ನಿಯಂತ್ರಣ ತಪ್ಪಿ ಉರುಳಿಬಿದ್ದ ಶಾಲಾ ಬಸ್: ಆರು ಮಕ್ಕಳು ಮೃತ್ಯು, 20ಕ್ಕೂ ಅಧಿಕ ಮಂದಿಗೆ ಗಾಯ


ಚಂಡೀಗಢ: ಶಾಲಾ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಆರು ಮಕ್ಕಳು ಮೃತಪಟ್ಟು 20ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಹರ್ಯಾಣಾದ ನರ್ನೌಲ್ ನಲ್ಲಿ ಬುಧವಾರ ನಡೆದಿದೆ.

ಈ ಬಸ್‌ ಉನ್ಹಾನಿ ಗ್ರಾಮದ ಜಿ ಎಲ್ ಪಬ್ಲಿಕ್ ಸ್ಕೂಲ್‌ಗೆ ಸೇರಿದ್ದಾಗಿದೆ ಎಂದು ತಿಳಿದು ಬಂದಿದೆ. ಶಾಲಾ ಬಸ್ ಚಾಲಕ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡ ಪರಿಣಾಮ ಬಸ್‌ ಮರಕ್ಕೆ ಢಿಕ್ಕಿ ಹೊಡೆದಿದೆ. ಬಸ್‌ ಚಾಲಕ ಮದ್ಯದ ನಶೆಯಲ್ಲಿದ್ದಿರಬಹುದು ಎಂಬ ಶಂಕೆಯಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಹೇಳಿದ್ದಾರೆ.

ಗಾಯಾಳು ವಿದ್ಯಾರ್ಥಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಬಸ್‌ನ ಫಿಟೈಸ್ ಪ್ರಮಾಣಪತ್ರ ಆರು ವರ್ಷಗಳ ಹಿಂದೆ, 2018ರಲ್ಲಿ ಅವಧಿ ಮೀರಿದೆ ಎಂದು ತಿಳಿದು ಬಂದಿದೆ. ಅಲ್ಲದೆ ಈದ್-ಉಲ್-ಫಿತರ್ ರಜೆ ಇದ್ದರೂ ಶಾಲೆ ಕಾರ್ಯಾಚರಿಸುತ್ತಿತ್ತು ಎನ್ನಲಾಗಿದೆ.