-->

ಸ್ತನ ಕ್ಯಾನ್ಸರ್ ಗೆ ದೇಶದಲ್ಲಿ ನಡೆದಿದೆ ಮೊದಲ ರೋಬೋಟಿಕ್ ಸರ್ಜರಿ

ಸ್ತನ ಕ್ಯಾನ್ಸರ್ ಗೆ ದೇಶದಲ್ಲಿ ನಡೆದಿದೆ ಮೊದಲ ರೋಬೋಟಿಕ್ ಸರ್ಜರಿ


ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ  ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇಬ್ಬರು ಮಹಿಳೆಯರಿಗೆ ದೇಶದಲ್ಲೇ ಪ್ರಥಮ ಬಾರಿಗೆ  ರೋಬೋಟಿಕ್ ಸರ್ಜರಿ ಮಾಡಲಾಗಿದೆ. ಅಂಗಾಂಶ ಪುನರ್‌ನಿರ್ಮಾಣದ ಮೂಲಕ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದೆ.  ವಿಶೇಷವೆಂದರೆ ಈ ಸರ್ಜರಿಯಲ್ಲಿ ಮಹಿಳೆಯರ ಸ್ತನಗಳನ್ನು ತೆಗೆದುಹಾಕುವ ಅಗತ್ಯವಿಲ್ಲ. ಹೆರಿಗೆಯ ನಂತರ 27 ವರ್ಷದ ಮಹಿಳೆಯೊಬ್ಬರು ಸ್ತನದಲ್ಲಿ ಗಡ್ಡೆಯಿರುವುದಾಗಿ ವೈದ್ಯರಿಗೆ ತಿಳಿಸಿದ್ದರು. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಸ್ತನದಲ್ಲಿ ಇಂತಹ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ, ಆದರೆ ಮಹಿಳೆ ತನ್ನ ಸಮಸ್ಯೆಯನ್ನು ನಿರ್ಲಕ್ಷಿಸುತ್ತಲೇ ಇದ್ದಳು. ವೈದ್ಯಕೀಯ ಪರೀಕ್ಷೆಯಲ್ಲಿ ಆರಂಭಿಕ ಹಂತದ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಇದರ ನಂತರ ಮಹಿಳೆಗೆ ಕಿಮೊಥೆರಪಿ, ಇಮ್ಯುನೊಥೆರಪಿ ಮತ್ತು ನೈಸರ್ಗಿಕ ಪೂರಕಗಳನ್ನು ನೀಡಲಾಯಿತು.
ಕೀಮೋಥೆರಪಿಯು ಗಡ್ಡೆಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಂಗಾಂಶ ಪುನನಿರ್ಮಾಣ ಸೇರಿದಂತೆ ಸ್ತನ ಉಳಿಸುವ ಶಸ್ತ್ರಚಿಕಿತ್ಸೆಯನ್ನು ಯಾವುದೇ ತೊಂದರೆಯಿಲ್ಲದೆ ರೋಬೋಟ್ ಸಹಾಯದಿಂದ ಮಾಡಲಾಯಿತು. ಕ್ಯಾನ್ಸರ್‌ನಿಂದಾಗಿ ತನ್ನ ಎರಡೂ ಸ್ತನಗಳನ್ನು ಕಳೆದುಕೊಳ್ಳುವ ಆತಂಕ ಮಹಿಳೆಗಿತ್ತು. ಆದರೆ ಚಿಕಿತ್ಸೆ ಬಳಿಕ ಮಹಿಳೆ ಮತ್ತೆ ಮಗುವಿಗೆ ಹಾಲುಣಿಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ 60 ವರ್ಷದ ಮಹಿಳೆಯ ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯನ್ನು ರೋಬೋಟಿಕ್ ತಂತ್ರವನ್ನು ಬಳಸಿ ಮಾಡಲಾಗಿದೆ. ಈಕೆಗೆ ಸ್ತನದಲ್ಲಿ ಮೂರು ಗಡ್ಡೆಗಳು ಬೆಳೆದಿದ್ದವು. ಸರ್ಜರಿ ಬಳಿಕ ಮಹಿಳೆ ಆರೋಗ್ಯವಾಗಿದ್ದಾಳೆ.
ಶಸ್ತ್ರಚಿಕಿತ್ಸೆಯಲ್ಲಿ , ಲ್ಯಾಟಿಸ್ಸಿಮಸ್ ಫ್ಲಾಪ್ ರೀಕನ್ಸ್‌ಟ್ರಕ್ಷನ್ ಅನ್ನು ಇದರಲ್ಲಿ ಬಳಸಲಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ ರೋಬೋಟ್‌ಗಳ ಬಳಕೆಯಿಂದ ಛಾಯಾಚಿತ್ರಗಳು ಹೆಚ್ಚು ನಿಖರವಾಗುತ್ತವೆ ಮತ್ತು ಛೇದನದ ಗಾತ್ರವು ಕಡಿಮೆಯಾಗುತ್ತದೆ. ರೋಬೋಟ್ ಅನ್ನು ಬದಿಯಿಂದ ಸ್ತನಕ್ಕೆ ಸೇರಿಸಲಾಗುತ್ತದೆ. ಇದು ಅಂಗಾಂಶವನ್ನು ತೆಗೆದುಹಾಕುತ್ತದೆ ಮತ್ತು ಸ್ತನವನ್ನು ಪುನರ್‌ನಿರ್ಮಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಸ್ತನದ ಚರ್ಮಕ್ಕೆ ಸಹ ಹಾನಿಯಾಗುವುದಿಲ್ಲ

Ads on article

Advertise in articles 1

advertising articles 2

Advertise under the article