-->
1000938341
ವಾಯುದಾಳಿಗೆ ಹಮಾಸ್ ಪ್ರಮುಖನ ಮೂವರು ಪುತ್ರರು, ಇಬ್ಬರು ಮೊಮ್ಮಕ್ಕಳು ಹತ್ಯೆ

ವಾಯುದಾಳಿಗೆ ಹಮಾಸ್ ಪ್ರಮುಖನ ಮೂವರು ಪುತ್ರರು, ಇಬ್ಬರು ಮೊಮ್ಮಕ್ಕಳು ಹತ್ಯೆಕೈರೋ: ಹಮಾಸ್ ಪ್ರಮುಖ ಇಸ್ಮಾಯಿಲ್ ಹನಿಯೆಹ್ ನ ಮೂರು ಮಂದಿ ಪುತ್ರರು ಹಾಗೂ ಇಬ್ಬರು ಮೊಮ್ಮಕ್ಕಳ ಮೇಲೆ ಗಾಝಾದಲ್ಲಿ ಇಸ್ರೇಲ್ ನಡೆಸಿದ್ದು, ಈ ವಾಯುದಾಳಿಗೆ ಈ ಐವರು ಬಲಿಯಾಗಿದ್ದಾರೆ ಎಂದು ಪ್ಯಾಲೆಸ್ತೀನ್ ಇಸ್ಲಾಮಿಸ್ಟ್ ಗ್ರೂಪ್ ಪ್ರಕಟಿಸಿದೆ.

ಗಾಝಾದ ಅಲ್-ಶತಿ ಶಿಬಿರದ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ವಾಯುದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಹಝೇಮ್, ಅಮೀರ್ ಹಾಗೂ ಮುಹಮ್ಮದ್ ಹತರಾಗಿದ್ದಾರೆ. ಅಲ್ಲದೆ ಇದರಲ್ಲಿ ಇಸ್ಮಾಯಿಲ್ ಇಬ್ಬರು ಮೊಮ್ಮಕ್ಕಳು ಕೂಡಾ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾಗಿ ಹಮಾಸ್ ಮಾಧ್ಯಮ ಹೇಳಿದೆ.

"ನಮ್ಮ ಬೇಡಿಕೆಗಳು ಸ್ಪಷ್ಟ ಮತ್ತು ನಿರ್ದಿಷ್ಟ. ಅವರಿಗೆ ಯಾವುದೇ ರಿಯಾಯಿತಿ ಇಲ್ಲ. ನನ್ನ ಮಕ್ಕಳ ರಕ್ತ, ಜನಸಾಮಾನ್ಯರ ರಕ್ತಕ್ಕಿಂತ ಹೆಚ್ಚೇನೂ ಅಲ್ಲ. ಸಂಧಾನದ ಮಾತುಕತೆಯ ಕೊನೆ ಹಂತದಲ್ಲಿರುವಾಗ ಅವರು ನಮ್ಮ ಮಕ್ಕಳನ್ನು ಗುರಿಯಾಗಿಸಿ ಹತ್ಯೆ ಮಾಡಿದ್ದಾರೆ. ಅವರಿಗೆ ಭ್ರಮನಿರಸನವಾಗಲಿದೆ. ಹಮಾಸ್ ತನ್ನ ನಿಲುವನ್ನು ಬದಲಿಸುವಂತೆ ನಾವು ಒತ್ತಡ ತರಲಿದ್ದೇವೆ' ಎಂದು ಅಲ್ ಜಝೀರಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಹನಿಯೆಹ್ ಎಚ್ಚರಿಕೆ ನೀಡಿದ್ದಾರೆ.

ಹಮಾಸ್ ನ ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯಲ್ಲಿ ಹನಿಯೆಹ್ ಅತ್ಯಂತ ಕಟುಮಾತಿಗೆ ಹೆಸರಾಗಿದ್ದು, ಗಾಝಾಪಟ್ಟಿಯಲ್ಲಿ ಇಸ್ರೇಲ್ ಜತೆಗಿನ ಯುದ್ಧದ ವೇಳೆ ನವೆಂಬರ್ ನಲ್ಲಿ ಇವರ ಕುಟುಂಬಕ್ಕೆ ಸೇರಿದ ಮನೆ ಧ್ವಂಸವಾಗಿತ್ತು.

Ads on article

Advertise in articles 1

advertising articles 2

Advertise under the article