-->
1000938341
ಬಟ್ಟೆ ಸರಿ ಮಾಡಿದ್ದನ್ನು ಝೂಮ್‌ ಮಾಡಿ ಫೋಟೊ ವೀಡಿಯೊ ಮಾಡಿದ ಪಾಪರಾಜಿಗಳು - ಗರಂ ಆದ ನಟಿ ಆಯೀಷಾ ಖಾನ್

ಬಟ್ಟೆ ಸರಿ ಮಾಡಿದ್ದನ್ನು ಝೂಮ್‌ ಮಾಡಿ ಫೋಟೊ ವೀಡಿಯೊ ಮಾಡಿದ ಪಾಪರಾಜಿಗಳು - ಗರಂ ಆದ ನಟಿ ಆಯೀಷಾ ಖಾನ್


ಮುಂಬಯಿ: ಬಿಗ್‌ ಬಾಸ್‌ ಖ್ಯಾತಿಯ ನಟಿ ಆಯೀಷಾ ಖಾನ್ ಸೋಶಿಯಲ್‌ ಮೀಡಿಯಾದಲ್ಲಿ ಬಾಲಿವುಡ್ ಮಾಧ್ಯಮಗಳ ವಿರುದ್ಧ ಪೋಸ್ಟ್ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್‌ನಲ್ಲಿ ಸೆಲೆಬ್ರಿಟಿ ಫೋಟೋಗ್ರಾಫಿಗಳಿರುತ್ತಾರೆ. ಇವರನ್ನು ಪಾಪರಾಜಿಗಳೆಂದು ಕರೆಯುತ್ತಾರೆ. ಈ ಪಾಪರಾಜಿಗಳು ಕೆಲವೊಮ್ಮೆ ಸೆಲೆಬ್ರಿಟಿಗಳಿಗೆ ತಲೆನೋವಾಗುತ್ತಾರೆ. ಆದರೆ ಸೆಲೆಬ್ರಿಟಿಗಳ ಬೇರೆ ಬೇರೆ ಭಂಗಿಗಳನ್ನು ಕ್ಲಿಕ್ಕಿಸಿ ಸೋಶಿಯಲ್‌ ಮೀಡಿಯಾದಲ್ಲಿ ಪಾಪಾರಾಜಿ ಅಪ್ಲೋಡ್‌ ಮಾಡುತ್ತಾರೆ.‌ ಪಾಪರಾಜಿಗಳ ಈ ವರ್ತನೆಗೆ ಅನೇಕ ಸೆಲೆಬ್ರಿಟಿಗಳು ಗರಂ ಆಗುವುದುಂಟು ಎಂದು ಆಯೀಷಾ ಖಾನ್‌ ಹರಿಹಾಯ್ದಿದ್ದಾರೆ.

ತಾವು ಬಟ್ಟೆ ಸರಿ ಮಾಡುವ ವೇಳೆ ಝೂಮ್‌ ಮಾಡಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆಹಿಡಿಯುವ ಮಾಧ್ಯಮಗಳ ವಿರುದ್ಧ ಆಯೀಷಾ ಖಾನ್‌ ಗರಂ ಆಗಿದ್ದಾರೆ. ಒಬ್ಬ ಮಹಿಳೆ ತನಗೆ ಯಾವ ಹೆದರಿಕೆ ಇಲ್ಲದೆ ಬಟ್ಟೆ ಹಾಕುವ ಹಾಗಿಲ್ವಾ. ಯಾವ ಆ್ಯಂಗಲ್ ನಿಂದ ಯಾವಾಗ ಬೇಕಾದರೂ ಫೋಟೋ ಸೆರೆಹಿಡಿಯುತ್ತಾರೆ ಅನ್ನೋದು ಗೊತ್ತಾಗಲ್ಲ. ಒಬ್ಬ ಮಹಿಳೆ ತನ್ನ ಕಾರಿನಿಂದ ಹೊರಬರುವ ಮೊದಲು ತನ್ನ ಉಡುಪನ್ನು ಸರಿ ಹೊಂದಿಸುತ್ತಿದ್ದಾಳೆ. ನೀವು ಆ ಕ್ಷಣವನ್ನು ಸೆರೆಹಿಡಿದು ಪೋಸ್ಟ್ ಮಾಡಲು ಬಯಸುತ್ತೀರಿ. ಆ ಮಹಿಳೆ ಹಿಂದುಗಡೆಯಿಂದ ಫೋಟೋ ತೆಗೆಯಬೇಡಿ ಹೇಳುತ್ತಾಳೆ ಆದರೆ ನೀವು ಸ್ವಲ್ಪ ಸ್ವಲ್ಪ ಅಂಥ ಫೋಟೋ ಸೆರೆ ಹಿಡಿಯುತ್ತೀರಿ. ನಮ್ಮ ಕೆಲವು ಮಾಧ್ಯಮ ಸಂಸ್ಥೆಗಳಿಗೆ ಮೂಲಭೂತ ನಡವಳಿಕೆಗಳು ಕಲಿಯಬೇಕಾಗಿದೆ ”ಎಂದು ಅವರು ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.


Ads on article

Advertise in articles 1

advertising articles 2

Advertise under the article