-->
1000938341
"ಜೈ ಶ್ರೀರಾಮ್ ನೋ, ಓನ್ಲೀ ಅಲ್ಲಾ.. ಅಲ್ಲಾ ಹು ಅಕ್ಟರ್" ಎಂದು ಹಲ್ಲೆ - ಅಪ್ರಾಪ್ತ ಸೇರಿದಂತೆ ಮೂವರು ಅರೆಸ್ಟ್

"ಜೈ ಶ್ರೀರಾಮ್ ನೋ, ಓನ್ಲೀ ಅಲ್ಲಾ.. ಅಲ್ಲಾ ಹು ಅಕ್ಟರ್" ಎಂದು ಹಲ್ಲೆ - ಅಪ್ರಾಪ್ತ ಸೇರಿದಂತೆ ಮೂವರು ಅರೆಸ್ಟ್


ಬೆಂಗಳೂರು: ಶ್ರೀರಾಮನವಮಿ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಜೈಶ್ರೀರಾಮ್ ಘೋಷಣೆ ಕೂಗಿದ್ದ ಮೂವರು ಹಿಂದೂ ಯುವಕರನ್ನು ಅಡ್ಡಗಟ್ಟಿದ ಮುಸ್ಲಿಂ ಯುವಕರ ಗುಂಪೊಂದು "ಜೈ ಶ್ರೀರಾಮ್ ನೋ, ಓನ್ಲೀ ಅಲ್ಲಾ.. ಅಲ್ಲಾ ಹು ಅಕ್ಟರ್" ಎಂದು ಹೇಳಬೇಕೆಂದು ಹಲ್ಲೆಗೈದ ಘಟನೆ ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿಯಲ್ಲಿ ನಡೆದಿದೆ.

ಮೂವರು ಯುವಕರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾರೆ. ಈ ವೇಳೆ ಅದೇ ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ಯುವಕರಿಬ್ಬರು ಕಾರನ್ನು ತಡೆದು ಗಲಾಟೆ ಆರಂಭಿಸಿದ್ದಾರೆ. ಕಾರಿನ ಬಳಿ ಬಂದು ಯುವಕರು "ಇಲ್ಲಿ ಜೈ ಶ್ರೀ ರಾಮ್ ಇಲ್ಲಾ... ಒನ್ಲೀ ಅಲ್ಲಾ... ಅಲ್ಲಾ ಹು ಅಕ್ಟರ್" ಎಂದು ಹೇಳಬೇಕು ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.

ಕಾರಿನಲ್ಲಿ ಕುಳಿತಿದ್ದ ಹಿಂದೂ ಯುವಕರು ನಮ್ಮ ಹಬ್ಬ ನಾವು ಘೋಷಣೆ ಕೂಗುತ್ತೇವೆ. ನಾವು ನಿಮ್ಮ ಹಬ್ಬದಲ್ಲಿ ಹೀಗೆ ಮಾಡ್ತೀವಾ? ನಿಮ್ಮ ಹಬ್ಬದಲ್ಲಿ ಬಂದು ನಾವು ಪ್ರಶ್ನೆ ಮಾಡ್ತೀವಾ? ಎಂದು ಕೇಳಿದ್ದಾರೆ. ಆಗ ಮುಸ್ಲಿಂ ಯುವಕರು ಕಾರಿನಲ್ಲಿದ್ದವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು ಎರಡೂ ಕಡೆಯವರು ಬೀದಿಯಲ್ಲಿ ಹೊಡೆದಾಡಿದ್ದಾರೆ. ಮುಸ್ಲಿಂ ಯುವಕರೊಂದಿಗೆ ಅಲ್ಲಿಯೇ ಇದ್ದ ಮತ್ತಿಬ್ಬರು ಸೇರಿದ್ದು ಕಾರಿನಲ್ಲಿ ಬಂದಿದ್ದವರ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ನಂತರ ಕಾರಿನಲ್ಲಿದ್ದ ಯುವಕರು ವಿದ್ಯಾರಣ್ಯಪುರ ಪೊಲೀಸ್‌ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ.

ಸದ್ಯ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಫರ್ಮಾನ್, ಸಮೀರ್ ಹಾಗೂ ಓರ್ವ ಅಪ್ರಾಪ್ತ ಬಂಧಿತ ಆರೋಪಿಗಳು. ಈ ಬಗ್ಗೆ ಐಪಿಸಿ ಸೆಕ್ಷನ್ 295a, 298, 143, 147, 504,324, 326, 149, 506 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 

Ads on article

Advertise in articles 1

advertising articles 2

Advertise under the article