ರಸ್ತೆಬದಿ ನಿಂತಿದ್ದ ವಾಹನಕ್ಕೆ ಬೊಲೆರೋ ಢಿಕ್ಕಿಯಾಗಿ ಮೂವರು ಮೃತ್ಯು - 25 ಕುರಿಗಳು ಸಾವು
Wednesday, April 3, 2024
ಹಾವೇರಿ: ರಸ್ತೆಬದಿ ನಿಂತಿದ್ದ ವಾಹನಕ್ಕೆ ಕುರಿಗಳು ತುಂಬಿಸಿದ್ದ ಬೊಲೆರೊ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಮೂವರು ಸೇರಿದಂತೆ 25 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಬಳಿ ನಡೆದಿದೆ ಎಂದು ವರದಿಯಾಗಿದೆ.
ರಾಣೆಬೆನ್ನೂರು ತಾಲೂಕಿನ ಕಾಕೋಳ ಗ್ರಾಮದ ಗುಡ್ಡಪ್ಪ ಕೈದಾಳಿ(40), ಮೈಲಾರಪ್ಪ ಕೈದಾಳಿ(41), ಶಿವರಾಜ್ ಹೊಳೆಪ್ಪನವರ(22) ಮೃತಪಟ್ಟವರು.
ಬೆಳಗಾವಿಯಿಂದ ಹಾವೇರಿ ಜಿಲ್ಲೆಯ ಕಾಕೋಳ ಗ್ರಾಮಕ್ಕೆ ಬರುವ ಮಾರ್ಗ ಮಧ್ಯ ಊ ಅಪಘಾತ ನಡೆದಿದೆ. ಘಟನೆಯಲ್ಲಿ ಬೀರಪ್ಪ ದೊಡ್ಡಚಿಕ್ಕಣ್ಣನವರ, ನಿಂಗರಾಜ್ ಹಿತ್ತಲಮನಿ ಮತ್ತಯ ನಿಂಗಪ್ಪ ಕೊರಗುಂದ ಎಂಬವರಿಗೆ ಗಂಭೀರ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ದಾವಣಗೆರೆ ಮತ್ತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬಂಕಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.