ದಿಢೀರನೇ ಮದುವೆ ಘೋಷಿಸಿ ಆಮಂತ್ರಣ ಪತ್ರಿಕೆ ಆದ ಬಳಿಕ ಮದುವೆ ಆಗೋಲ್ಲ ಎಂದು ಟ್ವಿಸ್ಟ್ ನೀಡಿದ ನಟ
Monday, April 1, 2024
ಹೈದ್ರಾಬಾದ್: ಟಾಲಿವುಡ್ ನಟ ನವದೀಪ್, ಜೈ ಸಿನಿಮಾ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಸೆಕೆಂಡ್ ಹೀರೋ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಇದೀಗ ಅವರು ತಮ್ಮ ಮದುವೆ ಎಂದು ದಿಢೀರ್ ಎಂದು ಘೋಷಿಸಿದ್ದಾರೆ. ಜೊತೆಗೊಂದು ಟ್ವಿಸ್ಟ್ ಕೂಡಾ ಕೊಟ್ಟಿದ್ದಾರೆ.
2021ರಲ್ಲಿ ಮೊಸಗಲ್ಲು ಬಳಿಕ ಸಿನಿಮಾಗಳಿಂದ ದೂರ ಉಳಿದಿದ್ದ ನವದೀಪ್ ಅನೇಕ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡಿದ್ದರು. ಇಂತಹ ನವದೀಪ್ ಮತ್ತೆ ನಾಯಕನಾಗಿ ತೆರೆಯ ಮೇಲೆ ಬರಲಿದ್ದಾರೆ. 'ಲವ್ ಮೌಳಿ' ಸಿನಿಮಾ ಮೂಲಕ ನವದೀಪ್ ತಮ್ಮ ಹೊಸ ಆವೃತ್ತಿಯನ್ನು ತೋರಿಸುತ್ತಿದ್ದಾರೆ. ಇಂತಹ ನವದೀಪ್ ಮದುವೆ ಬಗ್ಗೆ ಕೇಳಿದರೆ ಇಲ್ಲ ಎನ್ನುತ್ತಾರೆ. ಆದರೆ ಲವ್ ಮೌಳಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದು ವೆಡ್ಡಿಂಗ್ ಕಾರ್ಡ್ ನೊಂದಿಗೆ ಎಂಬುದು ಗಮನಾರ್ಹ.
ನವದೀಪ್ ಇತ್ತೀಚೆಗೆ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಹಳದಿ ಬಣ್ಣದಲ್ಲಿ ಬರೆದಿದ್ದ ಚಿಕ್ಕ ಚೆಕ್ ಬಾಕ್ಸ್ ತೆರೆದು ಅದರಲ್ಲಿ ಮದುವೆ ಕಾರ್ಡ್ ತೋರಿಸಿ ಮದುವೆ ಕಾರ್ಡ್ ನಲ್ಲಿ ಮ್ಯಾಟರ್ ರೂಪದಲ್ಲಿ ತಮ್ಮ ಲವ್ ಮೌಳಿ ಸಿನಿಮಾದ ಬಗ್ಗೆ ಬರೆದು ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಲವ್ ಮೌಳಿ ಚಿತ್ರ ಎಪ್ರಿಲ್ 19 ರಂದು ಬಿಡುಗಡೆಯಾಗಲಿದೆ ಎಂದು ಅವರು ಘೋಷಿಸಿದರು.
ಮದುವೆ ಕಾರ್ಡ್ ನಲ್ಲಿ ಮದುಮಗನ ಜಾಗದಲ್ಲಿ ನವದೀಪ್ ಹೆಸರು, ಮದುಮಗಳ ಸ್ಥಾನದಲ್ಲಿ ಪಂಖುರಿ ಗಿದ್ವಾನಿ ಹೆಸರು ಇದೆ. ಮುಹೂರ್ತದಲ್ಲಿ ಸಿನಿಮಾ ರಿಲೀಸ್ ಡೇಟ್ ತೋರಿಸಲಾಗುತ್ತಿದೆ. ಮದುವೆ ಪತ್ರದ ಮೂಲಕ ನವದೀಪ್ ಸಿನಿಮಾ ರಿಲೀಸ್ ಲೆಟರ್ ಬಹಿರಂಗಪಡಿಸಿದ್ದಾರೆ. ಬಹುದಿನಗಳ ನಂತರ ಹೀರೋ ಆಗಿ ಕಮ್ ಬ್ಯಾಕ್ ಮಾಡುತ್ತಿರುವ ನವದೀಪ್ ತಮ್ಮ ಸಿನಿಮಾ ಪ್ರಚಾರ ಕಾರ್ಯಗಳನ್ನು ವಿನೂತನ ರೀತಿಯಲ್ಲಿ ನಿಭಾಯಿಸುತ್ತಿದ್ದಾರೆ. ಲವ್ ಮೌಳಿ ಸಿನಿಮಾದ ರಿಲೀಸ್ ಡೇಟ್ ಅನ್ನು ತಮ್ಮ ಮದುವೆಗೆ ಲಿಂಕ್ ಮಾಡಿ, ಇದನ್ನೇ ಶುಭ ಪತ್ರದ ರೂಪದಲ್ಲಿ ಬಿಟ್ಟಿದ್ದಾರೆ.
ಇತ್ತೀಚೆಗಷ್ಟೇ ಸಿನಿಮಾ ಪ್ರಮೋಷನ್‌ಗಳು ಹೊಸ ಹಾದಿ ಹಿಡಿದಿರುವುದು ಗೊತ್ತೇ ಇದೆ. ಆದರೆ ಒರಿಜಿನಲ್ ವೆಡ್ಡಿಂಗ್ ಕಾನ್ಸೆಪ್ಟ್ ಇಷ್ಟವಾಗದ ನವದೀಪ್ ತಮ್ಮ ಮುಂದಿನ ಸಿನಿಮಾದ ರಿಲೀಸ್ ಡೇಟ್ ಅನ್ನು ವೆಡ್ಡಿಂಗ್ ಕಾರ್ಡ್ ಮೂಲಕ ಘೋಷಿಸಿರುವುದು ಗಮನಾರ್ಹ. ಈ ರೀತಿ ಮದುವೆ ಕಾರ್ಡ್ ಹಾಕಿಕೊಂಡು ಪ್ರಮೋಷನ್ ಮಾಡುತ್ತಿದ್ದಾರೆ ಎಂದು ನೆಟಿಜನ್ ಗಳು ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.