-->
1000938341
ಕಿರ್ಗಿಸ್ತಾನದ ಹೆಪ್ಪುಗಟ್ಟಿದ ಜಲಾಶಯದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಕಿರ್ಗಿಸ್ತಾನದ ಹೆಪ್ಪುಗಟ್ಟಿದ ಜಲಾಶಯದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯ ಮೂಲದ ವಿದ್ಯಾರ್ಥಿ ಸಾವು

ಹೈದರಾಬಾದ್‌: ಕಿರ್ಗಿಸ್ತಾನದಲ್ಲಿ ಹೆಪ್ಪುಗಟ್ಟಿದ ಜಲಾಶಯದಲ್ಲಿ ಸಿಕ್ಕಿಹಾಕಿಕೊಂಡು ಆಂಧ್ರಪ್ರದೇಶದ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಹೈದರಾಬಾದ್ ನ ಅನಕಪಳ್ಳಿಯ ಮುದುಗುಲಾ ಗ್ರಾಮದ ದಾಸರಿ ಚಂದು (21) ಎಂಬ ವಿದ್ಯಾರ್ಥಿ ಮೃತಪಟ್ಟವರು. ಇವರು ದಾಸರಿ ಚಂದು ಅನಕಪಳ್ಳಿ ಎಂಬ ಪ್ರಖ್ಯಾತ ತಿನಸುಗಳ ಮಳಿಗೆಯ ಮಾಲಕ ದಾಸರಿ ಭೀಮರಾಜುರವರ ಪುತ್ರ.

 ಎರಡನೇ ವರ್ಷದ ಪರೀಕ್ಷೆ ಮುಗಿದ ಬಳಿಕ ಇವರು ಸ್ನೇಹಿತರೊಂದಿಗೆ ಎಪ್ರಿಲ್ 21ರಂದು ವಿಹಾರಕ್ಕೆ ತೆರಳಿದ್ದರು. ಆದರೆ ಚಂದು ಹೆಪ್ಪುಗಟ್ಟಿದ ಜಲಪಾತದ ಮಂಜುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿದ್ದಾರೆ. ಎಂಬಿಬಿಎಸ್ ಪದವಿ ಪಡೆಯಲು ಈ ವಿದ್ಯಾರ್ಥಿ ವರ್ಷದ ಹಿಂದೆ ಕಿರ್ಗಿಸ್ತಾನಕ್ಕೆ ತೆರಳಿದ್ದರು.

ಕಿರ್ಗಿಸ್ತಾನದ ಅಧಿಕಾರಿಗಳು, ವಿದ್ಯಾರ್ಥಿಯ ಪೋಷಕರಿಗೆ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ವಿದ್ಯಾರ್ಥಿಯ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಪೋಷಕರು ಅನಕಪಳ್ಳಿ ಸಂಸದ ಬಿ.ವೆಂಕಟ ಸತ್ಯವತಿಯವರ ನೆರವು ಕೋರಿದ್ದಾರೆ. ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಕೂಡಾ ಈ ಬಗ್ಗೆ ಎಂಇಎ ಜತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article