ ಮಾಡೋದಿಲ್ಲ .
ಮನೆಯ ಮುಂದೆ ಸ್ವಲ್ಪ ಜಾಗವಿದ್ರೂ ಅಲ್ಲಿ ಸುಂದರವಾದ ತೋಟವನ್ನೇ ನಿರ್ಮಿಸುತ್ತಾರೆ. ಆದರೆ ಮನೆಯ ಮುಂದೆ ಯಾವ ಸಸ್ಯಗಳನ್ನು ಇರಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು  . ಹಾವು ಬರುತ್ತೆ ಅಂತ ಮರಗಳನ್ನು ಕತ್ತರಿಸುವ ಬದಲು ಅವುಗಳ ನಿರ್ವಹಣೆಯನ್ನು ಕ್ರಮಬದ್ಧವಾಗಿ ಮಾಡಬೇಕು ಎಂದು ಸಲಹೆ ನೀಡಲಾಗುತ್ತದೆ.
ಹಾವುಗಳು ಇಷ್ಟಪಡುವ ಮತ್ತು ಇಷ್ಟಪಡದ ಹಲವಾರು ರೀತಿಯ ಮರಗಳು ಮತ್ತು ಸಸ್ಯಗಳಿವೆ. ಹಾವುಗಳು ಕೆಲವು ಮರಗಳು ಮತ್ತು ಸಸ್ಯಗಳ ವಾಸನೆಯನ್ನು ಇಷ್ಟಪಡುವುದಿಲ್ಲ. ಇಷ್ಟಪಡದ ಸಸ್ಯಗಳನ್ನು ಮನೆಯ ಆವರಣದಲ್ಲಿ ಇರಿಸಿಕೊಳ್ಳೋದು ಒಳ್ಳೆಯದು
ಎರೆಹುಲ್ಲು, ಗರುಡ ಮರ, ಸರ್ಪಗಂಧ ಹೀಗೆ ಕೆಲವು ಮರಗಳ ವಾಸನೆ ಹಾವುಗಳಿಗೆ ಇಷ್ಟವಾಗುವುದಿಲ್ಲ. ಆದರೆ ಯಾವ ಮರಗಳು ಹಾವುಗಳನ್ನು ಆಕರ್ಷಿಸುತ್ತದೆ ಎಂಬುದರ ಬಗ್ಗೆ  ತಿಳಿಯುವುದು ಒಳ್ಳೆಯದು .

ಬೊನ್ಸಾಯ್ ಮರಗಳು :
ಇತ್ತೀಚಿನ ದಿನಗಳಲ್ಲಿ ಬೊನ್ಸಾಯ್ ಮರಗಳು ಟ್ರಿಂಡ್‌ನಲ್ಲಿದ್ದು, ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿಸುತ್ತಾರೆ. ಮನೆಯ ಆವರಣದಲ್ಲಿ ವಿವಿಧ ರೀತಿಯ ಮರಗಳು ಮತ್ತು ಸಸ್ಯಗಳನ್ನು ನೆಡಲು ಬಹುತೇಕರು ಇಷ್ಟಪಡುತ್ತಾರೆ. ಸುತ್ತಲಿನ ಮರಗಳು ಮತ್ತು ಸಸ್ಯಗಳಿಂದ ಹೆಚ್ಚು ಶುದ್ಧವಾದ ಗಾಳಿಯನ್ನು ಪಡೆಯುತ್ತವೆ.
ಕೆಲವೊಂದು ಸಂದರ್ಭದಲ್ಲಿ ಅತಿ ಹೆಚ್ಚು ಹಸಿರು ಪ್ರದೇಶ ನಿರ್ಮಾಣವಾದ್ರೆ ಕೆಲವು ಕೀಟ, ಹುಳುಗಳ ವಾಸಸ್ಥಾನವಾಗಿ ಬದಲಾಗುತ್ತದೆ. ಆದ್ದರಿಂದ ಮನೆಯ ಮುಂದೆ ಹೂವಿನ ಕುಂಡ ಅಥವಾ ಯಾವುದೇ ಅಲಂಕಾರಿಕ ಸಸ್ಯಗಳನ್ನು ಪ್ಲಾಂಡ್ ಮಾಡಿದರೂ ಅವುಗಳನ್ನು ಕ್ರಮಬದ್ಧವಾಗಿ ನಿರ್ವಹಣೆ ಮಾಡಬೇಕಾಗುತ್ತದೆ .
ಶ್ರೀಗಂಧದ ಮರ :
ಕೆಲವು ಮರಗಳು ಹಾವುಗಳಿಗೆ ಮನೆ ಮತ್ತು ಆಹಾರದ ಮುಖ್ಯ ಮೂಲವಾಗಿದೆ. ದಪ್ಪ ಎಲೆ ಅಥವಾ ಟೊಳ್ಳು ಮರಗಳ ಮೇಲೆ ಹೆಚ್ಚಾಗಿ ಹಾವುಗಳು ಕಂಡು ಬರುತ್ತವೆ. ಹಾವುಗಳು ಸೂಕ್ಷ್ಮವಾಗಿ ವಾಸನೆಯನ್ನು ಗ್ರಹಿಸುತ್ತವೆ ಎಂದು ವಿಜ್ಞಾನ ಹೇಳುತ್ತದೆ. ಪರಿಮಳಯುಕ್ತ ಶ್ರೀಗಂಧ ಮರಗಳ ಮೇಲೆ ಹಾವುಗಳು ವಾಸಿಸುತ್ತವೆ. ಹಾವುಗಳು ತಂಪಾದ, ಕತ್ತಲೆಯಾದ ಸ್ಥಳಗಳನ್ನು ವಾಸಿಸಲು ಆಯ್ಕೆ ಮಾಡಿಕೊಳ್ಳುತ್ತವೆ. ಶ್ರೀಗಂಧ ಮರವೂ ತಂಪಾಗಿರೋ ಕಾರಣ ಹಾವುಗಳನ್ನು ಆಕರ್ಷಿಸುತ್ತವೆ.
ನಿಂಬೆ ಮರವು ಹಾವುಗಳು ವಾಸಿಸಲು ಇಷ್ಟಪಡುವ ಮರವಾಗಿದೆ. ಬಹುಶಃ ಈ ಹುಳಿ ಹಣ್ಣನ್ನು ಕೀಟಗಳು, ದಂಶಕಗಳು ಮತ್ತು ಪಕ್ಷಿಗಳು ತಿನ್ನುತ್ತವೆ ಮತ್ತು ಅವು ಇಲ್ಲಿ ಬಿಡಾರ ಹೂಡುತ್ತವೆ.
ಈ ಮರದ ಮೇಲೆ ಹಾವುಗಳು ಸಹ ವಾಸಿಸುತ್ತವೆ ಎಂದು ಹೇಳಲಾಗುತ್ತದೆ. ಪೈನ್ ಮರಗಳು ಹೆಚ್ಚಾಗಿ ಕಾಡುಗಳಲ್ಲಿ ಕಂಡುಬರುತ್ತವೆ. ಈ ಮರಗಳು ಸಾಕಷ್ಟು ದೊಡ್ಡದಾಗಿರುತ್ತವೆ. ಈ ಮರಗಳು ದಟ್ಟವಾಗಿರುವ ಕಾರಣ ಇಲ್ಲಿ ತಂಪಾದ ಪ್ರದೇಶ ನಿರ್ಮಾಣವಾಗಿರುತ್ತದೆ.
ಕ್ಲೋವರ್ ಸಸ್ಯ :
ಈ ಸಸ್ಯವು ನೆಲದಿಂದ ಹೆಚ್ಚು ಎತ್ತರಕ್ಕೆ ಬೆಳೆಯುವುದಿಲ್ಲ. ನೆಲಕ್ಕೆ ಹತ್ತಿರವಾಗಿರುವುದರಿಂದ, ಹಾವುಗಳು ಸುಲಭವಾಗಿ ಅಡಗಿಕೊಳ್ಳಬಹುದು ಮತ್ತು ಈ ಮರದ ಕೆಳಗೆ ವಿಶ್ರಾಂತಿ ಪಡೆಯಬಹುದು. ಇದರ ಜೊತೆ ಈ ಸಸ್ಯ ಅಡಿ ಭಾಗವು ತಂಪಾಗಿರುತ್ತದೆ.
ಸೈಪ್ರೆಸ್ ಸಸ್ಯ :
ನಿಮ್ಮ ಮನೆ, ಅಂಗಳ ಅಥವಾ ಉದ್ಯಾನದ ಸುತ್ತಲೂ ನೀವು ಸೈಪ್ರೆಸ್ ಸಸ್ಯವನ್ನು ಹೊಂದಿದ್ದರೆ ಜಾಗರೂಕರಾಗಿರಬೇಕು. ಇದೊಂದು ಅಲಂಕಾರಿಕ ಸಸ್ಯವಾಗಿದ್ದು, ದಪ್ಪವಾದ ಎಲೆಗಳನ್ನು ಹೊಂದಿದ್ದು ತುಂಬಾನೇ ದಟ್ಟವಾಗಿರುತ್ತದೆ. ಈ ಸಸ್ಯದಲ್ಲಿ ತುಂಬಾನೇ ಸರಳವಾಗಿ ಹಾವುಗಳು ಅಡಗಿಕೊಳ್ಳುತ್ತವೆ
ಮಲ್ಲಿಗೆ :
ಹಾವುಗಳು ಕೂಡ ಮಲ್ಲಿಗೆ ಗಿಡದ ಸುತ್ತ ವಾಸಿಸಲು ಇಷ್ಟಪಡುತ್ತದೆ. ಇದು ನೆರಳಿನ ಸಸ್ಯವಾಗಿದೆ. ಅನೇಕ ಜನರು ಸಂತೋಷ, ಸಕಾರಾತ್ಮಕತೆಯನ್ನು ತರಲು ಮತ್ತು ಮನೆಯನ್ನು ಪರಿಮಳಯುಕ್ತವಾಗಿರಿಸಲು ಮಲ್ಲಿಗೆಯನ್ನು ನೆಡುತ್ತಾರೆ

Ads on article

Advertise in articles 1

advertising articles 2

Advertise under the article